ಶಾಂತಿ ಸೌಹಾರ್ತೆಗೆ ಹೆಸರಾಗಿರುವ ರಾಜ್ಯವನ್ನು ಕೋಮುಗಲಭೆ ಮಾಡಲು ಹವಣಿಸುತ್ತಿರುವ ಕೋಮುವಾದಿಗಳಿಗೆ ಧಿಕ್ಕಾರ
ಕನ್ನಡಪ್ರಭ ವಾರ್ತೆ ಹುಣಸೂರುದಸಂಸ ಹಾಗೂ ನೀಲಿ ಶಾಲಿನ ಬಗ್ಗೆ ಹಗುರವಾಗಿ ಮಾತನಾಡಿ, ಅವಮಾನ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಪಟ್ಟಣದ ಸಂವಿಧಾನ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟಿಸಿದರು.ಸಂವಿಧಾನ ವೃತ್ತದಲ್ಲಿ ಸಮಾವೇಶಗೊಂಡ ದಸಂಸ, ಸಿಪಿಐ (ಎಂ), ರೈತ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಕೋಮುಗಲಭೆಗೆ ಅವಕಾಶ ಉಂಟು ಮಾಡಲು ಪ್ರಯತ್ನಿಸುತ್ತಿರುವ ಪ್ರತಾಪ್ ಸಿಂಹನನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ, ಶಾಂತಿ ಸೌಹಾರ್ತೆಗೆ ಹೆಸರಾಗಿರುವ ರಾಜ್ಯವನ್ನು ಕೋಮುಗಲಭೆ ಮಾಡಲು ಹವಣಿಸುತ್ತಿರುವ ಕೋಮುವಾದಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ದಸಂಸ ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಮಾತನಾಡಿ, ಕೋಮುವಾದ ಶಕ್ತಿಗಳು ತಮ್ಮ ರಾಜಕೀಯ ದುರುದ್ದೇಶದಿಂದ ಕೋಮು ಗಲಭೆ ಎಬ್ಬಿಸಲು ಹೊಂಚು ಹಾಕುತ್ತಿವೆ. ಕುವೆಂಪು ಬಸವಣ್ಣನವರ ಹುಟ್ಟಿದ ಈ ನಾಡಿನಲ್ಲಿ ಇಂತಹ ಕೋಮುಗಲಭೆಗೆ ಪ್ರಯತ್ನಿಸುವುದು ಖಂಡನೀಯ ಎಂದರು ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ವಿಜಯಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ದಸಂಸ ಹಿರಿಯ ಹೋರಾಟಗಾರ ಎಚ್.ಎಸ್. ವರದರಾಜು, ನಾಗರಾಜು, ದಸಂಸ ತಾಲೂಕು ಸಂಚಾಲಕ ರಾಮಕೃಷ್ಣ, ಸಿಪಿಎಂ ನ ಬಸವರಾಜು ಕಲ್ಕುಣಿಕೆ, ನಿಂಗರಾಜ್ ಮಲ್ಲಾಡಿ, ಪೀಸ್ ಕಮಿಟಿಯ ಅಜೀಜ್ಉಲ್ಲಾ , ಮಾತನಾಡಿದರುದಸಂಸ ಮುಖಂಡರಾದ ಜೆ. ಮಹದೇವು. ರಾಜು, ಮುದಾಸಿರ್, ಶಿವರಾಜು, ಸಿದ್ದೇಶ್ವರ, ಎಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ. ಕೆ ಬಸವರಾಜು, ಬಿ.ಕೆ. ಶಿವಣ್ಣ, ನಾಗಯ್ಯ, ಬಸವರಾಜು, ಸ್ವಾಮಿ, ಎಚ್.ಕೆ. ಗೋವಿಂದರಾಜು, ಕಿರಣ್ ಕುಮಾರ್. ದೇವರಾಜ್ ಮಲ್ಲಾಡಿ. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟಮಾದಯ್ಯ, ಶಿವಣ್ಣ, ವೆಂಕಟೇಶ, ಪುಟ್ಟರಾಜು, ಎಂ.ಎಸ್. ಚಂದ್ರಶೇಖರ್, ವೇಣು, ದೇವರಾಜು, ರಾಜು, ಕೃಷ್ಣ, ದರ್ಶನ್, ಪುಟ್ಟರಾಜು, ನಾರಾಯಣ, ಗಿರೀಶ್ ಇದ್ದರು.