ಪ್ರತಿ ವರ್ಷ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ನಗರದಲ್ಲಿ ಹರಡಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕುರಿತು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕದ ನಿರ್ವಹಣೆ ಮಾಡಬೇಕು.
ಧಾರವಾಡ:
ಇಲ್ಲಿಯ ಹೊಸಯಲ್ಲಾಪುರ ಬಳಿಯಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ನಗರದ ವಿವಿಧೆಡೆ ಹರಡಿಕೊಂಡು ಜನರು ಪರದಾಡುವ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಶಿವಸೇನೆ ಮುಖಂಡರು ಮಹಾನಗರ ಪಾಲಿಕೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಟೋಲನಾಕಾ, ವಿದ್ಯಾಗಿರಿ, ಲಕ್ಷ್ಮೀ ನಗರ, ಜನ್ನತ್ ನಗರ, ಹೊಸಯಲ್ಲಾಪೂರ, ನವಲೂರ ಆಗಸಿ, ಯಾಲಕ್ಕಿ ಶೆಟ್ಟರ್ ಕಾಲನಿ, ಶಿವಾನಂದ ನಗರ, ಚಪ್ಪರ ಬಂದ್ ಕಾಲನಿ, ರಾಮನಗರ ಸುತ್ತಲಿನ ಪ್ರದೇಶದಲ್ಲಿನ ಜನರು ಆಗುತ್ತಿರುವ ತೊಂದರೆ ನಿವಾರಿಸಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ವರ್ಷ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ನಗರದಲ್ಲಿ ಹರಡಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕುರಿತು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕದ ನಿರ್ವಹಣೆ ಮಾಡಬೇಕು ಹಾಗೂ ಕಸ ವಿಲೇವಾರಿ ಘಟಕವನ್ನು ನಗರದಿಂದ ದೂರ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಶಿವಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಸಿದ್ಧಾರ್ಥ ಶಿವಶರಣ, ಭರತ್ ಸಾವಂತ್, ಆರತಿ ಪಾಟೀಲ, ಭಾರತಿ ಕದಂ, ಅಕ್ಷಯ ಕದಂ ಇದ್ದರು.