ದ.ಕ. ಜೇನು ವ್ಯವಸಾಯಗಾರರ ಸಹಕಾರ ಸಂಘದ ಮಹಾಸಭೆ

| Published : Sep 13 2024, 01:36 AM IST

ಸಾರಾಂಶ

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಲೆಕ್ಕ ಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ೨೦೨೩- ೨೪ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ ಹಾಗೂ ೧೦,೦೦೦ ರು. ಮೌಲ್ಯದ ಪಾಲು ಪತ್ರ ನೀಡಿ ಗೌರವಿಸಿದೆ ಎಂದರು.

ಕನ್ನಡಪ್ರಭ ವಾರ್ತೆ ಪುತ್ತೂರು

ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರ ಸಂಘವು ೨೦೨೩- ೨೪ನೇ ಸಾಲಿನಲ್ಲಿ ೩೨.೪೦ ಕೋಟಿ ರುಪಾಯಿ ವ್ಯವಹಾರ ನಡೆಸಿ ೧೦.೦೨,೭೬೯.೧೪ ರುಪಾಯಿ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.೧೨ ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಂಘದ ಸಭೆಯು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಅವರ ಅಧ್ಯಕ್ಷತೆಯಲ್ಲಿ ಪುತ್ತೂರಿನಲ್ಲಿರುವ ಪ್ರಧಾನ ಕಚೇರಿಯ ‘ಮಾಧುರಿ ಸೌಧ’ ಸಭಾಂಗಣದಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಲೆಕ್ಕ ಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ೨೦೨೩- ೨೪ನೇ ಸಾಲಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ ಹಾಗೂ ೧೦,೦೦೦ ರು. ಮೌಲ್ಯದ ಪಾಲು ಪತ್ರ ನೀಡಿ ಗೌರವಿಸಿದೆ ಎಂದರು.

ಸಂಘದ ತ್ರೈಮಾಸಿಕ ಪತ್ರಕೆ ‘ಮಧುಪ್ರಪಂಚ’ದ ಸಂಪಾದಕ ನಾರಾಯಣ ರೈ ಅವರನ್ನು ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಜೇನು ಪೂರೈಕೆ ಮಾಡಿದ ಬಶೀರ್ ಎಂ., ಚೆನ್ನಕೇಶವ ಪೊಯ್ಯೆಮಜಲು ಸುಳ್ಯ, ರಾಧಾಕೃಷ್ಣ ದಾಸ್ ಉಬರಡ್ಕ, ಸುಧಾಕರ ಕೇಪು, ಮುರಳೀಧರ ಜಿ.ಟಿ. ಯೇನೆಕಲ್ಲು, ಲಿಂಗಪ್ಪ ಗೌಡ ಅಮರಪಡ್ನೂರು, ಮಂಜಪ್ಪ ಎನ್., ವಿಜಯ ಕುಮಾರ್ ಬಾಳೆಕಲ್ಲು, ಹೊನ್ನಪ್ಪ ಗೌಡ ಬಾಳುಗೋಡು, ದಿನೇಶ್ ಅರಂಬ್ಯ, ಸುರೇಶ್ ರೈ ಇರ್ದೆ, ಭರತ್ ಕುಮಾರ್ ಕೆ., ಮನಮೋಹನ ಅರಂಬ್ಯ, ಕೆ. ಪುಟ್ಟಣ್ಣ ಗೌಡ ಕಾಡುತೋಟ, ಹರೀಶ್ ಕೋಡ್ಲ, ಶಿವಾನಂದ ನೆಲ್ಲಿಪದವು, ಸಂಘದಿಂದ ಅತೀ ಹೆಚ್ಚು ಖರೀದಿ ಮಾಡಿದ ಕರುಣಾಕರ ಹಿರಿಯಡ್ಕ ಉಡುಪಿ, ತತ್ವ ಆಗ್ರೋಟೆಕ್ ಬೆಂಗಳೂರು, ಬಂಟ್ವಾಳ ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ವಿಜಯ ಕುಮಾರ್ ಕನ್ಯಾಡಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ನಿರ್ದೇಶಕರಾದ ಜಿ.ಪಿ. ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ. ತನಿಯಪ್ಪ, ಶ್ರೀಶ ಕೊಡವೂರು, ಎಚ್. ಸುಂದರ ಗೌಡ, ಇಂದಿರಾ ಕೆ., ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ., ಶಿವಾನಂದ, ಮನಮೋಹನ ಅರಂಬ್ಯ, ಪುಟ್ಟಣ್ಣ ಗೌಡ ಕೆ., ಗೋವಿಂದ ಭಟ್ ಪಿ., ಶಂಕರ ಪಿ., ಸರಸ್ವತಿ ವೈ.ಪಿ ಹಾಗೂ ಸುಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿಬ್ಬಂದಿ ದಕ್ಷಿತಾ ಪ್ರಾರ್ಥಿಸಿದರು. ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ವಾಗತಿಸಿದರು. ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿ. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು.