ಕೊಪ್ಪತಾನು ವಾಸಿಸುವುದು ಒಂದು ಪುಟ್ಟ ಗುಡಿಸಲಿನಂತಹ ಮನೆಯಲ್ಲಿ. ದಿನವಿಡೀ ಗಾರೆ ಕೆಲಸ, ದಿನಗೂಲಿ ಮಾಡಿ ಬೆವರು ಸುರಿಸಿದರಷ್ಟೇ ಸಂಜೆಯ ಹೊತ್ತಿನ ಊಟದ ವ್ಯವಸ್ಥೆ. ಆದರೆ, ಈ ದಿನಗೂಲಿ ಕಾಯಕಯೋಗಿಯ ಎದೆಯಾಳದಲ್ಲಿ ಮಾತ್ರ ಸಾವಿರಾರು ಬಡ ಮಕ್ಕಳ ಭವಿಷ್ಯ ರೂಪಿಸುವ ಮಹಾಸಂಕಲ್ಪ ಮನೆಮಾಡಿದೆ.
36,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಾಯಕಯೋಗಿಯ ನಿಸ್ವಾರ್ಥ ನೆರವು
ಕನ್ನಡಪ್ರಭ ವಾರ್ತೆ ಕೊಪ್ಪತಾನು ವಾಸಿಸುವುದು ಒಂದು ಪುಟ್ಟ ಗುಡಿಸಲಿನಂತಹ ಮನೆಯಲ್ಲಿ. ದಿನವಿಡೀ ಗಾರೆ ಕೆಲಸ, ದಿನಗೂಲಿ ಮಾಡಿ ಬೆವರು ಸುರಿಸಿದರಷ್ಟೇ ಸಂಜೆಯ ಹೊತ್ತಿನ ಊಟದ ವ್ಯವಸ್ಥೆ. ಆದರೆ, ಈ ದಿನಗೂಲಿ ಕಾಯಕಯೋಗಿಯ ಎದೆಯಾಳದಲ್ಲಿ ಮಾತ್ರ ಸಾವಿರಾರು ಬಡ ಮಕ್ಕಳ ಭವಿಷ್ಯ ರೂಪಿಸುವ ಮಹಾಸಂಕಲ್ಪ ಮನೆಮಾಡಿದೆ.
ಇದು ಕೊಪ್ಪ ತಾಲೂಕಿನ ಗುಣವಂತೆ ಗ್ರಾಮದ ನಿವಾಸಿ, ಎಲ್ಲರೂ ಪ್ರೀತಿಯಿಂದ ‘ಗಾರೆ ಗೋಪಾಲ್’ ಎಂದೇ ಕರೆಯುವ ಗೋಪಾಲ್ ಅವರ ನಿಸ್ವಾರ್ಥ ಕಾಯಕದ ಯಶೋಗಾಥೆ.7ನೇ ತರಗತಿಗೆ ನಿಂತ ಓದು, ಚಿಗುರಿದ ಹೊಸ ಸಂಕಲ್ಪ:
ಮನೆಯಲ್ಲಿನ ಕಡುಬಡತನ, ಕಷ್ಟ ಹಾಗೂ ಅನಿವಾರ್ಯತೆಗಳಿಂದಾಗಿ ಗೋಪಾಲ್ ಅವರ ಶಾಲಾ ಶಿಕ್ಷಣ 7ನೇ ತರಗತಿಗೇ ಮೊಟಕುಗೊಂಡಿತು. ತಾನು ಕಲಿಯಲಾಗಲಿಲ್ಲ ಎಂಬ ಕೊರಗು ಅವರಲ್ಲಿ ಶಾಶ್ವತವಾಗಿ ಉಳಿಯಿತು. ಆದರೆ, ಆ ನೋವನ್ನು ಕೇವಲ ನೆನಪಾಗಿ ಉಳಿಸಿಕೊಳ್ಳದೆ "ನನ್ನಂತೆ ಬಡತನದ ಕಾರಣಕ್ಕೆ ಸಮಾಜದ ಯಾವ ಮಗುವೂ ಅಕ್ಷರ ಜ್ಞಾನದಿಂದ ವಂಚಿತವಾಗಬಾರದು " ಎಂದು ಸುಮಾರು 18 ವರ್ಷಗಳ ಹಿಂದೆಯೇ ಗಟ್ಟಿಯಾದ ಸಂಕಲ್ಪ ಮಾಡಿದರು. ಅಂದಿನಿಂದ ಇಂದಿನವರೆಗೆ ತಮ್ಮ ದುಡಿಮೆ ಬಹುಪಾಲು ಪಾಲನ್ನು ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಧಾರೆ ಎರೆಯುತ್ತಿದ್ದಾರೆ.36,000ಕ್ಕೂ ಹೆಚ್ಚು ಮಕ್ಕಳಿಗೆ ಅಕ್ಷರ ಆಸರೆ:
