ಎಸ್ಸಿಪಿ ಕಾಲೇಜಿನ ತಂಡಕ್ಕೆ ಜನರಲ್ ಚ್ಯಾಂಪಿಯನ್‌ ಟ್ರೊಫಿ

| Published : Feb 12 2024, 01:31 AM IST

ಎಸ್ಸಿಪಿ ಕಾಲೇಜಿನ ತಂಡಕ್ಕೆ ಜನರಲ್ ಚ್ಯಾಂಪಿಯನ್‌ ಟ್ರೊಫಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಿಂಗಪುರ: ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲದ ವಿದ್ಯಾರ್ಥಿಗಳು ಎಸ್.ಡಿ.ವಿ.ಎಸ್ ಸಂಘ, ಅನ್ನಪೂರ್ಣ ಇನಸ್ಟಿಟ್ಯೂಟ್‌ ಆಫ್‌ ಮ್ಯಾನಜ್‌ಮೆಂಟ್‌ ರಿಸರ್ಚ್‌ ಸಂಕೇಶ್ವರದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆರಂಭ -2024 ಮೆಘಾ ನ್ಯಾಷನಲ್ ಲೆವಲ್ ಪೆಸ್ಟ್‌ ನಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸತತ ಎರಡನೇ ಬಾರಿಗೆ ಜನರಲ್ ಚಾಂಪಿಯನ್‌ ಟ್ರೋಫಿ ಪಡೆದಿದ್ದಾರೆ.

ಮಹಾಲಿಂಗಪುರ: ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲದ ವಿದ್ಯಾರ್ಥಿಗಳು ಎಸ್.ಡಿ.ವಿ.ಎಸ್ ಸಂಘ, ಅನ್ನಪೂರ್ಣ ಇನಸ್ಟಿಟ್ಯೂಟ್‌ ಆಫ್‌ ಮ್ಯಾನಜ್‌ಮೆಂಟ್‌ ರಿಸರ್ಚ್‌ ಸಂಕೇಶ್ವರದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆರಂಭ -2024 ಮೆಘಾ ನ್ಯಾಷನಲ್ ಲೆವಲ್ ಪೆಸ್ಟ್‌ ನಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸತತ ಎರಡನೇ ಬಾರಿಗೆ ಜನರಲ್ ಚ್ಯಾಂಪಿಯನ್‌ ಟ್ರೋಫಿ ಪಡೆದಿದ್ದಾರೆ.

ವಿದ್ಯಾರ್ಥಿಗಳ ಆಟ, ಪಾಠದ ಜೊತೆಗೆ ಪ್ರತಿವರ್ಷ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎಂ. ಅವರಾದಿ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸದಸ್ಯರು, ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.