ಸಾರಾಂಶ
ಕನಕಪುರ: ತಾಲೂಕಿನ ಆಡನಕುಪ್ಪೆ ಗ್ರಾಮದಲ್ಲಿರುವ ಹವಾಮಾನ ದತ್ತಾಂಶ ಕೇಂದ್ರಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೂಗೋಳ ಶಾಸ್ತ್ರದ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನ ಶೈಕ್ಷಣಿಕ ಪ್ರವಾಸದ ವೇಳೆ ಭೇಟಿ ನೀಡಿದ್ದರು.
ದತ್ತಾಂಶ ಕೇಂದ್ರದ ಮೇಲ್ವಿಚಾರಕಿ ಗೌರಮ್ಮ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಈ ದತ್ತಾಂಶ ಕೇಂದ್ರದ ವೈಶಿಷ್ಟ್ಯಗಳನ್ನು ವಿವರಣೆ ನೀಡಿ ದತ್ತಾಂಶ ಉಪಕರಣಗಳಿಂದ ದಿನನಿತ್ಯ ಸೂರ್ಯನ ತಾಪಮಾನ ದಾಖಲಿಸುವ ಸಾಧನ, ಉಷ್ಣಾಂಶ ದಾಖಲಿಸುವ ಗರಿಷ್ಠ ಮತ್ತು ಕನಿಷ್ಠ ತಾಪಮಾನ, ಹವಾಮಾನ ವೈಪರೀತ್ಯ, ಪವನ(ಗಾಳಿಯ) ವೇಗ ಮಾಪಕ, ಪವನ ದಿಕ್ಸೂಚಿ, ಮಳೆಯ ಮಾಪಕ (ಸ್ವಯಂ ಚಾಲಿತ ಹಾಗೂ ಡಿಜಿಟಲೀಕ ರಣ) ದಾಖಲೀಕರಣಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
ಭೂಗೋಳ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಸತೀಶ್ ಕುಮಾರ್, ಡಾ.ಮುತ್ತುರಾಜು.ಕೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಡಾ.ಶ್ಯಾಮಲಾ, ಪ್ರಾಧ್ಯಾಪಕರು ಹಾಗೂ ದತ್ತಾಂಶ ಕೇಂದ್ರದ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದರು. ಕೆ ಕೆ ಪಿ ಸುದ್ದಿ 02:
ಕನಕಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ತಾಲೂಕಿನ ಆಡನಕುಪ್ಪೆ ಗ್ರಾಮದಲ್ಲಿರುವ ಹವಾಮಾನ ದತ್ತಾಂಶ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಮೇಲ್ವಿಚಾರಕಿ ಗೌರಮ್ಮ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ದತ್ತಾಂಶ ಕೇಂದ್ರದ ವೈಶಿಷ್ಟ್ಯಗಳ ಮಾಹಿತಿ ನೀಡಿದರು.