ಜಾತಿ-ಧರ್ಮಗಳ ನಡುವೆ ಭೇದ ಸೃಷ್ಟಿಸುವ ಹುನ್ನಾರ: ಜನಾರ್ದನ ತೋನ್ಸೆ ವಿಷಾದ

| Published : May 20 2024, 01:32 AM IST

ಜಾತಿ-ಧರ್ಮಗಳ ನಡುವೆ ಭೇದ ಸೃಷ್ಟಿಸುವ ಹುನ್ನಾರ: ಜನಾರ್ದನ ತೋನ್ಸೆ ವಿಷಾದ
Share this Article
  • FB
  • TW
  • Linkdin
  • Email

ಸಾರಾಂಶ

ಹೂಡೆಯ ಸಾಲಿಹಾತ್ ಅಡಿಟೋರಿಯಂನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಈದ್ ಸ್ನೇಹ ಕೂಟವನ್ನು ಆಯೋಜಿಸಿತು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಜಾತಿ ಧರ್ಮಗಳ ಭೇದ ಭಾವ ಸೃಷ್ಟಿಸುವಾಗ ಬೇಸರವಾಗುತ್ತದೆ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ ಹೇಳಿದರು.

ಅವರು ಇಲ್ಲಿನ ಹೂಡೆಯ ಸಾಲಿಹಾತ್ ಅಡಿಟೋರಿಯಂನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಆಯೋಜಿಸಿದ ಈದ್ ಸ್ನೇಹ ಕೂಟವನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾರ್ಥಕ್ಕಾಗಿ ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ನಮ್ಮಲ್ಲಿ ನೆಲೆ ನಿಂತಿರುವ ಸೌಹರ್ದತೆಯನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ವಾಸ್ತವವಾಗಿ ನಮ್ಮಲ್ಲಿ ಸೌಹಾರ್ದ ಭಾವ ಹುಟ್ಟಿನಿಂದಲೇ ಇದೆ. ನೇಜಾರಿನಲ್ಲಿ ಕೊಲೆ ಪ್ರಕರಣ ನಡೆದಾಗ ಜಾತಿ-ಧರ್ಮ ಮರೆತು ಜನ ಕಣ್ಣೀರು ಸುರಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಮಾತನಾಡಿ, ಧರ್ಮಗಳ ನಡುವೆ ಭಿನ್ನತೆ ಇರುವುದು ವಾಸ್ತವ. ಆದರೆ ಆ ಭಿನ್ನತೆ ಇಟ್ಟುಕೊಂಡು ಪರಸ್ಪರ ಸೌಹರ್ದಯುತವಾಗಿ ಬದುಕುವ ವಾತಾವರಣ ಸೃಷ್ಟಿಯಾಗಬೇಕಾಗಿದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್, ಹೂಡೆಯ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲಾನ ಮುಹಮ್ಮದ್ ತಾರೀಕ್ ಕುರ್‌ಆನ್ ಪಠಣ ಮಾಡಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಮೌಲಾನ ಆದಮ್ ಸಾಹೇಬ್, ಕೆಮ್ಮಣ್ಣು ಗ್ರಾ.ಪಂ. ಅಧ್ಯಕ್ಷೆ ಕುಸುಮ, ಉಪಾಧ್ಯಕ್ಷ ಅರುಣ್ ಫರ್ನಾಂಡಿಸ್, ಸಾಲಿಡಾರಿಟಿ ಹೂಡೆ ಅಧ್ಯಕ್ಷ ಜಾಬೀರ್ ಖತೀಬ್, ಎಸ್.ಐ.ಒ ಹೂಡೆ ಘಟಕಾಧ್ಯಕ್ಷ ಝೀಶಾನ್ ಹೂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.