ಆನ್‌ಲೈನ್‌ನಲ್ಲೇ ಇ-ಖಾತೆ ಪಡೆಯಿರಿ: ಶಿವರುದ್ರಯ್ಯ

| Published : Oct 14 2023, 01:00 AM IST

ಸಾರಾಂಶ

ಮಾಗಡಿ: ನಾಗರಿಕರು ಯಾವುದೇ ಕಾರಣಕ್ಕೂ ಕಚೇರಿಗೆ ಅಲೆದಾಡದಂತೆ ಆನ್‌ ಲೈನ್‌ ಮೂಲಕ ಮನೆಯಲ್ಲೇ ಇ- ಖಾತೆ, ಮುಟೇಶನ್, ತೆರಿಗೆ ಪಾವತಿ ಹೀಗೆ ವಿವಿಧ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ ತಿಳಿಸಿದ್ದಾರೆ.
ಮಾಗಡಿ: ನಾಗರಿಕರು ಯಾವುದೇ ಕಾರಣಕ್ಕೂ ಕಚೇರಿಗೆ ಅಲೆದಾಡದಂತೆ ಆನ್‌ ಲೈನ್‌ ಮೂಲಕ ಮನೆಯಲ್ಲೇ ಇ- ಖಾತೆ, ಮುಟೇಶನ್, ತೆರಿಗೆ ಪಾವತಿ ಹೀಗೆ ವಿವಿಧ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಶಿವರುದ್ರಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರ ಈ ವ್ಯವಸ್ಥೆ ಮಾಡಿದೆ. ತಾವು ಮೊಬೈಲ್ ಮೂಲಕವೂ ಮೂಲ ದಾಖಲಾತಿಗಳನ್ನು ಸಲ್ಲಿಸಿ ಇ-ಖಾತೆ ಪಡೆಯಬಹುದು. ಇಲ್ಲವಾದರೆ ಸಮೀಪದ ಸೈಬರ್ ಸೆಂಟರ್ ನಲ್ಲಿ ಆನ್‌ ಲೈನ್‌ ಮೂಲಕವೇ ನಮ್ಮಲ್ಲಿ ಸಿಗುವಂತಹ ಸೌಲಭ್ಯಗಳನ್ನು ಪಡೆಯಬಹುದು. ಇದರಿಂದ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ. ನಾಗರಿಕರು ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.