ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ನೂತವಾಗಿ ರಚಿಸಲಾದ ಐದು ನಗರ ಪಾಲಿಕೆಗಳ ವಾರ್ಡ್ ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿರುವ ರಾಜ್ಯ ಸರ್ಕಾರವು, ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಹೊಸ ವಾರ್ಡ್ ಒಂದನ್ನು ಸೇರ್ಪಡೆಗೊಳಿಸುವ ಮೂಲಕ ಐದು ನಗರ ಪಾಲಿಕೆಯ ವಾರ್ಡ್ ಸಂಖ್ಯೆಯನ್ನು 368 ರಿಂದ 369ಕ್ಕೆ ಏರಿಕೆ ಮಾಡಲಾಗಿದೆ.ಈ ಮೂಲಕ ಸಂಖ್ಯಾಶಾಸ್ತ್ರದಲ್ಲಿ ಅದೃಷ್ಟದ ಸಂಖ್ಯೆ ಎಂದು ಪರಿಗಣಿಸುವ ‘9’ಕ್ಕೆ ಸಮಗೊಳಿಸಿದೆ!
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದ ನಂತರ ಸೆ.2ರಂದು ಜಿಬಿಎ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ವಿಂಗಡಣಾ ಆಯೋಗ ರಚನೆ ಮಾಡಲಾಗಿತ್ತು. ಆಯೋಗದ ವರದಿ ಆಧಾರಿಸಿ ನಗರಾಭಿವೃದ್ಧಿ ಇಲಾಖೆಯು ಸೆ.30 ರಂದು ಐದು ನಗರ ಪಾಲಿಕೆಯ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗಿತ್ತು.ಈ ವೇಳೆ ಸುಮಾರು 4 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆಯಾಗಿದ್ದವು. ಆ ಆಕ್ಷೇಪಣೆಗಳನ್ನು ಪರಿಶೀಲನೆ ಮಾಡಿ ಇದೀಗ ಅಂತಿಮ ಅಧಿಸೂಚನೆ ಮೂಲಕ ವಾರ್ಡ್ ಸಂಖ್ಯೆಯನ್ನು ಅಂತಿಮಗೊಳಿಸಿದೆ.
ಈ ಪೈಕಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಒಂದು ವಾರ್ಡ್ ಸೇರ್ಪಡೆಗೊಳಿಸಿದೆ. ಉಳಿದಂತೆ ನಾಲ್ಕು ನಗರ ಪಾಲಿಕೆಯಲ್ಲಿ ವಾರ್ಡ್ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಮೂಲಕ ನಾಲ್ಕು ನಗರ ಪಾಲಿಕೆ ಹಾಗೂ ಐದೂ ನಗರ ಪಾಲಿಕೆಯ ಒಟ್ಟು ವಾರ್ಡ್ ಸಂಖ್ಯೆಯು (3+6+9=18, 1+8=9) ಸಂಖ್ಯಾಶಾಸ್ತ್ರದಲ್ಲಿ ಲಕ್ಕಿ ನಂಬರ್ ಎಂದು ಭಾವಿಸುವ ‘9’ಕ್ಕೆ ಸರಿಹೊಂದುವಂತೆ ವಾರ್ಡ್ ರಚಿಸಲಾಗಿದೆ.---
ವಾರ್ಡ್ ಸಂಖ್ಯೆ, ಹೆಸರು ಬದಲಾವಣೆಐದು ನಗರ ಪಾಲಿಕೆ ವಾರ್ಡ್ ಕರಡು ಅಧಿಸೂಚನೆಯಲ್ಲಿ ಪ್ರಕಟಿಸಲಾದ ವಾರ್ಡ್ ಸಂಖ್ಯೆ ಹಾಗೂ ವಾರ್ಡ್ ಹೆಸರುಗಳನ್ನು ಸಾಕಷ್ಟು ಬದಲಾವಣೆ ಮಾಡಲಾಗಿದೆ. ಜತೆಗೆ ಕೆಲವು ವಾರ್ಡ್ ಹೆಸರುಗಳ ಮುಂದೆ ವಾರ್ಡ್ ಎಂದು ಸೇರ್ಪಡೆ ಮಾಡಲಾಗಿದೆ. ವಾರ್ಡ್ ಹೆಸರಿನಲ್ಲಿ ಇದ್ದ ಅಕ್ಷರ ದೋಷಗಳನ್ನು ಸರಿಪಡಿಸಲಾಗಿದೆ. ಆದರೆ, ಅಂತಿಮ ಅಧಿಸೂಚನೆಯಲ್ಲಿ ಅಕ್ಷರ ದೋಷ ಇರುವುದು ಕಂಡು ಬಂದಿದೆ.
