ಹೊಸದುರ್ಗದಲ್ಲಿ ಗ್ಯಾರವಿ ಹಬ್ಬ

| Published : Oct 18 2024, 12:11 AM IST

ಸಾರಾಂಶ

Garavi festival in Hosdurga

ಹೊಸದುರ್ಗ: ಗ್ಯಾರವಿ ಹಬ್ಬದ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂ ಸಮುದಾಯದವರು ಹಸಿರು ಬಣ್ಣದ ಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತ ಮುಸ್ಲಿಮರು ತಮ್ಮ ಮನೆಗಳಲ್ಲಿ ಹಸಿರು ಬಾವುಟಗಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ನಂತರ ಸಾಮೂಹಿಕವಾಗಿ ಮೆರವಣಿಗೆ ನಡೆಸಿದರು. ಅಂತಿಮವಾಗಿ ಪಟ್ಟಣದ ಹೊಳಲ್ಕೆರೆ ರಸ್ತೆಯಲ್ಲಿರುವ ಖಬರಾಸ್ಥಾನಕ್ಕೆ ಆಗಮಿಸಿ, ಪ್ರಾರ್ಥನೆ ಸಲ್ಲಿಸಿ ಮರಗಳಿಗೆ ಹಸಿರು ಬಾವುಟ ಕಟ್ಟಿ ಹರಕೆ ತೀರಿಸಿದರು. ಈ ವೇಳೆ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಹಮದ್‌ ಮಜೀದ್‌, ಕಾರ್ಯದರ್ಶಿ ಭಾಸ್ಕರ್‌ ಪ್ರಸಾದ್‌, ಜಿಲ್ಲಾಧ್ಯಕ್ಷ ಬಾಳೇಕಾಯಿ ಸೀನ, ಕಾಂಗ್ರೆಸ್‌ ಯುವ ಮುಖಂಡ ಅರಣ್‌ ಗೋವಿಂದಪ್ಪ, ಪುರಸಭಾ ಸದಸ್ಯ ಜಾಫರ್‌ ಸಾಧಿಕ್‌, ಪುರಸಭೆ ಮಾಜಿ ಆಧ್ಯಕ್ಷ ಜಬೀವುಲ್ಲಾ ಸೇರಿದಂತೆ ನೂರಾರು ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

-----

15ಎಚ್‌ಎಸ್‌ಡಿ2: ಹೊಸದುರ್ಗದಲ್ಲಿ ಗ್ಯಾರವಿ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಹಸಿರು ಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಿದರು.