ಸಾರಾಂಶ
ಪ್ರಪಂಚದಾದ್ಯಂತ ಗವಿಮಠ ಗುರುತಿಸುವಂತೆ ಮಾಡಿದ ಹಿರಿಮೆ ಅಭಿನವ ಗವಿಶ್ರೀಗಳದ್ದುವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಕ್ಕೆ ಗವಿಮಠ ಸೇವೆಕನ್ನಡಪ್ರಭ ವಾರ್ತೆ ಕೊಪ್ಪಳ
ಗವಿಮಠ ರಥೋತ್ಸವದಲ್ಲಿ ಮೈಸೂರು ದಸರಾ ಮೀರಿಸುವ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಗವಿಮಠ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಸೇವೆ ಮಾಡುತ್ತಿದೆ ಎಂದು ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ರಥೋತ್ಸವ ಉದ್ಘಾಟನಾ ಸಮಾರಂಭವನ್ನೂದ್ದೇಶಿಸಿ ಮಾತನಾಡಿದ ಅವರು, ಇಷ್ಟೊಂದು ಜನಸಾಗರ ಸೇರುವ ಮತ್ತೊಂದು ಜಾತ್ರೆ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಹುದೊಡ್ಡ ಸಾಮಾಜಿಕ, ಧಾರ್ಮಿಕ ಕ್ರಾಂತಿ ಮಾಡಿದ ಮಠ ಗವಿಮಠ ಆಗಿದೆ. ಇನ್ನೊಂದು ಸಿದ್ಧಗಂಗಾಮಠ ಗವಿಮಠ ಆಗಿದೆ. ಆ ಸಂಕಲ್ಪ ಗವಿಶ್ರೀಗಳಿಗಿದೆ. ವಿದ್ಯಾರ್ಥಿ ದೇವೋಭವ ಅಂತಾ ಭಾವಿಸಿ ಸಂಕಲ್ಪ ಮಾಡಿದ್ದಾರೆ ಎಂದರು.
ಗವಿಸಿದ್ಧೇಶ್ವರ ಮೇಲಿನ ಭಕ್ತಿಯನ್ನೇ ನೀವೆಲ್ಲ ತುಂಬಿಕೊಂಡು ಬಂದಿದ್ದಿರಿ. ಯಾರು ಕೂಲಿ ಮಾಡುತ್ತಾರೆ ಅವರು ಮಠವನ್ನು ಬೆಳೆಸುತ್ತಾರೆ. ನಮ್ಮ ಮಠವೂ ಹಾಗೆ ಬೆಳೆದಿದೆ. ಬರ ಇದೆ ಎಂದು ಒಂದು ಹಳ್ಳಿಗೆ ನಾವು ಹೋಗಿರಲಿಲ್ಲ. ಅಜ್ಜಿ ಯಾಕೆ ಬರಲಿಲ್ಲ ಎಂದು ಕೇಳಿದಳು. ಬರ ಇದ್ದರೆ ನಾವೇನು ಸತ್ತು ಹೋಗಿಲ್ಲ. ಅದರಲ್ಲಿಯೇ ಒಂದೆರಡು ಕಾಳು ಕೊಡುತ್ತೇವೆ ಎಂದರು. ಅಂಥ ಭಕ್ತರು ಇರುವುದರಿಂದಲೇ ಮಠಗಳು ಬೆಳೆಯುವುದು ಎಂದರು.ಭಾರತವನ್ನು ಗುರುತಿಸುವುದೇ ಅಧ್ಯಾತ್ಮದಿಂದಲೇ. ಪಾಶ್ಚಿಮಾತ್ಯ ಜನರೆ ನಮ್ಮ ಅಧ್ಯಾತ್ಮ ಅನುಸರಿಸುತ್ತಾರೆ. ಐಪೋನ್ ಕಂಡು ಹಿಡಿದವಳೆ ಕುಂಭಮೇಳಕ್ಕೆ ಬಂದಿದ್ದಾರೆ ಎಂದರೆ ಭಾರತದ ಅಧ್ಯಾತ್ಮದ ತಾಕತ್ತು ಗೊತ್ತಾಗುತ್ತದೆ.