--------ಯಾವ ಪಾಲಿಕೆ ಎಷ್ಟು ವಾರ್ಡ್‌ನಗರ ಪಾಲಿಕೆಕರಡು ಅಧಿಸೂಚನೆ ವಾರ್ಡ್ ಸಂಖ್ಯೆಅಂತಿಮ ಅಧಿಸೂಚನೆ ವಾರ್ಡ್ ಸಂಖ್ಯೆಬೆಂ.ಪಶ್ಚಿಮ111112
ಬೆಂ.ಪೂರ್ವ5050ಬೆಂ.ಉತ್ತರ7272ಬೆಂ.ದಕ್ಷಿಣ7272
ಬೆಂ.ಕೇಂದ್ರ6363--------
ಚುನಾವಣೆಗೆ ಎರಡೇ ಹೆಜ್ಜೆಬೆಂಗಳೂರಿನ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆದು ಬರೋಬ್ಬರಿ 10 ವರ್ಷ ಕಳೆದಿದ್ದು, 2015ರಲ್ಲಿ ಬಿಬಿಎಂಪಿಯ 198 ವಾರ್ಡ್‌ಗೆ ಚುನಾವಣೆ ನಡೆದಿತ್ತು. ಆಯ್ಕೆಯಾದ ಜನಪ್ರತಿನಿಧಿಗಳು ಐದು ವರ್ಷ ಆಡಳಿತ ನಡೆಸಿ 2020ರ ಸೆಪ್ಟಂಬರ್‌ಗೆ ಅಧಿಕಾರ ಪೂರ್ಣಗೊಳಿಸಿದ್ದರು. ಆ ಬಳಿಕ 2 ಬಾರಿ ವಾರ್ಡ್ ವಿಂಗಡಣೆ ನಡೆಸಲಾಗಿತ್ತು. ಆದರೆ, ಚುನಾವಣೆ ನಡೆದಿರಲಿಲ್ಲ. ಇದೀಗ ಬಿಬಿಎಂಪಿ ವಿಸರ್ಜನೆ ಮಾಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ, ಅದರಡಿ ಐದು ನಗರ ಪಾಲಿಕೆ ಸೃಷ್ಟಿ ಮಾಡಲಾಗಿದೆ. ಐದೂ ನಗರ ಪಾಲಿಕೆಗೆ ವಾರ್ಡ್ ವಿಂಗಡಣೆ ಅಂತಿಮಗೊಳಿಸಲಾಗಿದ್ದು, ವಾರ್ಡ್‌ಗೆ ಮೀಸಲಾತಿ ನಿಗದಿ ಪಡಿಸಿ ಚುನಾವಣೆ ಅಧಿಸೂಚನೆ ಹೊರಡಿಸುವುದಷ್ಟೇ ಬಾಕಿ ಇದೆ. ಅಂದುಕೊಂಡಂತೆ ನಡೆದರೆ ಫೆಬ್ರವರಿ ಅಂತ್ಯದೊಳಗೆ ಚುನಾವಣೆ ನಡೆಯಲಿದೆ. ಒಂದು ವೇಳೆ ನಡೆಯದಿದ್ದರೆ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಇರುವುದರಿಂದ ಚುನಾವಣೆ ಅಸಾಧ್ಯವಾಗಲಿದೆ. ಮುಂದಿನ ಮೇ ನಂತರ ಚುನಾವಣೆ ನಡೆಸಬೇಕಾಗಲಿದೆ.
