ಸಾರಾಂಶ
ನಮ್ಮ ಮನೆಗಳಲ್ಲಿ ಏನಾದರೂ ಶುಭ ಕಾರ್ಯವಾದಲ್ಲಿ ನೆನಪಿಗಾಗಿ ರಕ್ತದಾನ ಮಾಡುವ ಅಭ್ಯಾಸ ಬೆಳಸಿಕೊಳ್ಳಬೇಕಿದೆ. ಇದರಿಂದ ಒಂದು ಜೀವ ಉಳಿಸಿದ ಪುಣ್ಯ ನಮ್ಮದಾಗುತ್ತದೆ. ವೈದ್ಯಕೀಯ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಜೀವ ಉಳಿಸಲು ರಕ್ತದಾನವೊಂದೇ ಪರ್ಯಾಯ ಮಾರ್ಗವೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ನಮ್ಮ ಮನೆಗಳಲ್ಲಿ ಏನಾದರೂ ಶುಭ ಕಾರ್ಯವಾದಲ್ಲಿ ನೆನಪಿಗಾಗಿ ರಕ್ತದಾನ ಮಾಡುವ ಅಭ್ಯಾಸ ಬೆಳಸಿಕೊಳ್ಳಬೇಕಿದೆ. ಇದರಿಂದ ಒಂದು ಜೀವ ಉಳಿಸಿದ ಪುಣ್ಯ ನಮ್ಮದಾಗುತ್ತದೆ. ವೈದ್ಯಕೀಯ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಜೀವ ಉಳಿಸಲು ರಕ್ತದಾನವೊಂದೇ ಪರ್ಯಾಯ ಮಾರ್ಗವೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಬಸವೇಶ್ವರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲಾ ದಾನಗಳಲ್ಲಿ ರಕ್ತದಾನ ಮಹತ್ವವನ್ನು ಪಡೆದಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಬರುವುದಿಲ್ಲ. ಅಲ್ಲದೆ ಬೇರೆ ಯಾವುದೇ ಪ್ರಾಣಿಗಳ ರಕ್ತ ಮನುಷ್ಯನಿಗೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗಿ ಮಾನವರಾದ ನಾವು ನಮ್ಮ ಜೀವಿತಾವಧಿಯಲ್ಲಿ ರಕ್ತವನ್ನು ದಾನ ಮಾಡಬೇಕಿದೆ ಎಂದರು.ಅಪಘಾತ ಮುಂತಾದ ಕಾರಣಕ್ಕೆ ರಕ್ತದ ಕೊರತೆಯಾಗಿ ಅನೇಕರು ಸಾವಿಗೀಡಾಗಿದ್ದಾರೆ. ರಕ್ತಕ್ಕೆ ಪರ್ಯಾಯವಾಗಿ ಏನು ಇಲ್ಲವೆಂಬುದನ್ನು ಎಲ್ಲರೂ ಮನಗಾಣಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಕೂಡಾ ಗಣನೀಯವಾಗಿದೆ. ಅಫಘಾತವಾದರೆ ಅವರಿಗೆ ರಕ್ತದ ಅನಿವಾರ್ಯತೆ ಇರುತ್ತದೆ ಎಂದು ತಿಳಿಸಿದರು.ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ದೇಶ ಪ್ರಗತಿ ಕಾಣುತ್ತಿದೆ. ಬೇರೆ ರಾಷ್ಟ್ರಗಳು ನಮ್ಮ ಜತೆ ವಿವಿಧ ರೀತಿ ಮಾತುಕತೆ ನಡೆಸುತ್ತಿವೆ. ದೇಶದ ಆರ್ಥಿಕ ಪರಿಸ್ಥಿತಿ ವೃದ್ಧಿಯಾಗಿದೆ. ಕಳೆದ 10 ವರ್ಷದಿಂದ ದೇಶದಲ್ಲಿ ವಿವಿಧ ರೀತಿಯ ಬದಲಾವಣೆ ಕಾಣಲಾಗಿದೆ. ಮೋದಿಯವ ಅಭಿವೃದ್ಧಿ ಪರ್ವ ಮುಂದಿನ ಹದಿನೈದು ವರ್ಷ ಹೀಗೆಯೇ ನಡೆಯಲಿದೆ ಎಂದು ಗೋವಿಂದ ಕಾರಜೋಳ ಹೇಳಿದರು.
ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ಖಂಜಾಚಿ ಮಾಧುರಿ ಗೀರೀಶ್, ನಗರ ಯುವ ಮೊರ್ಚಾ ಅದ್ಯಕ್ಷ ರಾಮು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಿ.ಎಸ್. ಹಳ್ಳಿ, ಗ್ರಾಮಾಂತರ ಅಧ್ಯಕ್ಷ ವಿರುಪ, ನಗರ ಕಾರ್ಯದರ್ಶಿ ಪ್ರದೀಪ್, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವರುಣ್, ಮಂಜುನಾಥ್, ಪವನ್ ಕುಮಾರ್, ಅಭಿಲಾಶ್, ರಾಘು, ಮಂಜುನಾಥ್ ಆಚಾರ್, ಶಿವಣ್ಣಚಾರ್, ಜಿಲ್ಲಾ ಕಾರ್ಯದರ್ಶಿ ರಜನಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಿಕಾ ಲೋಕನಾಥ್ ಇದ್ದರು.