ಗುರಿ ಸಾಧಿಸಲು ಉನ್ನತ ಶಿಕ್ಷಣ ಪಡೆಯಿರಿ: ಮಲ್ಲೇಶ್

| Published : Jan 26 2024, 01:49 AM IST

ಸಾರಾಂಶ

ರಾಮನಗರ: ಇಂದು ಜ್ಞಾನ ಸಂಪಾದನೆಗೆ ಶಿಕ್ಷಣ ತೀರಾ ಅವಶ್ಯಕ, ಉತ್ತಮ ಶಿಕ್ಷಣ ಪಡೆದು ಜೀವನದ ಗುರಿ ಸಾಧಿಸಿ ಎಂದು ಬಿಡದಿಯ ಉಪ ತಹಸೀಲ್ದಾರ್ ಎಂ.ಮಲ್ಲೇಶ್ ಕರೆ ನೀಡಿದರು.

ರಾಮನಗರ : ಇಂದು ಜ್ಞಾನ ಸಂಪಾದನೆಗೆ ಶಿಕ್ಷಣ ತೀರಾ ಅವಶ್ಯಕ, ಉತ್ತಮ ಶಿಕ್ಷಣ ಪಡೆದು ಜೀವನದ ಗುರಿ ಸಾಧಿಸಿ ಎಂದು ಬಿಡದಿಯ ಉಪ ತಹಸೀಲ್ದಾರ್ ಎಂ.ಮಲ್ಲೇಶ್ ಕರೆ ನೀಡಿದರು.

ತಾಲೂಕಿನ ಬಿಡದಿ ಪಟ್ಟಣದಲ್ಲಿರುವ ಎ1 ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ಶಾಲೆಯ ವಾರ್ಷಿಕ ದಿನಾಚರಣೆ - ಗ್ಲಿಟ್ಜ್ 2024 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳ ಪೈಕಿ ಎ1 ಇಂಟರ್ ನ್ಯಾಷನಲ್ ಶಾಲೆಯೂ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಡದಿಯ ಭರತ್ ಕೆಂಪಯ್ಯ ಆಸ್ಪತ್ರೆಯ ಸಂಸ್ಥಾಪಕ ಡಾ.ಭರತ್ ಮಾತನಾಡಿ, ಶಿಕ್ಷಣಕ್ಕೆ ಕೊಡುವ ಆಧ್ಯತೆಯಂತೆ ಆರೋಗ್ಯ ರಕ್ಷಣೆಗೂ ಆದ್ಯತೆ ಕೊಡಬೇಕು. ಇದಕ್ಕೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ಆರೋಗ್ಯ ರಕ್ಷಣೆಯ ವಿಚಾರದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಅಂಶಗಳ ಬಗ್ಗೆ ಅವರು ಗಮನ ಸೆಳೆದರು.

ರೋಟರಿ ಬಿಡದಿ ಸೆಂಟ್ರಲ್ ಮಾಜಿ ಅಧ್ಯಕ್ಷ ಚಿಕ್ಕಣ್ಣಯ್ಯ ಮಾತನಾಡಿ, ಜ್ಞಾನಾರ್ಜನೆಯ ಜೊತೆಗೆ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು, ಅಲ್ಲದೆ ಶಿಕ್ಷಣ, ಸಾಂಸ್ಕೃತಿಕ ವಿಚಾರಗಳಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿ ಜೀವನ ಪರಿಪೂರ್ಣತೆ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಶಾಲೆಯ ಆಡಳಿತ ಮಂಡಳಿಯ ಮೇನೇಜಿಂಗ್ ಟ್ರಸ್ಟಿ ಫರೀದಾ ಬಾನು ಅವರು ವಿಶೇಷವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುವ ವಿಚಾರದಲ್ಲಿ ಸಲಹೆಗಳನ್ನು ನೀಡಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಜ್ಗರ್ ಉಲ್ಲಾ ಎಲ್ಲರನ್ನು ಸ್ವಾಗತಿಸಿದರು. ಶಾಲೆಯ ಶಿಕ್ಷಕರು ಪ್ರಾರ್ಥಿಸಿದರು. ಪ್ರಾಂಶುಪಾಲರಾದ ನಫೀಸಾ ಬೇಗಂ ಶಾಲಾ ವರದಿ ಮಂಡಿಸಿದರು. ನಾದಿಯಾ ಅಮ್ರೀನ್ ವಂದಿಸಿದರು.

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಟೆಕ್ವೆಂಡೋ ಕರಾಟೆ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಸಾಧನೆ ತೋರಿಸಿದ ವಿದ್ಯಾರ್ಥಿಗಳನ್ನು ಇದೇ ವೇದಿಕೆಯಲ್ಲಿ ಪುರಸ್ಕರಿಸಲಾಯಿತು.24ಕೆಆರ್ ಎಂಎನ್‌ 1.ಜೆಪಿಜಿ

ರಾಮನಗರ ತಾಲೂಕಿನ ಬಿಡದಿ ಪಟ್ಟಣದಲ್ಲಿರುವ ಎ1 ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ಶಾಲೆಯ ವಾರ್ಷಿಕ ದಿನಾಚರಣೆ - ಗ್ಲಿಟ್ಜ್ 2024 ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.