--------ಹಲವು ವಾರ್ಡ್‌ಗೆ ಗಣ್ಯರ ಹೆಸರು ಸೇರ್ಪಡೆ, ಕಡೆಗಣನೆನಾಡಪ್ರಭು ಕೆಂಪೇಗೌಡರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪು, ಕರ್ನಾಟಕ ರತ್ನ ನಟ ಪುನೀತ್ ರಾಜಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ, ಕೆಂಗಲ್ ಹನುಮಂತಯ್ಯ ಹೀಗೆ ಕೆಲವು ಹೆಸರುಗಳನ್ನು ವಾರ್ಡ್‌ಗೆ ನಾಮಕರಣ ಮಾಡಲಾಗಿತ್ತು. ಪರಿಷ್ಕರಣೆ ವೇಳೆ ಕೆಲವು ಹೆಸರು ಕೈ ಬಿಡಲಾಗಿದೆ. ಮತ್ತೆ ಕೆಲವು ಗಣ್ಯರ ಹೆಸರು ಸೇರ್ಪಡೆ ಮಾಡಲಾಗಿದೆ.---
ಬೆಂಗಳೂರು ಪೂರ್ವ ನಗರ ಪಾಲಿಕೆವಾರ್ಡ್ ಸಂಖ್ಯೆ-501 ಕೆ.ನಾರಾಯಣಪುರ, 2. ಹೊರಮಾವು, 3.ಚೆಲ್ಲಕೆರೆ, 4.ಬಾಬುಸಾಬ್ ಪಾಳ್ಯ, 5.ಹೊಯ್ಸಳ ನಗರ ಪೂರ್ವ,6. ಕಲ್ಕೆರೆ, 7.ಕೆ.ಚೆನ್ನಸಂದ್ರ, 8.ಟಿ.ಸಿ.ಪಾಳ್ಯ, 9.ಭಟ್ಟರಹಳ್ಳಿ, 10.ಮೇಡಹಳ್ಳಿ,11. ಬಸವನಪುರ,12. ಚಿಕ್ಕದೇವಸಂದ್ರ, 13.ದೇವಸಂದ್ರ, 14.ಕೆ.ಆರ್.ಪುರ, 15.ರಾಮಮೂರ್ತಿ ನಗರ, 16.ಕೊತ್ತೂರು, 17.ವಿಜಿನಾಪುರ, 18.ದೂರವಾಣಿನಗರ, 19.ಕೆ.ಎಸ್.ನಿಸಾರ್ ಅಹಮದ್ ವಾರ್ಡ್, 20.ಎ.ನಾರಾಯಣಪುರ, 21.ಉದಯ್‌ನಗರ, 22.ಮಹದೇವಪುರ, 23.ಸಂಗಮ್ ವಾರ್ಡ್, 24.ವಿಜ್ಞಾನನಗರ, 25.ಎಲ್.ಬಿ.ಶಾಸ್ತ್ರಿನಗರ, 26.ಜಗದೀಶ್‌ನಗರ, 27.ವಿಭೂತಿಪುರ, 28.ಬೈರತಿ, 29.ಹೂಡಿ, 30.ಬೆಳತ್ತೂರು, 31.ಕಾಡುಗೋಡಿ, 32.ಚನ್ನಸಂದ್ರ, 33.ಎಸ್.ಎಂ.ಕೃಷ್ಣವಾರ್ಡ್, 34.ಕಾವೇರಿನಗರ, 35.ಗರುಡಾಚಾರ್ ಪಾಳ್ಯ, 36.ಭಾರತ್ ಐಕ್ಯ ವಾರ್ಡ್, 37.ಕುಂದಲಹಳ್ಳಿ, 38.ವೈಟ್‌ಫೀಲ್ಡ್, 39.ಹಗದೂರು, 40.ವರ್ತೂರು, 41.ಮುನ್ನೇನಕೊಳಲು, 42.ಪ್ರಿಯದರ್ಶಿನಿ ವಾರ್ಡ್, 43.ದೊಡ್ಡನಕ್ಕುಂದಿ, 44.ಅಶ್ವಥ್‌ನಗರ, 45.ಮಾರತ್‌ಹಳ್ಳಿ, 46.ಯಮಲೂರು, 47.ಬೆಳ್ಳಂದೂರು, 48.ಪಣತ್ತೂರು, 49.ಶಿವನಸಮುದ್ರ ವಾರ್ಡ್, 50.ಗುಂಜೂರು.---
