ಸಾರಾಂಶ
ರೈತರು ಮುಖ್ಯಮಂತ್ರಿಗೆ ನೀಡಿದ್ದ ಮನವಿ ಪತ್ರಗಳನ್ನು ಕಸದ ಬುಟ್ಟಿಗೆ ಹಾಕಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು
ಗುಂಡ್ಲುಪೇಟೆ: ರೈತರು ಮುಖ್ಯಮಂತ್ರಿಗೆ ನೀಡಿದ್ದ ಮನವಿ ಪತ್ರಗಳನ್ನು ಕಸದ ಬುಟ್ಟಿಗೆ ಹಾಕಿದ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ರೈಸ ತಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಆಗ್ರಹಿಸಿದರು. ಪತ್ರಕರ್ತರೊಂದಿಗೆ ಮಾತನಾಡಿ ಸಿಎಂಗೆ ನೀಡಿದ ಮನವಿ ಪತ್ರಗಳು ಕಸದ ರಾಶಿಯಲ್ಲಿ ದೊರೆತಿರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ ಕ್ಷಮೆ ಕೋರದಿದ್ದಲ್ಲಿ ಸಿಎಂ ಪ್ರತಿಕೃತಿ ದಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಕೂಡ ಈ ವಿಚಾರದಲ್ಲಿ ಉಡಾಫೆ ಉತ್ತರ ನೀಡಿದ್ದಾರೆ. ಹಾಗಾಗಿ ಸಚಿವರು ಬರುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಹಿಡಿಯಬೇಕಾಗುತ್ತದೆ ಎಂದರು. ರೈತಸಂಘದ ಮುಖಂಡರಾದ ಕುಂದಕೆರೆ ಸಂಪತ್ತು, ಮಹೇಶ್, ಗುರು, ಲೋಕೇಶ್ ಕಂದೇಗಾಲ ಸೇರಿದಂತೆ ಹಲವರಿದ್ದರು.