ಸಾರಾಂಶ
ಮಾನವ ಅಂಗಾಂಗಗಳಲ್ಲಿ ಕಣ್ಣು ತುಂಬಾ ಸೂಕ್ಷ್ಮವಾದ ಅಂಗವಾಗಿ ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಮುಖಂಡ ಬಿ.ಎಸ್.ರುತಿಕ್‌ಗೌಡ ಹೇಳಿದರು. ಸೂಲಿಬೆಲೆಯಲ್ಲಿ ಉಚಿತ ನೇತ್ರ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಮಾನವ ಅಂಗಾಂಗಗಳಲ್ಲಿ ಕಣ್ಣು ತುಂಬಾ ಸೂಕ್ಷ್ಮವಾದ ಅಂಗವಾಗಿ ತುಂಬಾ ಜಾಗರೂಕತೆಯಿಂದ ಇರಬೇಕು ಎಂದು ಮುಖಂಡ ಬಿ.ಎಸ್.ರುತಿಕ್‌ಗೌಡ ಹೇಳಿದರು.ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದರು.
ಜೀವನದ ಎಲ್ಲಾ ಚಟುವಟಿಕೆಗಳಿಗೂ ಮೂಲ ಕಣ್ಣು ಇಂತಹ ಕಣ್ಣಿನ ಕಾಳಜಿ ಮಾಡುವುದು ಬಹುಮುಖ್ಯವಾಗಿದೆ. ನಿತ್ಯ ಜಗತ್ತನ್ನು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಿ ಎಂದರು.ಜೇನುಗೂಡು ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ಈ ಶಿಬಿರದಿಂದ ಗ್ರಾಮೀಣ ಭಾಗದ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗಿದೆ ಎಂದರು.
ಸ್ಪಂದನ್ ದೀಪ್ ಫೌಂಡೇಷನ್ ಅಧ್ಯಕ್ಷ ವಿಮಲ್‌ಕುಮಾರ್ ಮಾತನಾಡಿ, ೩೫ಕ್ಕೂ ಹೆಚ್ಚು ನೇತ್ರ ತಪಾಸಣೆ ಶಿಬಿರ ಮಾಡಲಾಗಿದ್ದು ಯಶಸ್ವಿಯಾಗಿದೆ ಎಂದರು.ಕೆ.ಎಂ.ಚೌಡೇಗೌಡ, ಸಂಘಟನಾ ಕಾರ್ಯದರ್ಶಿ ಎಸ್.ಕೆ.ವಸಂತಕುಮಾರ್, ನಿರ್ದೇಶಕ ಸೈಯದ್ ಮಹಬೂಬ್, ತರಬಹಳ್ಳಿ ಹರೀಶ್, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ಶಂಕರ ಕಣ್ಣಿನ ಅಸ್ಪತ್ರೆಯ ಕುಮಾರ್, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್, ಪತ್ರಕರ್ತ ಸಂಘದ ಅಧ್ಯಕ್ಷ ಡಿ.ನಾಗರಾಜ್, ಅತ್ತಿಬೆಲೆ ಮಂಜುನಾಥ್, ತಾವರೆಕರೆ ನಾಗರಾಜ್, ಅನಿಲ್, ಸ್ಪಂದನ್‌ದೀಪ್ ಪೌಂಡೇಷನ್ ಅಧ್ಯಕ್ಷ ವಿಮಲ್‌ಕುಮಾರ್, ನಿರ್ದೇಶಕ ಬಿ.ಎನ್.ರಾಜೇಂದ್ರ, ರವಿಕುಮಾರ್ ಇದ್ದರು.