ಸಾರಾಂಶ
ನಗರದ ವಿವಿಧೆಡೆ ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಕಾಯಕವನ್ನು ನಿರ್ವಹಿಸುತ್ತಿರುವ ಶಾಂತಿನಗರದ ರಾಣಿಯಮ್ಮ ಸಚಿವ ಡಾ ಎಂ.ಸಿ.ಸುಧಾಕರ್ ಬೆಂಬಲಿತರಾಗಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ನಗರಸಭೆಯ ಉಪಾಧ್ಯಕ್ಷೆ ಹುದ್ದೆ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಸಚಿವ ಸುಧಾಕರ್ ಬಣದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ರೇಖಾ ಉಮೇಶ್ ಹಾಗೂ ರಾಣಿಯಮ್ಮಗೆ ಮಾತ್ರ ಅವಕಾಶವಿದ್ದು, ರಾಣಿಯಮ್ಮರಿಗೆ ಉಪಾಧ್ಯಕ್ಷೆ ಹುದ್ದೆ ಒಲಿದು ಬಂದಿದೆ
ಚಿಂತಾಮಣಿ: ನಗರದ ವಿವಿಧೆಡೆ ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಕಾಯಕವನ್ನು ನಿರ್ವಹಿಸುತ್ತಿರುವ ಶಾಂತಿನಗರದ ರಾಣಿಯಮ್ಮ ಸಚಿವ ಡಾ ಎಂ.ಸಿ.ಸುಧಾಕರ್ ಬೆಂಬಲಿತರಾಗಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. ನಗರಸಭೆಯ ಉಪಾಧ್ಯಕ್ಷೆ ಹುದ್ದೆ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಸಚಿವ ಸುಧಾಕರ್ ಬಣದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ರೇಖಾ ಉಮೇಶ್ ಹಾಗೂ ರಾಣಿಯಮ್ಮಗೆ ಮಾತ್ರ ಅವಕಾಶವಿದ್ದು, ರಾಣಿಯಮ್ಮರಿಗೆ ಉಪಾಧ್ಯಕ್ಷೆ ಹುದ್ದೆ ಒಲಿದು ಬಂದಿದೆ.
ಉಪಾಧ್ಯಕ್ಷೆ ರಾಣಿಯಮ್ಮ ಮಾತನಾಡಿ, ನಾನು ಮನೆ-ಮನೆ ಬಾಗಿಲಿಗೆ ಭೇಟಿ ನೀಡಿ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಕಳೆದ ನಗರಸಭೆ ಚುನಾವಣೆಯಲ್ಲಿ ಸಚಿವ ಡಾ.ಎಂ. ಸಿ ಸುಧಾಕರ್ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟರು, ನನ್ನ ವಾರ್ಡಿನ ಜನತೆ ನನ್ನ ಕೈ ಹಿಡಿದು ಚುನಾವಣೆಯಲ್ಲಿ ಗೆಲ್ಲಿಸಿದ್ದರಿಂದ ಉಪಾಧ್ಯಕ್ಷೆಯಾಗಿದ್ದು, ನನ್ನಂತಹವರನ್ನು ಇಂತಹ ಹುದ್ದೆಗೆ ಆಯ್ಕೆ ಮಾಡಿದ ಸಚಿವರು ಹಾಗೂ ವಾರ್ಡಿನ ಜನತೆಗೆ ಸದಾ ಚಿರಋಣಿಯಾಗಿರುತ್ತೇನೆ ಎಂದರು.