ದಿನದ ದುಡಿಮೆ ಹಣವನ್ನು ತನಗಾಗಿ ಕೂಡಿಟ್ಟುಕೊಳ್ಳುವ ಬದಲು, ಶಾಲಾ ಬ್ಯಾಗು, ಪೆನ್ನು, ಪುಸ್ತಕ, ನೋಟ್‌ಬುಕ್ ಹಾಗೂ ಸಮವಸ್ತ್ರಗಳನ್ನು ಖರೀದಿಸಿ ಬಡ ವಿದ್ಯಾರ್ಥಿಗಳಿಗೆ ಹಂಚುತ್ತಾ ಬಂದಿದ್ದಾರೆ. ಕಳೆದ 18 ವರ್ಷಗಳ ನಿರಂತರ ಪರಿಶ್ರಮ ದಿಂದ ಇದುವರೆಗೆ 36,000ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಪರಿಕರ ವಿತರಿಸಿ, ಅವರ ಮೊಗದಲ್ಲಿ ನಗು ಅರಳಿಸಿದ್ದಾರೆ. ಯಾವುದೇ ಪ್ರಚಾರ, ಪ್ರಶಸ್ತಿ ಅಥವಾ ಸ್ವಹಿತಾಸಕ್ತಿ ಹಂಬಲವಿಲ್ಲದೆ ಸದ್ದಿಲ್ಲದೆ ಸಾಗುತ್ತಿರುವ ಇವರ ಈ ಸೇವೆ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಿದೆ.-- ಬಾಕ್ಸ್--
1 ಲಕ್ಷ ಮಕ್ಕಳನ್ನು ತಲುಪುವ ಗುರಿ "ಬಡ ಮಕ್ಕಳ ಮುಖದಲ್ಲಿ ಅರಳುವ ಮುಗ್ಧ ನಗುವೇ ನನ್ನ ಬದುಕಿನ ಶಕ್ತಿ. ಜೀವ ಇರುವವರೆಗೂ ಈ ಕಾಯಕ ನಿಲ್ಲಿಸು ವುದಿಲ್ಲ " ಎನ್ನುವ ಗೋಪಾಲಣ್ಣನಿಗೆ ಮುಂದಿನ ದಿನಗಳಲ್ಲಿ ಒಂದು ಲಕ್ಷ 1,00,000 ಮಕ್ಕಳನ್ನು ತಲುಪಬೇಕೆಂಬ ಮಹದಾಸೆಯಿದೆ.
"ಬಡತನ ಕೇವಲ ಹೊಟ್ಟೆಗಷ್ಟೇ ಸೀಮಿತವಾಗಬೇಕೇ ವಿನಃ ಮಕ್ಕಳ ವಿದ್ಯಾಭ್ಯಾಸ ಕಸಿಯಬಾರದು. ನನ್ನ ಕೈಲಾ ದಷ್ಟನ್ನು ಶಾಲೆಗಳಿಗೆ ನೀಡಿ ನೆಮ್ಮದಿ ಕಾಣುತ್ತಿದ್ದೇನೆ ಎನ್ನುತ್ತಾರೆ ಗೋಪಾಲ್ (ಗಾರೆ ಗೋಪಾಲ್), ಗುಣವಂತೆಸಂಪತ್ತು ಇದ್ದವರೇ ದಾನ ಮಾಡಲು ಹಿಂದೇಟು ಹಾಕುವ ಇಂದಿನ ದಿನಗಳಲ್ಲಿ, ಬೆವರು ಸುರಿಸಿ ಗಳಿಸಿದ ಅಲ್ಪ ಆದಾಯ ದಲ್ಲೇ ಅಕ್ಷರದ ದಾಸೋಹ ನಡೆಸುತ್ತಿರುವ ಕೊಪ್ಪ ತಾಲೂಕಿನ ಗುಣವಂತೆಯ ಈ ಕಾಯಕಯೋಗಿಯ ಸೇವೆ ನಿಜಕ್ಕೂ ಅನುಕರಣೀಯ ಹಾಗೂ ಶ್ಲಾಘನೀಯ.