ನೂರಾರು ಕೋಟಿ ಸುರಿದರೂ ಗಂಗಾನದಿಯನ್ನು ಸ್ವಚ್ಛ ಮಾಡಲು ಆಗುತ್ತಿಲ್ಲ. ಆದರೆ ಕೊಪ್ಪಳದ ಶ್ರೀಗಳು ಸುತ್ತಮುತ್ತಲು ಜಲಮೂಲಗಳನ್ನು ತಿಳಿಗೊಳಿಸಿದ್ದಾರೆ. ಅವರು ಕೈಗೊಂಡ ಕಾರ್ಯಗಳು ಒಂದೆರೆಡಲ್ಲ. ಈ ಜಾತ್ರೆಯಲ್ಲಿ ಸೇರಿರುವ ಭಕ್ತರನ್ನು ನಾನು ಎಲ್ಲಿಯೂ ನೋಡಿಲ್ಲ. ಅಷ್ಟೊಂದು ಭಕ್ತರು ಇಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲ, ನೀವೇಲ್ಲ ಶಾಂತ ಸಮುದ್ರದಂತೆ ಇದ್ದಿರಿ. ನಿಮ್ಮಲ್ಲಿರುವ ಭಕ್ತಿ, ಶಾಂತ ಮನಸ್ಸು ಮಾದರಿಯಾಗಿದೆ ಎಂದರು.ನಿಮ್ಮಲ್ಲಿ ಸದ್ಗುಣಗಳನ್ನು ಬೆಳೆಸುವುದು, ದುಶ್ಚಟ ಬಿಡಿಸುವ ಕೆಲಸ ಗವಿಶ್ರೀಗಳು ಮಾಡುತ್ತಾರೆ. ದೊಡ್ಡ ಕ್ರಾಂತಿಯನ್ನೆ ಮಾಡಿದ್ದಾರೆ. ಮಕ್ಕಳು ಕಲ್ಪವೃಕ್ಷದಂತೆ ಇದ್ದಾರೆ. ವಿದ್ಯಾರ್ಥಿಗಳಿಗೆ ಜಾಗ ಕೊಡಲಾಗಲಿಲ್ಲ ಎಂದು ಕಣ್ಣೀರು ಹಾಕಿದ ಶ್ರೀಗಳು ಗವಿಮಠದ ಶ್ರೀಗಳು. ಅವರಿಗೆ ಇನ್ನಷ್ಟು ಸಾಮರ್ಥ್ಯ ನೀಡಬೇಕು. ಅವರು ಎಲ್ಲ ಸ್ವಾಮೀಜಿಗಳಿಗೆ ಮಾದರಿಯಾಗಿದ್ದಾರೆ. ಕೊಪ್ಪಳವನ್ನು ಪ್ರಪಂಚಾದ್ಯಂತ ಗುರುತಿಸುವಂತೆ ಮಾಡಿದ ಹಿರಿಮೆ ಅವರದ್ದಾಗಿದೆ ಎಂದರು.
ಜಾತ್ರೆಯ ಆಹ್ವಾನ ಪತ್ರಿಕೆಯಲ್ಲಿ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಹೆಸರಿಲ್ಲ. ಯಾವ ಮಠದ ಸ್ವಾಮೀಜಿಗಳು ತಮ್ಮ ಹೆಸರು ಇಲ್ಲದೆ ಆಹ್ವಾನ ಪತ್ರಿಕೆ ಮಾಡಿಸುವುದಿಲ್ಲ. ಆದರೆ ಗವಿಶ್ರೀಗಳು ಸಾಧಕರನ್ನು ಗುರುತಿಸಿ ಆಹ್ವಾನಿಸಿದ್ದಾರೆ ಎಂದರು.