ಬೆಂಗಳೂರು ದಕ್ಷಿಣ ನಗರ ಪಾಲಿಕೆವಾರ್ಡ್ ಸಂಖ್ಯೆ-72 1. ಪದ್ಮನಾಭನಗರ, 2. ಕದಿರೇನಹಳ್ಳಿ, 3. ಕುಮಾರಸ್ವಾಮಿ ಲೇಔಟ್, 4. ಬನಶಂಕರಿ ದೇವಸ್ಥಾನ ವಾರ್ಡ್, 5. ಕಾನೆ ಮುನೇಶ್ವರ ವಾರ್ಡ್, 6. ಗೌಡನಪಾಳ್ಯ, 7. ಭೈರಸಂದ್ರ, 8. ತಿಲಕನಗರ, 9. ಎನ್‌ಎಎಲ್ ಲೇಔಟ್, 10. ಅಬ್ದುಲ್ ಕಲಾಂ ನಗರ, 11. ಜಯನಗರ ಪೂರ್ವ, 12. ಪಟ್ಟಾಭಿರಾಮನಗರ, 13. ಮಾರೇನಹಳ್ಳಿ ದಕ್ಷಿಣ, 14. ಜೆ.ಪಿ.ನಗರ, 15. ಶಾಕಾಂಬರಿ ನಗರ, 16. ಸಾರಕ್ಕಿ, 17. ಎನ್‌ಎಸ್ ಪಾಳ್ಯ, 18. ವಿಶ್ವಮಾನವ ಕುವೆಂಪು ವಾರ್ಡ್, 19. ಹೊಸ ತಾವರೇಕೆರೆ, 20. ಮಡಿವಾಳ, 21. ಚಿಕ್ಕ ಆಡುಗೋಡಿ, 22. ಎಸ್.ಜಿ.ಪಾಳ್ಯ, 23. ಲಕ್ಕಸಂದ್ರ, 24. ಎ.ಆಡುಗೊಡಿ, 25. ನ್ಯಾಷನಲ್ ಗೇಮ್ಸ್ ವಿಲೇಜ್, 26. ಈಜಿಪುರ, 27. ಲಕ್ಷ್ಮಿದೇವಿ ವಾರ್ಡ್, 28. ಕೋರಮಂಗಲ ಪೂರ್ವ, 29. ಕೋರಮಂಗಲ ಪಶ್ಚಿಮ, 30. ಜಕ್ಕಸಂದ್ರ, 31. ಕಸವನಹಳ್ಳಿ, 32. ಕೂಡ್ಲು, 33. ನಾಗನಾಥಪುರ, 34. ಚಿಕ್ಕ ತೋಗೂರು, 35. ವಿಶ್ವಪ್ರಿಯ ನಗರ, 36. ಬೇಗೂರು, 37. ಯಲೇನಹಳ್ಳಿ, 38. ದೊಡ್ಡಕಮ್ಮನಹಳ್ಳಿ, 39. ಗೊಟ್ಟಿಗೆರೆ, 40. ಅಂಜನಾಪುರ, 41. ಕೊತ್ತನೂರು, 42. ಆರ್.ಬಿ.ಐಲೇಔಟ್, 43. ಭೀಮೇಶ್ವರನಗರ, 44. ಹರಿನಗರ, 45. ಕೋಣನಕುಂಟೆ, 46. ಯಲಚೇನಹಳ್ಳಿ, 47. ಚಂದ್ರನಗರ, 48. ವಸಂತಪುರ, 49. ಉತ್ತರಹಳ್ಳಿ, 50. ಸಾರ್ವಭೌಮನಗರ, 51. ಸುಬ್ರಹ್ಮಣ್ಯಪುರ, 52. ತಲಘಟ್ಟಪುರ, 53. ಜರಗನಹಳ್ಳಿ, 54. ಕೆಂಗಲ್ ಹನುಮಂತಯ್ಯ ದಕ್ಷಿಣ, 55. ಪುಟ್ಟೇನಹಳ್ಳಿ, 56. ದೊರೆಸಾನಿ ಪಾಳ್ಯ, 57. ಹುಳಿಮಾವು, 58. ಅರಕೆರೆ, 59. ವಿಜಯಬ್ಯಾಂಕ್ ಲೇಔಟ್, 60. ಬಿಳೇಕಹಳ್ಳಿ, 61. ಕೋಡಿಚಿಕ್ಕನಹಳ್ಳಿ, 62. ದೇವರಚಿಕ್ಕನಹಳ್ಳಿ, 63. ಬೊಮ್ಮನಹಳ್ಳಿ, 64. ಹೊಂಗಸಂದ್ರ, 65. ಗಾರ್ವೆಬಾವಿಪಾಳ್ಯ, 66. ಸಿಂಗಸಂದ್ರ, 67. ಬಂಡೆಪಾಳ್ಯ, 68. ಮಂಗಮ್ಮನಪಾಳ್ಯ, 69. ಹೊಸಪಾಳ್ಯ, 70. ಇಬ್ಬಲೂರು, 71. ಅಗರ, 72. ಎಚ್‌ಎಸ್‌ಆರ್ ಲೇಔಟ್.
