ತವರಿನ ಬಾಂಧವ್ಯ ಬೆಸೆವ ಗೌರಿ ಹಬ್ಬ: ವಿಕ್ರಮ್

| Published : Aug 26 2025, 01:02 AM IST

ಸಾರಾಂಶ

ಭಾದ್ರಪದ ಮಾಸದಲ್ಲಿ ಬರುವ ಗೌರಿ ಹಬ್ಬವು ಮಹಿಳೆಯರಿಗೆ ಅತಿ ವಿಶೇಷವಾದ ಹಬ್ಬವಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಭಾದ್ರಪದ ಮಾಸದಲ್ಲಿ ಬರುವ ಗೌರಿ ಹಬ್ಬವು ಮಹಿಳೆಯರಿಗೆ ಅತಿ ವಿಶೇಷವಾದ ಹಬ್ಬವಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಹೇಳಿದರು.

ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ಗೌರಿ ಹಬ್ಬದ ಅಂಗವಾಗಿ ಕ್ಲಬ್‌ನ ಮಹಿಳಾ ಸದಸ್ಯರಿಗೆ ಸೋಮವಾರ ಬಾಗಿನ ನೀಡಿ ಸತ್ಕರಿಸಿ ಮಾತನಾಡಿದರು.

ಗೌರಿ ಹಬ್ಬವು ಮದುವೆಯಾದ ಹೆಣ್ಣು ಮಕ್ಕಳಿಗೆ ಅತ್ಯಂತ ಶ್ರೇಷ್ಠವಾಗಿದ್ದು, ತವರಿನ ಬಾಂಧವ್ಯವನ್ನು ಬೆಸೆಯುತ್ತದೆ. ತವರಿನಿಂದ ಹೆಣ್ಣು ಮಕ್ಕಳಿಗೆ ಗೌರಿ ಹಬ್ಬದ ಸಂದರ್ಭದಲ್ಲಿ ನೀಡುವ ಅರಿಶಿನ, ಕುಂಕುಮ, ಬಳೆ, ಹೂವು, ಸೀರೆ ಮುಂತಾದ ಬಾಗಿನದ ಸಾಮಾಗ್ರಿಗಳು ಆಕೆಗೆ ಎಲ್ಲಿಲ್ಲದ ಹರುಷವನ್ನು ತರುತ್ತದೆ ಎಂದರು.

ವರ್ಷಕ್ಕೊಮ್ಮೆ ಬರುವ ಗೌರಿ ಹಬ್ಬದಲ್ಲಿ ತವರಿನಿಂದ ತಂದೆ ತಂದೆ, ಅಣ್ಣ ತಮ್ಮಂದಿರುವ ಬಾಗಿನ ನೀಡಿದರೆ ಹೆಣ್ಣು ಮಕ್ಕಳಿಗೆ ಅತ್ಯಂತ ಸಂತಸ ಪಡುತ್ತಾರೆ. ಬಾಗಿನವನ್ನು ಸ್ವೀಕರಿಸಿದ ಮುತ್ತೆöÊದೆ ಹೆಣ್ಣು ಮಕ್ಕಳು ಅತ್ಯಂತ ಸಂಭ್ರಮ, ಸಡಗರದಿಂದ ಗೌರಿಪೂಜೆ ನೆರವೇರಿಸಿ ತನ್ನ ಕುಟುಂಬಕ್ಕೆಲ್ಲಾ ಒಳಿತಾಗಲಿ ಎಂದು ಬಯಸುತ್ತಾಳೆ ಎಂದು ತಿಳಿಸಿದರು.

ಇಂತಹ ಬಾಂಧವ್ಯದ ಬೆಸುಗೆಯ ಹಬ್ಬವನ್ನು ಲಯನ್ಸ್ ಸಂಸ್ಥೆಯು ಈ ಬಾರಿ ವಿಶೇಷವಾಗಿ ಆಚರಿಸುತ್ತಿದ್ದು, ಸಂಸ್ಥೆಯ ಮಹಿಳಾ ಸದಸ್ಯರಿಗೆ ಬಾಗಿನ ನೀಡಿ ಸತ್ಕರಿಸಿ ಕುಟುಂಬದವರಂತೆ ಸತ್ಕರಿಸಲಾಗಿದೆ. ಬಾಗಿನ ಪಡೆದ ಸಹೋದರಿಯರು ಸಹ ಅತ್ಯಂತ ಸಂತಸದಿಂದ ಸ್ವೀಕರಿಸಿ ಸಹೋದರತ್ವವದ ಬಂಧವನ್ನು ಗಟ್ಟಿಗೊಳಿಸಿದ್ದಾರೆ ಎಂದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್, ಖಜಾಂಚಿ ಕೆ.ಸಿ.ರವೀಂದ್ರ, ನಿಕಟಪೂರ್ವ ಅಧ್ಯಕ್ಷ ಎಂ.ವಿ.ಶ್ರೀನಿವಾಸಗೌಡ, ವಲಯಾಧ್ಯಕ್ಷ ಎಂ.ಡಿ.ಶಿವರಾಮ್, ಪೂರ್ವಾಧ್ಯಕ್ಷ ಎಂ.ಎಸ್.ಪ್ರವೀಣ್‌ಕುಮಾರ್, ಸದಸ್ಯರಾದ ಎಚ್.ಉಮೇಶ್, ಯೋಗೀಶ್, ಉಪೇಂದ್ರ, ಜ್ಯೋತಿ ಉಮೇಶ್, ಗೀಷ್ಮ, ಜ್ಯೋತಿ ಜಗದೀಶ್ ಮತ್ತಿತರರು ಹಾಜರಿದ್ದರು.