ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸ್ಥಾನ ಪುನರ್ ರಚನೆ, ಸಂಘಟನೆಯ ಬಲವರ್ಧನೆ ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ, ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಕೆಪಿಸಿಸಿ ವೀಕ್ಷಕರಾದ ಹಸನ್ ಸಾಬ್ ಧೊತಿಯಾಳ ಹಾಗೂ ಜ್ಯೋತಿ ಮುರಗೋಳ ತಿಳಿಸಿದರು.

ಬೀದರ್: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸ್ಥಾನ ಪುನರ್ ರಚನೆ, ಸಂಘಟನೆಯ ಬಲವರ್ಧನೆ ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ, ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಕೆಪಿಸಿಸಿ ವೀಕ್ಷಕರಾದ ಹಸನ್ ಸಾಬ್ ಧೊತಿಯಾಳ ಹಾಗೂ ಜ್ಯೋತಿ ಮುರಗೋಳ ತಿಳಿಸಿದರು.

ಬೀದರ್‌ ದಕ್ಷಿಣ ಕ್ಷೇತ್ರದ ಬಗದಲ್ ಗ್ರಾಮದ ಸ್ಟಾರ್ ಫಂಕ್ಷನ್ ಹಾಲ್‌ನಲ್ಲಿ ಶನಿವಾರ ಕಾಂಗ್ರೆಸ್ ಸಂಘಟನೆಯ ಸೃಜನ್ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಕಾರ್ಯಕ್ರಮದ ಮೂಲಕ ಕ್ಷೇತ್ರದ ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯ, ಸಲಹೆ ಪಡೆಯುವ ಹಾಗೂ ಸಂಘಟನಾ ಸಾಮರ್ಥ್ಯವನ್ನು ಅರಿತು ಬ್ಲಾಕ್ ಅಧ್ಯಕ್ಷರ ನೇಮಕ ಮಾಡಲಾಗುವುದು ಎಂದರು.

ಮಾಜಿ ಶಾಸಕ ಅಶೋಕ್ ಖೇಣಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡೋಣ, ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿರಬಹುದು, ಆದರೆ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮ ಪಡುತಿದ್ದೇನೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮನ್ನಾನ ಸೇಠ್, ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಚಂದ್ರಶೇಖರ ಚನಶಟ್ಟಿ, ವಿರಶೈವ ನಿಗಮದ ನಿರ್ದೇಶಕರಾದ ರಾಜಕುಮಾರ್ ತರಿ, ಮುಖಂಡರಾದ ಫೇರೊಜ್ ಖಾನ್, ತನ್ವೀರ ಅಹ್ಮದ್ ಖಾನ್, ಮಸ್ತಾನ ನೂರೊದ್ದಿನ್, ಸಚಿನ ಮಲ್ಕಾಪೂರ, ಜಾರ್ಜ್‌ ಫರ್ನಾಂಡಿಸ್, ಮೊಯಿಜೊದ್ದಿನ್, ಅಮೃತರಾವ ಪಾಟೀಲ್, ಬಶಿರೋದ್ದಿನ್ ಸೌದಾಗರ, ಖಯಾಮೊದ್ದಿನ್, ಶಿವರಾಜ ಹಾವಶಟ್ಟಿ, ಸೊಹೇಲ್, ಬಸವರಾಜ ರಾಜಗೀರಾ, ಕಾರ್ತಿಕ ದೇಸಾಯಿ, ಗೌತಮ ಬಗದಲ್, ಜಯಪ್ರಕಾಶ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.