----ಬೆಂಗಳೂರು ಕೇಂದ್ರ ನಗರ ಪಾಲಿಕೆ
ವಾರ್ಡ್ ಸಂಖ್ಯೆ-631- ರಾಮಸ್ವಾಮಿಪಾಳ್ಯ, 2-ಜಯಮಹಲ್, 3- ವಸಂತನಗರ, 4-ಸಂಪಂಗಿರಾಮನಗರ, 5-ಶಿವಾಜಿನಗರ, 6-ಭಾರತಿನಗರ, 7-ಕೆ.ಕಾಮರಾಜ ವಾರ್ಡ್, 8-ಹಲಸೂರು, 9-ಹೋಯ್ಸಳ ನಗರ ಕೇಂದ್ರ, 10-ಕಾಕ್ಸ್‌ಟೌನ್, 11-ಹಳೇ ಬೈಯಪ್ಪನಹಳ್ಳಿ, 12-ಕಸ್ತೂರಿನಗರ, 13-ಕೃಷ್ಣಯ್ಯನಪಾಳ್ಯ, 14-ನಾಗವಾರಪಾಳ್ಯ, 15-ಇಂದಿರಾನಗರ, 16-ನ್ಯೂತಿಪ್ಪಸಂದ್ರ, 17-ಕಗ್ಗದಾಸಪುರ, 18-ಜಿ.ಎಂ.ಪಾಳ್ಯ, 19-ಜೀವನಭೀಮಾನಗರ, 20-ಕೋಡಿಹಳ್ಳಿ, 21-ಕೋನೇನ ಅಗ್ರಹಾರ, 22-ದೊಮ್ಮಲೂರು, 23-ಜೋಗಪಾಳ್ಯ, 24-ಅಗರಂ, 25-ಅಶೋಕನಗರ, 26-ವನ್ನಾರಪೇಟೆ, 27-ಅಂಬೇಡ್ಕರ್ ನಗರ, 28-ನೀಲಸಂದ್ರ, 29-ಅಸ್ಟೀನ್‌ಟೌನ್, 30-ವಿನಾಯನಗರ, 31-ಶಾಂತಿನಗರ, 32-ಸಿಲ್ವರ್ ಜ್ಯುಬಿಲಿ ಪಾರ್ಕ್ ವಾರ್ಡ್, 33-ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್, 34-ಡಿ.ವಿ.ಗುಂಡಪ್ಪ ವಾರ್ಡ್, 35-ಹೊಂಬೇಗೌಡನಗರ, 36-ಸೋಮೇಶ್ವರನಗರ, 37-ಬಿಎಚ್‌ಇಎಲ್ ವಾರ್ಡ್, 38-ಕನಕಪಾಳ್ಯ, 39-ವೆಂಕಟರೆಡ್ಡಿನಗರ, 40-ಅಶೋಕ ಪಿಲ್ಲರ್, 41-ವಿ.ವಿ.ಪುರಂ, 42-ಸುಂಕೇನಹಳ್ಳಿ, 43-ದೇವರಾಜ ಅರಸು ವಾರ್ಡ್, 44-ಚಾಮರಾಜಪೇಟೆ, 45-ಕೆ.ಆರ್.ಮಾರುಕಟ್ಟೆ, 46-ಚೆಲುವಾದಿಪಾಳ್ಯ, 47-ಐಪಿಡಿ ಸಾಲಪ್ಪ ವಾರ್ಡ್, 48-ಆಜಾದ್‌ನಗರ, 49-ಕಸ್ತೂರ ಬಾ ವಾರ್ಡ್, 50-ಜೆಜೆಆರ್ ನಗರ, 51-ಹಳೇ ಗುಡ್ಡದಹಳ್ಳಿ, 52-ಪಾದರಾಯನಪುರ, 53-ರಾಯಪುರ, 54-ಬಿನ್ನಿಪೇಟೆ, 55-ಭುವನೇಶ್ವರಿನಗರ, 56-ಗೋಪಾಲಪುರ, 57-ಕಾಟನ್‌ಪೇಟೆ, 58-ಚಿಕ್ಕಪೇಟೆ, 59-ನೆಹರುನಗರ, 60-ಶೇಷಾದ್ರಿಪುರ, 61-ದತ್ತಾತ್ರೇಯ ವಾರ್ಡ್, 62-ಸ್ವತಂತ್ರಪಾಳ್ಯ ವಾರ್ಡ್, 63-ಓಕಳಿಪುರ.
