ಗಾಯತ್ರಿ ಸಿದ್ದೇಶ್ವರ ₹32.84 ಕೋಟಿ ಆಸ್ತಿ ಒಡತಿ

| Published : Apr 16 2024, 01:00 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪತ್ನಿ ಸ್ಥಿರಾಸ್ತಿ 6.11 ಕೋಟಿ ಹಾಗೂ ಚರಾಸ್ತಿ 26.73 ಕೋಟಿ ಸೇರಿದಂತೆ ಒಟ್ಟು 32.84 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

- ದಾವಣಗೆರೆ ಬಿಜೆಪಿ ಅಭ್ಯರ್ಥಿ ಬಳಿ 3.5 ಕೆಜಿ ಚಿನ್ನ, 5.50 ಕೆಜಿ ಬೆಳ್ಳಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪತ್ನಿ ಸ್ಥಿರಾಸ್ತಿ ₹6.11 ಕೋಟಿ ಹಾಗೂ ಚರಾಸ್ತಿ ₹26.73 ಕೋಟಿ ಸೇರಿದಂತೆ ಒಟ್ಟು ₹32.84 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಗಾಯತ್ರಿ ಸಿದ್ದೇಶ್ವರ ಕೈಯಲ್ಲಿ ₹87,949 ನಗದು ಇದೆ. ಬ್ಯಾಂಕಿನಲ್ಲಿ ₹48.44 ಲಕ್ಷ ಹಣ ಹೊಂದಿದ್ದಾರೆ. ವಿಮಾ ಪಾಲಿಸಿಗಳಲ್ಲಿ ₹22.34 ಲಕ್ಷ ಹೂಡಿಕೆ ಮಾಡಿದ್ದು, 3.5 ಕೆಜಿ ಚಿನ್ನಾಭರಣ, 5.50 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ₹14.70 ಲಕ್ಷ ಮೌಲ್ಯದ 2.04 ಎಕರೆ ಕೃಷಿ ಭೂಮಿ, ₹5.08 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, ₹21.50 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಗಾಯತ್ರಿ ಅವರು, ₹5.89 ಲಕ್ಷ ಸಾಲವನ್ನೂ ಹೊಂದಿದ್ದಾರೆ. ಯಾವುದೇ ವಾಹನ ಹೊಂದಿಲ್ಲ. ಯಾವುದೇ ಅಪರಾಧ ಪ್ರಕರಣ ಇಲ್ಲವೆಂದು ಘೋಷಣೆ ಮಾಡಿದ್ದಾರೆ.

- - - ಬಾಕ್ಸ್‌ 5 ವರ್ಷದಲ್ಲಿ ₹20.17 ಕೋಟಿ ಆಸ್ತಿ ಹೆಚ್ಚಳದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಒಟ್ಟು ಆಸ್ತಿ 5 ವರ್ಷದಲ್ಲಿ ₹20.17 ಕೋಟಿಗಳಷ್ಟು ಹೆಚ್ಚಳವಾಗಿದೆ. ಗಾಯತ್ರಿ ಸಿದ್ದೇಶ್ವರ ಪತಿ, ಸಂಸದ ಜಿ.ಎಂ.ಸಿದ್ದೇಶ್ವರ 2019ರ ಲೋಕಸಭೆ ಚುನಾವಣೆ ವೇಳೆ ಸಲ್ಲಿಸಿದ್ದ ಆಸ್ತಿ ವಿವರದಂತೆ ಗಾಯತ್ರಿ ಸಿದ್ದೇಶ್ವರ ₹4.76 ಕೋಟಿ ಚರಾಸ್ತಿ, ₹7.91 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು ₹12.67 ಕೋಟಿ ಆಸ್ತಿ ಹೊಂದಿದ್ದರು.

ಚುನಾವಣೆಗೆ ಇದೀಗ ಗಾಯತ್ರಿ ಸಿದ್ದೇಶ್ವರ ನಾಮಪತ್ರ ಜೊತೆ ಸಲ್ಲಿಸಿದ ಪ್ರಮಾಣದಲ್ಲಿ ಘೋಷಿಸಿದಂತೆ ₹6.11 ಕೋಟಿ ಸ್ಥಿರಾಸ್ತಿ, ₹26.73 ಕೋಟಿ ಮೌಲ್ಯದ ಚರಾಸ್ತಿ ಒಳಗೊಂಡಂತೆ ₹32.84 ಕೋಟಿ ಆಸ್ತಿ ಹೊಂದಿದ್ದಾರೆ. ಕಳೆದ 5 ವರ್ಷದಲ್ಲಿ ಗಾಯತ್ರಿ ಸಿದ್ದೇಶ್ವರರ ಆಸ್ತಿ 20.17 ಕೋಟಿ ರು.ಗಳಷ್ಟು ಆಸ್ತಿ ಹೆಚ್ಚಳವಾಗಿದೆ. ಸಂಸದ ಸಿದ್ದೇಶ್ವರ ಆಸ್ತಿ ಸಹ 5 ವರ್ಷದಲ್ಲಿ ಹೆಚ್ಚಾಗಿದೆ. ಕಳೆದ ಚುನಾವಣೆ ವೇಳೆ ಸಿದ್ದೇಶ್ವರ ಆಸ್ತಿ 19.39 ಕೋಟಿ ಇತ್ತು. ಈಗ ಪತ್ನಿ ಗಾಯತ್ರಿ ಸಿದ್ದೇಶ್ವರ ಸಲ್ಲಿಸಿದ ನಾಮಪತ್ರದಲ್ಲಿ 26.62 ಕೋಟಿ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದು, 5 ವರ್ಷದಲ್ಲಿ 7.23 ಕೋಟಿ ಆಸ್ತಿ ಹೆಚ್ಚಾಗಿದೆ. 2014ರಲ್ಲಿ ಡಾ.ಜಿ.ಎಂ.ಸಿದ್ದೇಶ್ವರ 12.29 ಕೋಟಿ ರು. ಆಸ್ತಿ ಹೊಂದಿದ್ದರು.