ಹೆಣ್ಣುಮಕ್ಕಳು ಮೌಢ್ಯಾಚರಣೆಗೆ ಬಲಿಯಾಗದಿರಲು ಗೌರಿ ಪ್ರಸನ್ನ ಕರೆ

| Published : Oct 28 2024, 12:45 AM IST / Updated: Oct 28 2024, 12:46 AM IST

ಹೆಣ್ಣುಮಕ್ಕಳು ಮೌಢ್ಯಾಚರಣೆಗೆ ಬಲಿಯಾಗದಿರಲು ಗೌರಿ ಪ್ರಸನ್ನ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಹೆಣ್ಣು ಮಕ್ಕಳು ಮೌಢ್ಯಗಳ ಆಚರಣೆಗೆ ಬಲಿಯಾಗದಿರಲು ಬೀರೂರು ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಉಪಾಧ್ಯಕ್ಷೆ ಗೌರಿ ಪ್ರಸನ್ನಹೇಳಿದ್ದಾರೆ. ಕುಡ್ಲೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ , ತರೀಕೆರೆಯಿಂದ ಕುಡ್ಲೂರು ಗ್ರಾಮದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಕುಡ್ಲೂರು ಗ್ರಾಮದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಹೆಣ್ಣು ಮಕ್ಕಳು ಮೌಢ್ಯಗಳ ಆಚರಣೆಗೆ ಬಲಿಯಾಗದಿರಲು ಬೀರೂರು ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಉಪಾಧ್ಯಕ್ಷೆ ಗೌರಿ ಪ್ರಸನ್ನ

ಹೇಳಿದ್ದಾರೆ. ಕುಡ್ಲೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ , ತರೀಕೆರೆಯಿಂದ ಕುಡ್ಲೂರು ಗ್ರಾಮದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

12ನೇ ಶತಮಾನದಲ್ಲಿ ಮಹಿಳೆಯರು ಸಮಾಜದಲ್ಲಿ ಮುಖ್ಯ ಪಾತ್ರ ವಹಿಸಿ ವಚನ ಸಾಹಿತ್ಯವನ್ನು ಎತ್ತಿ ಹಿಡಿದಿದ್ದರು. ಹಿಂದಿನ ಕಾಲದಲ್ಲಿ ಮಹಿಳೆಯರು ಸಮಾನತೆಯನ್ನು ಹೇಗೆ ಪಡೆದುಕೊಂಡರು ಎಂಬುದನ್ನು ತಿಳಿಸಿದ ಅವರು, ಪ್ರಸ್ತುತ ಮಹಿಳೆಯರು ಎಲ್ಲಾ ರಂಗದಲ್ಲಿಯೂ ತಮ್ಮ ಚಾಪು ಮೂಡಿಸಿಡಿದ್ದಾರೆ. ಉತ್ತಮ ಜೀವನ ನಡೆಸುವ ಮೂಲಕ ಮಹಿಳೆಯರು ಸಮಾಜದಲ್ಲಿ ಗುರುತಿಸಿಕೊಳ್ಳ ಬೇಕು. ಕೌಟುಂಬಿಕ ಸಾಮರಸ್ಯದಲ್ಲಿ ಮಹಿಳೆಯರು ಮನೆಯ ಸದಸ್ಯರೊಟ್ಟಿಗೆ ಸಮಾಜದೊಟ್ಟಿಗೆ ಯಾವ ರೀತಿ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು.

ತಾಲೂಕು ಯೋಜನಾಧಿಕಾರಿ ಕುಸುಮಧರ್ ಯೋಜನೆ ನಡೆದು ಬಂದ ಹಾದಿ, ಇದರ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ವಿಶೇಷವಾಗಿ ಮಹಿಳಾ ಜ್ಞಾನವಿಕಾಸದ ಮಾಹಿತಿ, ಯೋಜನೆ ಅಡಿ ನೀಡುವ ಅನುದಾನಗಳು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ ಯೋಜನೆಯಡಿ ದೊರೆಯುವ ಸಾಲ ಸೌಲಭ್ಯಗಳು, ಸಂಘವನ್ನು ಹೇಗೆ ರಕ್ಷಣೆ ಮಾಡಿದರೆ ಸಂಘ ನಮ್ಮನ್ನು ರಕ್ಷಣೆ ಮಾಡುತ್ತದೆ. ಸಂಘದಲ್ಲಿ ಶಿಸ್ತು ಬಹಳ ಮುಖ್ಯ ಮಹಿಳಾ ಸಂಘಟನೆ ಮಾಡಬೇಕು. ಜ್ಞಾನವಿಕಾಸ ಕಾರ್ಯ ಕ್ರಮಗಳಿಂದ ಅನೇಕ ಮಾಹಿತಿ ತಿಳಿಸಿಕೊಡುತ್ತಾರೆ. ಯೋಜನೆಯಡಿ ಜನಮಂಗಲ ಸುಜ್ಞಾನ ನಿಧಿ, ಶಿಷ್ಯವೇತನ, ಮಾಸಾಶನ, ವಾತ್ಸಲ್ಯ ಕಾರ್ಯಕ್ರಮಗಳು ಜ್ಞಾನದೀಪ ಶಿಕ್ಷಕರ ನಿಯೋಜನೆ, ಮಧ್ಯವರ್ಜನ ಶಿಬಿರಗಳು ಪೂಜ್ಯರ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳ ಬಗ್ಗೆ ಸದಸ್ಯರಿಗೆ ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಹೂಗುಚ್ಚ, ಕರಕುಶಲ ವಸ್ತುಗಳ ತಯಾರಿಕೆ, ರಂಗೋಲಿ ಸ್ಪರ್ಧೆಯಲ್ಲಿ ಸದಸ್ಯರು ಭಾಗವಹಿಸಿದ್ದರು.

ಬೀರೂರು ಪೊಲೀಸ್ ಠಾಣಾಧಿಕಾರಿ ನಾಗರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಜಿಲ್ಲಾ ಜನಜಾಗೃತಿ ಸದಸ್ಯ ಮಲ್ಲಪ್ಪ ಕುಡ್ಲೂರು, ಚಂದ್ರಶೇಖರ್ ಕೊರಟಗೆರೆ, ವಲಯದ ಮೇಲ್ವಿಚಾರಕರು ಮಂಜುನಾಥ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ನಂದಿನಿ, ಜ್ಞಾನವಿಕಾಸ ಕೇಂದ್ರದ ಸಂಯೋಜಕಿಯರು ಹಾಗೂ ತಾಲೂಕಿನ ಎಲ್ಲಾ ಜ್ಞಾನವಿಕಾಸ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

27ಕೆಟಿಆರ್.ಕೆ.6ಃ

ತರೀಕೆರೆ ಸಮೀಪದ ಕುಡ್ಲೂರು ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಗೆ ಬೀರೂರು ಪೊಲೀಸ್ ಠಾಣಾಧಿಕಾರಿ ನಾಗರಾಜ್ ಚಾಲನೆ ನೀಡಿದರು, ಗ್ರಾಪಂ ಅಧ್ಯಕ್ಷೆ ಯಶೋಧ, ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ತಾಲೂಕು ಯೋಜನಾಧಿಕಾರಿ ಕುಸುಮಧರ್ ಮತ್ತಿತರರು ಇದ್ದರು.