---ಬೆಂಗಳೂರು ಉತ್ತರ ನಗರ ಪಾಲಿಕೆ
ವಾರ್ಡ್ ಸಂಖ್ಯೆ-721- ರಾಜಾ ಕೆಂಪೇಗೌಡ ಮಾರ್ಗ, 2- ಆಕಾಶ್ ವಾರ್ಡ್, 3 ಯಲಹಂಕ ಓಲ್ಡ್ ಟೌನ್, 4 ನ್ಯಾಯಾಂಗ ಬಡಾವಣೆ, 5 ಯಲಹಂಕ ಸ್ಯಾಟಲೈಟ್ ಟೌನ್, 6-ದೊಡ್ಡಬೆಟ್ಟಹಳ್ಳಿ, 7 ಅಟ್ಟುರು, 8 ಸಿಂಗಾಪುರ, 9 ಕುವೆಂಪುನಗರ, 10 ವಿದ್ಯಾರಣ್ಯಪುರ, 11 ದೊಡ್ಡಬೊಮ್ಮಸಂದ್ರ, 12 ತಿಂಡ್ಲು, 13 ಕೊಡಿಗೆಹಳ್ಳಿ, 14 ರಾಜೀವ್‌ಗಾಂಧಿನಗರ, 15 ಬ್ಯಾಟರಾಯನಪುರ, 16 ಅಮೃತಹಳ್ಳಿ, 17 ಜಕ್ಕೂರು, 18 ಕೆಂಪಾಪುರ, 19 ಥಣಿಸಂದ್ರ, 20 ಸಂಪಿಗೆಹಳ್ಳಿ, 21 ಕೋಗಿಲು, 22 ನಾಗವಾರ, 23 ಹೆಣ್ಣೂರು, 24 ಎಚ್‌ಬಿಆರ್ ಲೇಔಟ್, 25 ಗೋವಿಂದಪುರ, 26 ಸಮಾಧಾನ ನಗರ, 27 ಕೆ.ಜೆ.ಹಳ್ಳಿ, 28 ವೆಂಕಟೇಶಪುರಂ, 29 ಲಿಂಗರಾಜಪುರ , 30 ಕಾಚರಕನಹಳ್ಳಿ, 31 ಕಲ್ಯಾಣನಗರ, 32 ಬಾಣಸವಾಡಿ, 33ಎಚ್‌ಆರ್‌ಬಿಆರ್ ಲೇಔಟ್, 34 ಸುಬ್ಬಯ್ಯನಪಾಳ್ಯ, 35 ಕಮ್ಮನಹಳ್ಳಿ, 36 ಮಾರುತಿಸೇವಾ ನಗರ, 37 ಜೀವನಹಳ್ಳಿ, 38 ಶಾಂಪುರ, 39 ಕಾವಲ್ ಬೈರಸಂದ್ರ, 40 ಶಕ್ತಿ ನಗರ, 41 ಪೆರಿಯಾರ್ ನಗರ, 42 ಅರುಣಾ ಆಸಿಫ್ ಅಲಿ ವಾರ್ಡ್, 43 ವರಲಕ್ಷ್ಮೀ ನಗರ, 44 ದೊಡ್ಡಣ್ಣ ನಗರ, 45 ಕುಶಾಲ್ ನಗರ, 46 ಸಗಾಯಪುರಂ, 47 ಪುಲಕೇಶಿನಗರ, 48 ಎಸ್.ಕೆ.ಗಾರ್ಡನ್, 49 ಜಯಚಾಮರಾಜೇಂದ್ರ ನಗರ, 50 ದಿಣ್ಣೂರು, 51 ಮನೋರಾಯನಪಾಳ್ಯ, 52 ವಿಶ್ವನಾಥ ನಾಗೇನಹಳ್ಳಿ, 53, ಆರ್.ಟಿ.ನಗರ, 54 ಗಂಗೇನಹಳ್ಳಿ, 55 ಗಂಗಾನಗರ, 56 ಹೆಬ್ಬಾಳ, 57 ಭೂಪಸಂದ್ರ, 58 ನಾಗಶೆಟ್ಟಿಹಳ್ಳಿ, 59 ಗೆದ್ದಲಹಳ್ಳಿ, 60 ಜಾಲಹಳ್ಳಿ, 61 ಎಚ್‌ಎಂಟಿ ವಾರ್ಡ್, 62 ಬೃಂದಾವನ ನಗರ, 63 ಜೆಪಿ ಪಾರ್ಕ್, 64 ಯಶವಂತಪುರ, 65 ಅಬ್ಬಿಗೆರೆ, 66 ಕಮ್ಮಗೊಂಡನಹಳ್ಳಿ, 67 ಶೆಟ್ಟಿಹಳ್ಳಿ, 68 ಮಲ್ಲಸಂದ್ರ, 69 ಬಾಗಲಗುಂಟೆ, 70 ಮಂಜುನಾಥ ನಗರ, 71 ನೆಲೆ ಮಹೇಶ್ವರಮ್ಮ ದೇವಸ್ಥಾನ ವಾರ್ಡ್, 72 ದಾಸರಹಳ್ಳಿ.
