ಅಮೆರಿಕ, ಇಸ್ರೇಲ್- ಇರಾನ್‌ ಯುದ್ಧದಿಂದಾಗಿ ಆಟೋ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಎಲ್ಪಿಜಿ ಸಿಗದೇ ಪೆಟ್ರೋಲ್‌ ಮೊರೆ ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಮೆರಿಕ, ಇಸ್ರೇಲ್- ಇರಾನ್‌ ಯುದ್ಧದಿಂದಾಗಿ ಆಟೋ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಎಲ್ಪಿಜಿ ಸಿಗದೇ ಪೆಟ್ರೋಲ್‌ ಮೊರೆ ಹೋಗಿದ್ದಾರೆ.

ಚಾಮರಾಜನಗರದಲ್ಲಿ 2 ಎಲ್‌ಪಿಜಿ ಬಂಕ್‌ಗಳಿದ್ದು, ಎರಡೂ ಕೂಡ ಬಂದ್ ಆಗಿವೆ. ಹೀಗಾಗಿ ಆಟೋ ಚಾಲಕರು ಪೆಟ್ರೋಲ್‌ ಮೊರೆ ಹೋಗಿದ್ದಾರೆ. ಪೆಟ್ರೋಲ್ ಮೂಲಕ ಆಟೋ ಓಡಿಸುತ್ತಿದ್ದು, ವೆಚ್ಚ ಹೆಚ್ಚಾಗಿ ಆರ್ಥಿಕ ಪೆಟ್ಟು ಅನುಭವಿಸುತ್ತಿದ್ದಾರೆ.

ಪ್ರಯಾಣಿಕರ ಬಳಿ ಅಧಿಕ ಹಣ ಕೇಳಿದರೇ ಗಲಾಟೆ ಆಗಲಿದೆ. ಇತ್ತ ಪೆಟ್ರೋಲ್‌ ಮೂಲಕ ಆಟೋ ಓಡಿಸಿದರೇ ನಷ್ಟ ಉಂಟಾಗಲಿದೆ‌‌. ಆಟೋ ಓಡಿಸದಿದ್ದರೇ ಜೀವನದ ಬಂಡಿ ಸಾಗಲ್ಲ. ಇಎಂಐ ಕಟ್ಟಲಾಗಲ್ಲ ಎಂದು ಆಟೋ ಚಾಲಕರಾದ ಶಂಕರ್‌, ಮಂಜು ಅಳಲು ತೋಡಿಕೊಂಡರು.ಪಕ್ಕದ ಮೈಸೂರು ಜಿಲ್ಲೆಯಲ್ಲಿ ಆಟೋ ಗ್ಯಾಸ್‌ ಸಿಗುತ್ತಿದ್ದು, ಕೂಡಲೇ ಜಿಲ್ಲಾಡಳಿತ ತಮ್ಮ ಸಮಸ್ಯೆ ಪರಿಹರಿಸಬೇಕೆಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.