ಗೌಡಳ್ಳಿ: 10.40 ಲಕ್ಷ ರು. ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ

| Published : Mar 09 2024, 01:34 AM IST

ಗೌಡಳ್ಳಿ: 10.40 ಲಕ್ಷ ರು. ವೆಚ್ಚದ ವಿವಿಧ ಕಾಮಗಾರಿ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಾಯಿತಿ ವ್ಯಾಪ್ತಿಯ ನಾಲ್ಕು ವಾರ್ಡ್‍ಗಳಲ್ಲಿ ನಿರ್ಮಾಣವಾಗಿರುವ ತಲಾ 80 ಸಾವಿರ ರು. ವೆಚ್ಚದ ಹೈಮಾಸ್ಟ್ ಬೀದಿ ದೀಪ, ಪಂಚಾಯಿತಿ ಪಕ್ಕದಲ್ಲಿ 2 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಕೂಸಿನ ಮನೆ, ಗೌಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾದಲ್ಲಿ 5.20 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಶೌಚಾಗೃಹವನ್ನು ಶಾಸಕರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10.40 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿವಿಧ ಕಾಮಗಾರಿಗಳನ್ನು ಶಾಸಕ ಡಾ. ಮಂತರ್‌ ಗೌಡ ಉದ್ಘಾಟಿಸಿದರು.ಪಂಚಾಯಿತಿ ವ್ಯಾಪ್ತಿಯ ನಾಲ್ಕು ವಾರ್ಡ್‍ಗಳಲ್ಲಿ ನಿರ್ಮಾಣವಾಗಿರುವ ತಲಾ 80 ಸಾವಿರ ರು. ವೆಚ್ಚದ ಹೈಮಾಸ್ಟ್ ಬೀದಿ ದೀಪ, ಪಂಚಾಯಿತಿ ಪಕ್ಕದಲ್ಲಿ 2 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಕೂಸಿನ ಮನೆ, ಗೌಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾದಲ್ಲಿ 5.20 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಶೌಚಾಗೃಹವನ್ನು ಶಾಸಕರು ಉದ್ಘಾಟಿಸಿದರು.

ನಂತರ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡುವ ಅವಶ್ಯಕತೆಯಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ತಡೆಗೋಡೆಗೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು. ನೂತನ ಕೊಠಡಿಗಳು ನಿರ್ಮಾಣವಾಗಿದ್ದು, ಹಳೆ ಕೊಠಡಿಗಳನ್ನು ಒಡೆಯಲು ಕ್ರಮಕೈಗೊಳ್ಳಲಾಗುವುದು. ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜ್ಜಳ್ಳಿ ನವೀನ್, ಉಪಾಧ್ಯಕ್ಷೆ ವಿಶಾಲಾಕ್ಷಿ, ಸದಸ್ಯರಾದ ಮಂಜುನಾಥ್, ವೆಂಕಟೇಶ್, ಗಣೇಶ್, ನಾಗರಾಜು, ಮಲ್ಲಿಕಾ, ರೋಹಿಣಿ, ಸುಮಾ, ಗೌರಿ, ಪಿಡಿಒ ಲಿಖಿತಾ ಇದ್ದರು. ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಬಿಇಒ ಭಾಗ್ಯಮ್ಮ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕೆ.ಟಿ.ಚಂದ್ರಕಲಾ ಇದ್ದರು. ವರ್ಗಾವಣೆಯಾಗಿರುವ ಮುಖ್ಯಶಿಕ್ಷಕ ಮಂಜಯ್ಯ, ದೈಹಿಕ ಶಿಕ್ಷಣ ಶಿಕ್ಷಕಿ ಆಶಾ ಅವರನ್ನು ಶಾಸಕರು ಸನ್ಮಾನಿಸಿ ಬೀಳ್ಕೊಟ್ಟರು.೦೮ಎಸ್‍ಪಿಟಿ೦೬: ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಟಿಕಟ್ಟೆ ಜಂಕ್ಷನ್‍ನಲ್ಲಿ 80 ಸಾವಿರ ರೂ, ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಮಾಸ್ಟ್ ಬೀದಿದೀಪವನ್ನು ಶಾಸಕ ಮಂತರ್‍ಗೌಡ ಸ್ವಿಚ್ ಆನ್ ಮಾಡುವ ಮೂಲಕ ಚಾಲನೆ ನೀಡಿದರು. ನವೀನ್, ವಿಶಾಲಾಕ್ಷಿ, ಮಲ್ಲಿಕಾ, ರೋಹಿಣಿ, ಸುಮಾ ಇದ್ದರು.