ಬೋಯಿಕೇರಿಯಲ್ಲಿ ಗೌರಿ ಗಣೇಶ ಮೂರ್ತಿ ವಿಸರ್ಜನೋತ್ಸವ

| Published : Sep 06 2025, 01:01 AM IST

ಸಾರಾಂಶ

ಗೌರಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿಸರ್ಜನೋತ್ಸವ ಮೆರವಣಿಗೆ ಬೋಯಿಕೇರಿ ಪ್ರಮುಖ ಬೀದಿಗಳಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಬೋಯಿಕೇರಿಯಲ್ಲಿ ಸಿದ್ಧಿಬುದ್ಧಿ ವಿನಾಯಕ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಗೆ ಭಾನುವಾರ ಸಂಜೆ ವಿಶೇಷ ಪೂಜೆ ನೆರವೇರಿಸುವ ಮೂಲಕ ವಿಸರ್ಜನೋತ್ಸವ ಮೆರವಣಿಗೆ ಬೋಯಿಕೇರಿ ಪ್ರಮುಖ ಬೀದಿಗಳಲ್ಲಿ ಜರುಗಿತು.

ಗಣೇಶೋತ್ಸವದಲ್ಲಿ ಹಿಂದೂ, ಮುಸ್ಲಿಮರು ಪಾಲ್ಗೊಂಡು ಸಾಮರಸ್ಯ ಮೆರೆದರು. ಮೆರವಣಿಗೆಯು ಮುಖ್ಯ ಬೀದಿಯಲ್ಲಿ ಸಾಗಿ ಮಸೀದಿಯ ಮುಂಭಾಗ ಬರುತ್ತಿದ್ದಂತೆ ಮುಸ್ಲಿಮರು ಎಲ್ಲ ಹಿಂದೂಗಳಿಗೆ ನೀರು, ಸಿಹಿತಿಂಡಿ, ಕೇಕ್ ಮತ್ತು ಬಾದಾಮಿ ಜ್ಯೂಸ್ ವಿತರಿಸಿದರು. ರಾತ್ರಿ ಸ್ಥಳೀಯ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಈ ಸಂದರ್ಭ ಗಣೇಶ್, ಸ್ವಾಗತ್, ರಮೇಶ್, ರೆಹಮತ್ ಖಾನ್, ಸಮ್ಮದ್, ಜಲೀಲ್, ಸಿದ್ದೀಕ್, ಬಶೀರ್ ಸೇರಿದಂತೆ ದೇವಾಲಯ ಸಮಿತಿಯ ಪದಾಧಿಕಾರಿಗಳು ಇದ್ದರು.