ಡೆಂಘೀ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಪಡೆಯಿರಿ

| Published : May 17 2025, 02:01 AM IST

ಸಾರಾಂಶ

ಯಾದಗಿರಿ: ಡೆಂಘೀ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆ ಹೊಂದಿದ ಈಡಿಸ್ ಜಾತಿಯ ಸೊಂಕಿತ ಸೊಳ್ಳೆಯ ಕಡಿತದಿಂದ ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ಇದು ತೀವ್ರವಾದ, ಕೆಲವೊಮ್ಮೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ತಿಳಿಸಿದರು.

ಯಾದಗಿರಿ: ಡೆಂಘೀ ಜ್ವರವು ವೈರಸ್‌ನಿಂದ ಉಂಟಾಗುವ ಕಾಯಿಲೆ ಹೊಂದಿದ ಈಡಿಸ್ ಜಾತಿಯ ಸೊಂಕಿತ ಸೊಳ್ಳೆಯ ಕಡಿತದಿಂದ ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ, ಇದು ತೀವ್ರವಾದ, ಕೆಲವೊಮ್ಮೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಸಹಯೋಗದಲ್ಲಿ ರಾಷ್ಟ್ರಿಯ ಡೆಂಘೀ ದಿನದ ಅಂಗವಾಗಿ ಜಾಥಾ ಹಾಗೂ ಲಾರ್ವಾಹಾರಿ ಮೀನು ಶೇಖರಣಾ ತೊಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಜ್ವರವಿರಲಿ ರಕ್ತ ಪರಿಕ್ಷೆ ಮಾಡಿಸಿಕೊಳ್ಳಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ ಡೆಂಘೀ ರೋಗದಿಂದ ಮುಕ್ತರಾಗಿ, ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ, ಸೊಳ್ಳೆ ಪರದೆ ಬಳಸಿ ಡೆಂಘೀ ಓಡಿಸಿ, ಸ್ವಯಂ ರಕ್ಷಣಾ ವಿಧಾನ ಅನುಸರಿಸಿ ಡೆಂಘೀದಿಂದ ಮುಕ್ತಿಹೊಂದಿ, ನೀರು ನಿಲ್ಲದಂತೆ ಸಹಕರಿಸಿ ಸೊಳ್ಳೆ ಉತ್ಪತ್ತಿ ತಡೆಗಟ್ಟಿ. ಕಡಿತ ಚಿಕ್ಕದು ಭೀತಿ ದೊಡ್ಡದು, ನಿಂತ ನೀರು ಸೊಳ್ಳೆಗಳ ತವರು, ಲಾರ್ವಹಾರಿ ಮಿನುಗಳಿಂದ ಸೊಳ್ಳೆ ಉತ್ಪತ್ತಿ ತಡೆಗಟ್ಟಿ, ಡೆಂಘೀ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿರತ್ತದೆ, ಸಾರ್ವಜನಿಕರು ಡೆಂಘೀ ರೋಗ ಹರಡದಂತೆ ಮುಂಜಾಗೃತೆ ವಹಿಸಬೇಕು ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಮುಬಾಸ್ಸಿರ ಅಹ್ಮದ್‌ ಸಾಜೀದ್‌ ಮಾತನಾಡಿ, ರಾಷ್ಟ್ರೀಯ ಡೆಂಘೀ ದಿನವು ಪ್ರತಿ ವರ್ಷ ಮೇ 16 ರಂದು ಆಚರಿಸಲಾಗುತ್ತದೆ. ಆರೋಗ್ಯ ಜಾಗೃತಿ ಕಾರ್ಯಕ್ರಮವಾಗಿದ್ದು, ಡೆಂಘೀ ಎದುರಿಸಲು ಮತ್ತು ನಿರ್ಮೂಲನೆ ಮಾಡಲು ಅಗತ್ಯವಾದ ಕ್ರಮವನ್ನು ಉತ್ತೇಜಿಸಲು ಜನರ ಅಮೂಲ್ಯ ಜೀವನ ಕಾಪಾಡುವುದು ನಮ್ಮ ನಾಗರಿಕರ ಜವಾಬ್ದಾರಿಯಾಗಿದೆ, 2025ರ ಧ್ಯೆಯ ವಾಕ್ಯ ಡೆಂಘೀ ಸೋಲಿಸಲು ಹೆಜ್ಜೇಗಳು ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂದು ತಿಳಿಸಿದರು.

ಜಾಗೃತಿ ಜಾಥಾವು ಹಳೆ ಬಸ್ ನಿಲ್ದಾಣದಿಂದ ಆರಂಭವಾಗಿ ಮುಖ್ಯ ರಸ್ತೆಯ ಮುಖಾಂತರ ಸಾಗಿ ಮುದ್ನಾಳ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಹೊಸ ಬಸ್ ನಿಲ್ದಾಣದಲ್ಲಿ ಕೊನೆಗೊಳಿಸಲಾಯಿತು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಲಾರ್ವಾಹಾರಿ ಮೀನು ಶೇಖರಣಾ ತೊಟ್ಟಿ ಉದ್ಘಾಟಿಸಿಲಾಯಿತು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಂಜೀವ ಕುಮಾರ ರಾಯಚೂರಕರ್, ಮಲ್ಹಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಯಶವಂತ ರಾಠೋಡ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವಿನುತಾ, ಡಾ. ಕ್ಷಿತೀಜ್, ಆಕ್ಸಫರ್ಡ, ಹರಿಪ್ರಿಯಾ ಕಾಲೇಜಿನ ವಿದ್ಯಾರ್ಥಿ, ಸಿಬ್ಬಂದಿಗಳು, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು, ಪೋಲಿಸ್ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಜಿಲ್ಲಾ ವಿಬಿಡಿ ಸಲಹೆಗಾರರಾದ ಬಸವರಾಜ್‌ಕಾಂತ ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ತುಳಸಿರಾಮ ಚವ್ಹಾಣ ವಂದನಾರ್ಪಣೆ ನೆರವೇರಿಸಿದರು.

---000---