----ಬೆಂಗಳೂರು ಪಶ್ಚಿಮ ನಗರ ಪಾಲಿಕೆ
ವಾರ್ಡ್ ಸಂಖ್ಯೆ-1121. ನಾಗಸಂದ್ರ, 2.ಚೊಕ್ಕಸಂದ್ರ, 3.ನೆಲಗೆದರನಹಳ್ಳಿ, 4.ಪಾರ್ವತಿ ನಗರ, 5. ರಾಜೇಶ್ವರಿ ನಗರ, 6. ಶಿವಪುರ, 7. ರಾಜಗೋಪಾಲ ನಗರ, 8. ಹೆಗ್ಗನಹಳ್ಳಿ, 9. ಶ್ರೀಗಂಧ ನಗರ, 10. ಸುಂಕದಕಟ್ಟೆ, 11. ದೊಡ್ಡ ಬಿದರಕಲ್ಲು. 12. ಅಂದ್ರಹಳ್ಳಿ, 13. ನಾಡಪ್ರಭು ಕೆಂಪೇಗೌಡ ನಗರ, 14. ಹೇರೋಹಳ್ಳಿ, 15. ಬೈದರಹಳ್ಳಿ, 16. ಉಲ್ಲಾಳ್, 17. ನಾಗದೇವನಹಳ್ಳಿ, 18. ಕೆಂಗಲ್ ಹನುಮಂತಯ್ಯ ಪೂರ್ವ, 19. ಕೆಂಗೇರಿ, 20. ಹೆಮ್ಮಿಗೆಪುರ, 21. ಮೈಲಸಂದ್ರ, 22. ಬಂಗಾರಪ್ಪ ನಗರ, 23. ರಾಜರಾಜೇಶ್ವರಿ ನಗರ, 24. ಜ್ಞಾನಭಾರತಿ, 25. ವಿನಾಯಕ ಲೇಔಟ್, 26. ಮಲ್ಲತ್ತಹಳ್ಳಿ, 27. ಶ್ರೀಗಂಧದ ಕಾವಲ್, 28. ಕೊಟ್ಟಿಗೆಪಾಳ್ಯ, 29. ಚೌಡೇಶ್ವರಿ ನಗರ, 30. ಕೆಂಪೇಗೌಡ ಲೇಔಟ್, 31. ಫ್ರೀಡಂಫೈಟರ್ ವಾರ್ಡ್, 32. ಲಗ್ಗೆರೆ, 33. ಲಕ್ಷ್ಮಿದೇವಿ ನಗರ, 34. ಪೀಣ್ಯ, 35. ಗೊರಗುಂಟೆಪಾಳ್ಯ, 36. ನಾಲ್ವಡಿ ಕೃಷ್ಣರಾಜ ಒಡೆಯರ್ ವಾರ್ಡ್, 37. ಡಾ.ಪುನೀತ್‌ರಾಜ್‌ಕುಮಾರ್ ವಾರ್ಡ್, 38. ನಂದಿನಿ ಲೇಔಟ್, 39. ಜೈ ಮಾರುತಿ ನಗರ, 40. ಮಹಾಲಕ್ಷ್ಮಿಪುರ, 41. ನಾಗಪುರ, 42. ರಾಜ ಮಯೂರವರ್ಮ ವಾರ್ಡ್, 43. ಕೇತಮಾರನಹಳ್ಳಿ, 44. ಶಂಕರ ಮಠ, 45. ಶಕ್ತಿ ಗಣಪತಿ ನಗರ, 46. ಕಮಲಾನಗರ, 47. ವೃಷಭಾವತಿ ನಗರ, 48. ಮತ್ತಿಕೆರೆ, 49. ಅರಮನೆ ನಗರ, 50. ಸದಾಶಿವ ನಗರ, 51. ರಾಜಮಹಲ್, 52. ಕೋದಂಡರಾಮಪುರ, 53. ಮಲ್ಲೇಶ್ವರಂ, 54. ಸುಬೇದಾರ್ ಪಾಳ್ಯ, 55. ಸುಬ್ರಹ್ಮಣ್ಯ ನಗರ, 56. ಗಾಯತ್ರಿ ನಗರ, 57. ಕುವೆಂಪು ವಾರ್ಡ್, 58. ದಯಾನಂದ ನಗರ, 59. ಬಂಡಿರೆಡ್ಡಿ ವೃತ್ತ ವಾರ್ಡ್, 60. ಪ್ರಕಾಶ್ ನಗರ, 61. ದ.