ಮುಖ್ಯರಸ್ತೆ ಬದಿ ರಾಶಿ ಕಸ: ಕ್ರಮಕ್ಕೆ ಒತ್ತಾಯ

| Published : Mar 22 2024, 01:06 AM IST

ಮುಖ್ಯರಸ್ತೆ ಬದಿ ರಾಶಿ ಕಸ: ಕ್ರಮಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆಯ ಎಲೆಕಲ್ಲು ಮೀಸಲು ಅರಣ್ಯ ಬದಿಯಲ್ಲಿ ಅಪರಿಚಿತರು ದಿನನಿತ್ಯ ರಾಶಿ, ರಾಶಿ ಕಸ ಎಸೆದು ಹೋಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಬಾಳೆಹೊನ್ನೂರು-ಚಿಕ್ಕಮಗಳೂರು ಮುಖ್ಯರಸ್ತೆಯ ಎಲೆಕಲ್ಲು ಮೀಸಲು ಅರಣ್ಯ ಬದಿಯಲ್ಲಿ ಅಪರಿಚಿತರು ದಿನನಿತ್ಯ ರಾಶಿ, ರಾಶಿ ಕಸ ಎಸೆದು ಹೋಗುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಾಳೆಹೊನ್ನೂರಿನಿಂದ ಚಿಕ್ಕಮಗಳೂರಿಗೆ ತೆರಳುವ ಮುಖ್ಯರಸ್ತೆಯ ಎಲೆಕಲ್ಲು ಅರಣ್ಯ ಬದಿಯಲ್ಲಿ ಕೆಲವರು ನಿತ್ಯ ಬೇಕಾ ಬಿಟ್ಟಿ ಕಸ ಎಸೆಯುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಕ್ರಮಕೈಗೊಂಡು ಕಸ ಹಾಕುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಪಟ್ಟಣದ ಕೆಲವು ಅಂಗಡಿ ಮುಂಗಟ್ಟು, ಮನೆಗಳ ಮಾಲೀಕರು ಸ್ಥಳೀಯವಾಗಿ ಒಟ್ಟಾಗುವ ಕಸವನ್ನು ಮೀಸಲು ಅರಣ್ಯ ಬದಿಯಲ್ಲಿ ತಂದು ಹಾಕುವಿದರಿಂದ ಹಲವು ಕಡೆಗಳಲ್ಲಿ ಗಬ್ಬು ನಾರುತ್ತಿದೆ. ಇನ್ನು ಕೆಲವೆಡೆ ಕೋಳಿ ತ್ಯಾಜ್ಯ, ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ಗಳನ್ನು ಬೇಕಾಬಿಟ್ಟಿಯಾಗಿ ಎಸೆದು ಹೋಗುತ್ತಿದ್ದಾರೆ.

ಇದರಿಂದ ಪರಿಸರ ಮಲಿನವಾಗಿ, ವನ್ಯಜೀವಿಗಳಿಗೂ ಸಮಸ್ಯೆಯಾಗುತ್ತಿದೆ. ಕಸ ಕೊಳೆತ ದುರ್ನಾತದಿಂದ ಮುಖ್ಯ ರಸ್ತೆಯಲ್ಲಿ ತಿರುಗಾಡದ ಪರಿಸ್ಥಿತಿ ಎದುರಾಗಿದೆ.

ಅರಣ್ಯ ಸಿಬ್ಬಂದಿ ರಾತ್ರಿ ಗಸ್ತು ತಿರುಗುವ ಮೂಲಕ ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಮುಖ್ಯರಸ್ತೆ ವಿವಿಧ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ದುಷ್ಕರ್ಮಿಗಳ ಪತ್ತೆಗೆ ಮುಂದಾಗಬೇಕು ಎಂದು ಭಗವತಿಪುರದ ನಯನಾ ಒತ್ತಾಯಿಸಿದ್ದಾರೆ.-ಕೋಟ್-

ರಾತ್ರಿ ವೇಳೆಯಲ್ಲಿ ದುಷ್ಕರ್ಮಿಗಳು ಅರಣ್ಯ ಪ್ರದೇಶದಲ್ಲಿ ಕಸ ತಂದು ಹಾಕುತ್ತಿದ್ದು, ಈ ಬಗ್ಗೆ ಇಲಾಖೆಯಿಂದ ರಾತ್ರಿ ಗಸ್ತು ಹೆಚ್ಚಿಸಲಾಗುವುದು. ಈ ಬಗ್ಗೆ ಆಯಾ ವ್ಯಾಪ್ತಿ ಗ್ರಾಮ ಪಂಚಾಯಿತಿಗಳಿಗೂ ತಿಳಿಸಲಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುವುದು. ಪೊಲೀಸ್ ಇಲಾಖೆಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು.

ಎಂ.ಸಂದೀಪ್, ಆರ್.ಎಫ್.ಓ, ಬಾಳೆಹೊನ್ನೂರು ವಲಯ.೨೦ಬಿಹೆಚ್‌ಆರ್ ೪:

ಬಾಳೆಹೊನ್ನೂರಿನಿಂದ ಚಿಕ್ಕಮಗಳೂರು ತೆರಳುವ ಎಲೆಕಲ್ಲು ಮೀಸಲು ಅರಣ್ಯದ ಬಳಿ ಮುಖ್ಯರಸ್ತೆ ಬದಿ ಕಸ ಎಸೆದಿರುವುದು.

೨೦ಬಿಹೆಚ್‌ಆರ್ ೫: ಸಂದೀಪ್ (ಆರ್ ಎಫ್ ಓ)