ಸಾರಾಂಶ
ಲಕ್ಷ್ಮೇಶ್ವರ: ತಾಲೂಕು ಸರ್ಕಾರಿ ನೌಕರರು ನೂತನ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಸೋಮೇಶ್ವರ ಪಾದಗಟ್ಟಿಯ ಹತ್ತಿರದ ಇರುವ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಾಸಕ ಡಾ. ಚಂದ್ರು ಲಮಾಣಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಫ್.ಎಸ್. ತಳವಾರ ಮಾತನಾಡಿ, ರಾಜ್ಯ ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿ ರಾಜ್ಯದಲ್ಲಿ 2008ರಲ್ಲಿ ಸರ್ಕಾರಿ ನೌಕರಿಗೆ ಸೇರಿರುವ ಕುಟುಂಬಗಳ ರಕ್ಷಣೆ ಮಾಡುವ ಕಾರ್ಯ ಮಾಡಬೇಕು, ರಾಜ್ಯದ ಹಲವು ಸರ್ಕಾರಿ ನೌಕರರು ನಿವೃತ್ತರಾಗಿ ಮನೆಗೆ ಹೋಗುವ ಹಂತದಲ್ಲಿದ್ದಾರೆ. ಆ ಕುಟುಂಬಗಳ ಬದುಕಿಗೆ ಆಸರೆಯಾಗುವ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ಸಂಧ್ಯಾಕಾಲದ ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಿಕೊಡುಬೇಕು ಎಂದು ಹೇಳಿದರು. ಈ ವೇಳೆ ಮಂಜುನಾಥ ಕೊಕ್ಕರಗುಂದಿ, ಶ್ರೀಪಾಲ ಘೋಂಗಡಿ, ಸುರೇಶ ಲಮಾಣಿ,. ಡಿ.ಎಚ್. ಪಾಟೀಲ, ಬಿ.ಎಂ.ಕುಂಬಾರ, ಎ.ಎಂ.ಅಕ್ಕಿ, ಮುತ್ತಣ್ಣ ಹುಬ್ಬಳ್ಳಿ, ಗೋಪಾಲಕೃಷ್ಣ ರಾಜೋಳಿ, ಪೀರ್‌ಸಾಬ, ನದಾಫ್, ಯಶವಂತ ಕುಂಬಾರ, ಶ್ರೀಕಾಂತ ನಂದೆಣ್ಣವರ, ಡಿ.ಡಿ. ಲಮಾಣಿ, ವಾಸುದೇವ ಮಡ್ಲಿ, ಬಸವರಾಜ ಕೊಪ್ಪದ, ಎಚ್.ವೈ. ಹಂಜಗಿ, ಎ,ಎಫ್, ಅರಗಂಜಿ, ಎಸ್.ಎಚ್.ಬಾಲಣ್ಣವರ, ವೆಂಕಟೇಶ ರಂ.ರನ್. ಆರ್.ಮಹಾಂತೇಶ, ಅರುಣಾ ಬೆಂತೂರಮಠ, ಎಚ್.ಡಿ.ನಿಂಗರೆಡ್ಡಿ ಸೇರಿದಂತೆ ಅನೇಕರು ಇದ್ದರು.