ರ.ಬೇಂದ್ರೆ ವಾರ್ಡ್, 62. ರಾಮಮಂದಿರ, 63. ರಾಜಾಜಿನಗರ, 64. ಶಿವನಗರ , 65. ಮಂಜುನಾಥ ನಗರ, 66.ಸಾಣೇ ಗುರುವನಹಳ್ಳಿ, 67. ಬಸವೇಶ್ವರ ನಗರ, 68. ಕಾಮಾಕ್ಷಿಪಾಳ್ಯ, 69. ಅಗ್ರಹಾರ ದಾಸರಹಳ್ಳಿ, 70. ಡಾ.ರಾಜಕುಮಾರ ವಾರ್ಡ್, 71. ತಿಮ್ಮೇನಹಳ್ಳಿ, 72. ಕಾವೇರಿಪುರ, 73. ಡಾ.ವಿಷ್ಣುವರ್ಧನ ವಾರ್ಡ್, 74. ಪಟ್ಟೇಗಾರ ಪಾಳ್ಯ, 75. ಮಾರೇನಹಳ್ಳಿ ಪೂರ್ವ, 76. ಮೂಡಲಪಾಳ್ಯ, 77. ಮಾರುತಿ ಮಂದಿರ ವಾರ್ಡ್, 78. ಅನುಭವನಗರ, 79. ನಾಗರಭಾವಿ, 80. ಚಂದ್ರಲೇಔಟ್, 81. ನಾಯಂಡಹಳ್ಳಿ, 82. ಅತ್ತಿಗುಪ್ಪೆ, 83. ಹಂಪಿನಗರ, 84. ಹೊಸಹಳ್ಳಿ, 85. ಆದಿಚುಂಚನಗಿರಿ ವಾರ್ಡ್, 86. ವಿದ್ಯಾರಣ್ಯ ನಗರ, 87. ಕೆ.ಪಿ.ಅಗ್ರಹಾರ, 88. ಸಂಗೊಳ್ಳಿ ರಾಯಣ್ಣ ವಾರ್ಡ್, 89. ಬಾಪೂಜಿ ನಗರ, 90. ಕೃಷ್ಣದೇವರಾಯ ವಾರ್ಡ್, 91. ಗಾಳಿ ಆಂಜನೇಯ ದೇವಸ್ಥಾನ ವಾರ್ಡ್, 92. ಮುನೇಶ್ವರ ಬ್ಲಾಕ್, 93. ಅವಲಹಳ್ಳಿ, 94. ದೀಪಾಂಜಲಿ ನಗರ, 95. ಸ್ವಾಮಿ ವಿವೇಕಾನಂದ ವಾರ್ಡ್, 96. ಕತ್ರಿಗುಪ್ಪೆ, 97. ಶ್ರೀನಿವಾಸ ನಗರ, 98. ಅಶೋಕ ನಗರ, 99. ಟಿ.ಆರ್.ಶಾಮಣ್ಣ ನಗರ, 100. ಶ್ರೀನಗರ, 101. ಕೆಂಪಾಂಬೂದಿ ವಾರ್ಡ್, 102. ಹನುಮಂತನಗರ, 103. ಎನ್.ಆರ್.ಕಾಲೋನಿ, 104. ತ್ಯಾಗರಾಜನಗರ, 105. ಯಡಿಯೂರು, 106. ದೇವಗಿರಿ ದೇವಸ್ಥಾನ ವಾರ್ಡ್, 107. ಧರ್ಮಗಿರಿ ವಾರ್ಡ್, 108. ಗಣೇಶ ಮಂದಿರ ವಾರ್ಡ್, 109. ಕಾಮಾಕ್ಯ ಲೇಔಟ್, 110. ಚಿಕ್ಕಲಸಂದ್ರ, 111. ಇಟ್ಟಮಡು, 112. ಹೊಸಕೆರೆಹಳ್ಳಿ.
;Resize=(128,128))
;Resize=(128,128))
;Resize=(128,128))
;Resize=(128,128))