ಸಾರಾಂಶ
ಕೊಪ್ಪಳ ಗವಿಸಿದ್ದಪ್ಪಜ್ಜನ ಜಾತ್ರೆ ಮಜ್ಜನ ಜಾತ್ರೆ ಆಗಿದೆ. ಸ್ನಾನದಿಂದ ದೇಹದ ಕೊಳಕು ಹೇಗೆ ಹೋಗುತ್ತದೆಯೋ ಹಾಗೆ ಗವಿಸಿದ್ದಪ್ಪಜ್ಜನ ಜಾತ್ರೆ ಬದುಕಿನ ಕೊಳಕು ತೊಳೆಯುವ ಮಜ್ಜನ ಜಾತ್ರೆ ಆಗಿದೆ.
ಕೊಪ್ಪಳ: ಕೊಪ್ಪಳ ಗವಿಸಿದ್ದಪ್ಪಜ್ಜನ ಜಾತ್ರೆ ಮಜ್ಜನ ಜಾತ್ರೆ ಆಗಿದೆ. ಸ್ನಾನದಿಂದ ದೇಹದ ಕೊಳಕು ಹೇಗೆ ಹೋಗುತ್ತದೆಯೋ ಹಾಗೆ ಗವಿಸಿದ್ದಪ್ಪಜ್ಜನ ಜಾತ್ರೆ ಬದುಕಿನ ಕೊಳಕು ತೊಳೆಯುವ ಮಜ್ಜನ ಜಾತ್ರೆ ಆಗಿದೆ ಎಂದು ಶಿವಗಂಗಾ ಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಸಂಸ್ಥಾನಮಠದ ಡಾ. ಮಲ್ಲಯ್ಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಹಿಂದೆ ಕಳುವು ಮಾಡಿದ ಅಂದಪ್ಪನಿಗೆ ಗವಿದ್ದೇಶ್ವರರು ಅರಿವು ತುಂಬಿದರು. ಆತ ಮುಂದೊಂದು ದಿನ ಕಪ್ಪತ್ತ ಗುಡ್ಡದಲ್ಲಿ ಅನ್ನ ದಾಸೋಹ ಮಾಡಿದ. ಅನ್ನ, ಸುಜ್ಞಾನದ ಕಡೆಗೆ ಕೊಂಡೋಯ್ಯುವ ಮಠ ಗವಿಮಠ ಆಗಿದೆ. ಮಾನಸಿಕವಾಗಿ ಎಲ್ಲರೂ ಕಳ್ಳರೆ. ಕದಿಯದೆ ಇರಬಹುದು. ಮಾನಸಿಕವಾಗಿ ಅದು ಬೇಕು, ಇದು ಬೇಕು ಎಂಬುದು ಸಹ ಮಾನಸಿಕ ಕಳ್ಳತನ. ಮನಸ್ಸಿನಲ್ಲಿ ದೇವರು ಆಸೆಗಳನ್ನು ಬಿತ್ತುತ್ತಾನೆ. ಆ ಆಸೆಗಳನ್ನು ಜಯಿಸಿದ ಮೇಲೆ ನನ್ನ ಹತ್ತಿರ ಬಾ ಅನ್ನುತ್ತಾನೆ. ಕ್ರಾಮ,ಕ್ರೋದ, ಲೋಭಗಳನ್ನು ಜಯಿಸಬೇಕಿದೆ. ಅಜ್ಷಾನದ ಹೆಗ್ಗಣಗಳಿಂದ ದೇಹ ಎಂಬ ಮನೆ ಬಿದ್ದು ಹೋಗುತ್ತದೆ. ಇದಕ್ಕೆ ಸುಜ್ಷಾನದ ಔಷಧದ ಅವಶ್ಯಕತೆ ಇದೆ ಎಂದರು.ಶಾಸನಗಳಿಂದ ಉಳಿವು ಸಾದ್ಯವಿಲ್ಲ. ಅರಿವಿನಿಂದ ಉಳಿವು ಸಾದ್ಯ ಇದೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಬೇಕು ಎಂದು ಗಳಿಸುವುದು ಅಜ್ಷಾನದ ಪರಮಾವಧಿ ಎಂದರು.
ಗವಿಸಿದ್ದೇಶ್ವರ ಜಾತ್ರೆಯಲ್ಲಿ ನಾಲಿಗೆಗೂ ರುಚಿಯಾದ ದಾಸೋಹ, ತಲೆಗೆ ಸವಿಯಾದ ಜ್ಷಾನ ಸಿಗುತ್ತದೆ. ಬುದ್ದನ ಹೃದಯವಂತಿಗೆ, ಬುದ್ದನ ತ್ಯಾಗವನ್ನು, ವಿವೇಕಾನಂದರ ಜ್ಷಾನವನ್ನು, ಚಾಣಖಕ್ಯನ ಚಾಣಾಕ್ಷತನವನ್ನು ಈಗಿನ ಗವಿಶ್ರೀಗಳಲ್ಲಿ ಕಾಣುತ್ತೇವೆ. ಅವರ ಸಾದನೆ ಅಗ್ರಗಣ್ಯ ಆಗಿದೆ. ನಮ್ಮ ಶರೀರವೇ ಒಂದು ಗವಿ. ಒಳಗಿರುವ ಆತ್ಮವ ಗವಿಸಿದ್ದಪ್ಪಜ್ಜ ಆಗಿದ್ದಾನೆ ಎಂದರು.