ಗೌರಿ ಗಣೇಶ ಉತ್ಸವ ಮೂರ್ತಿ ಮೆರವಣಿಗೆ, ವಿಸರ್ಜನೆ

| Published : Sep 04 2025, 01:01 AM IST

ಸಾರಾಂಶ

ಗೌರಿ ಗಣೇಶ ಉತ್ಸವ ಮೂರ್ತಿಯನ್ನು ವಿದ್ಯುತ್‌ ಅಲಂಕೃತ ಮಂಟಪದಲ್ಲಿ ಇರಿಸಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಎಮ್ಮೆಗುಂಡಿ ಶ್ರೀ ಬಾಲಗಣಪತಿ ಮಿತ್ರ ಮಂಡಳಿ ವತಿಯಿಂದ ಪ್ರಥಮ ವರ್ಷದ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಭಾನುವಾರ ಅದ್ಧೂರಿಯಾಗಿ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಇರಿಸಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.ಶ್ರೀ ಗೌರಿ ಗಣೇಶ ಉತ್ಸವ ಮೂರ್ತಿಗೆ 5 ದಿನಗಳ ಕಾಲ ಶ್ರೀ ಬಾಲಗಣಪತಿ ಮಿತ್ರ ಮಂಡಳಿ ವತಿಯಿಂದ ಸುಂಟಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದ ಅರ್ಚಕ ಗಣೇಶ್‌ಭಟ್ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಂತರ ಶ್ರೀಗೌರಿ ಗಣೇಶ ಉತ್ಸವ ಮೂರ್ತಿಯನ್ನು ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಇರಿಸಿ ಎಮ್ಮೆಗುಂಡಿಯಿಂದ ಸುಂಟಿಕೊಪ್ಪ ಪಟ್ಟಣ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ಡಿಜೆ ಪಟಾಕಿಗಳನ್ನು ಸಿಡಿಸುವ ಮೂಲಕ ಉತ್ಸವ ಮೂರ್ತಿಯನ್ನು ಗುತ್ತಿಮುಂಡ ಕುಟುಂಬದ ಕೆರೆಯಲ್ಲಿ ವಿಸರ್ಜನೆಗೊಳಿಸಲಾಯಿತು. ಅಧ್ಯಕ್ಷ ಸಜಿತ್, ಉಪಾಧ್ಯಕ್ಷ ಪ್ರವೀಣ್, ಗೌರವಾಧ್ಯಕ್ಷ ಸಂಜೀವ, ಕಾರ್ಯದರ್ಶಿ ಜೀವನ್, ಪದಾಧಿಕಾರಿಗಳಾದ ನಿತಿನ್, ಮಂಜು, ಬಿ.ಕೆ.ವಿಶ್ವನಾಥ ರೈ, ಬಿ.ಕೆ.ಮೋಹನ್‌ ದಾಸ್ ರೈ, ರಂಗರಾಜು, ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ಗ್ರಾಮಸ್ಥರು ಪಾಲ್ಗೊಂಡಿದ್ದರು.