ಸಾರಾಂಶ
ಹಲವಾರು ಪ್ರಶಸ್ತಿ ಪುರಸ್ಕೃತ ನಾಗರಾಜ್ ಬೈರಿ, ಎಕೆಬಿಎಂಎಸ್ ಪದಾಧಿಕಾರಿಗಳಾಗಿ ಆಯ್ಕೆಯಾದ ಶ್ರೀಕಂಠಕುಮಾರ್, ನವೀನಕುಮಾರ್, ಡಿ.ಟಿ. ಪ್ರಕಾಶ್, ಡಾ. ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರುನಗರದ ಹೂಟಗಳ್ಳಿ ಕೆಎಚ್.ಬಿ ಕಾಲೋನಿಯ ಗಾಯತ್ರಿ ವಿಪ್ರ ಸಂಘದ ವತಿಯಿಂದ ಶ್ರೀ ಅನಂತೆಶ್ವರ ಭವನದಲ್ಲಿ ಶ್ರೀ ಆಚಾರ್ಯತ್ರಯರ ಜಯಂತಿ, ಪೂಜೆ, ಭಕ್ತಿ, ಸಂಗೀತ, ಭಜನೆ, ವಿಷ್ಣು ಸಹಸ್ರನಾಮ, ಪ್ರವಚನ , ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಕುಟುಂಬ ಸಮೇತ ಭಾಗವಹಿಸಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ದೇವರ ಕೃಪೆಗೆ ಪಾತ್ರರಾದರು. ಹಲವಾರು ಪ್ರಶಸ್ತಿ ಪುರಸ್ಕೃತ ನಾಗರಾಜ್ ಬೈರಿ, ಎಕೆಬಿಎಂಎಸ್ ಪದಾಧಿಕಾರಿಗಳಾಗಿ ಆಯ್ಕೆಯಾದ ಶ್ರೀಕಂಠಕುಮಾರ್, ನವೀನಕುಮಾರ್, ಡಿ.ಟಿ. ಪ್ರಕಾಶ್, ಡಾ. ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.