ಸಾರಾಂಶ
ಸೈಬರ್ ಕ್ರೈಂ ತಡೆಗಟ್ಟಲು ಸೈಬರ್ ಸೆಕ್ಯೂರಿಟಿ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಪಡೆದುಕೊಂಡಲ್ಲಿ ಸೈಬರ್ ಅಪರಾಧವನ್ನು ತಡೆಗಟ್ಟಬಹುದಾಗಿದೆ ಎಂದು ಇಲ್ಲಿನ ಕುಮದ್ವತಿ ಪಿಯು ಕಾಲೇಜಿನ ಪ್ರಾಚಾರ್ಯ ವೀರೇಂದ್ರ ತಿಳಿಸಿದರು.
ಶಿಕಾರಿಪುರ: ಸೈಬರ್ ಕ್ರೈಂ ತಡೆಗಟ್ಟಲು ಸೈಬರ್ ಸೆಕ್ಯೂರಿಟಿ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಪಡೆದುಕೊಂಡಲ್ಲಿ ಸೈಬರ್ ಅಪರಾಧವನ್ನು ತಡೆಗಟ್ಟಬಹುದಾಗಿದೆ ಎಂದು ಇಲ್ಲಿನ ಕುಮದ್ವತಿ ಪಿಯು ಕಾಲೇಜಿನ ಪ್ರಾಚಾರ್ಯ ವೀರೇಂದ್ರ ತಿಳಿಸಿದರು.
ಶುಕ್ರವಾರ ಪಟ್ಟಣದ ಸ್ವಾಮಿವಿವೇಕಾನಂದ ವಿದ್ಯಾ ಸಂಸ್ಥೆಯ ಕುಮದ್ವತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಕಾಮರ್ಸ್ ಫೋರಂ ವತಿಯಿಂದ ಸೈಬರ್ ಸೆಕ್ಯೂರಿಟಿ ವಿಷಯದ ಬಗ್ಗೆ ನಡೆದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಪ್ರಪಂಚದಲ್ಲಿ ಸೈಬರ್ ಕ್ರೈಮ್ ಎನ್ನುವುದು ಸಾಮಾನ್ಯ ವಿಷಯವಾಗಿದೆ ಇದರಿಂದ ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಆದ್ದರಿಂದ ಸೈಬರ್ ಕ್ರೈಂ ತಡೆಗಟ್ಟಲು ಪ್ರತಿಯೊಬ್ಬರೂ ಸೈಬರ್ ಸೆಕ್ಯೂರಿಟಿಯ ಬಗ್ಗೆ ಮಾಹಿತಿ ಹೊಂದುವ ಜತೆಗೆ ಬ್ಯಾಂಕ್ ಅಕೌಂಟ್, ಮೊಬೈಲ್ ಹಾಗೂ ಈ ಮೇಲ್‌ಗಳಲ್ಲಿ ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಆರ್ಥಿಕ ಅಪರಾಧವನ್ನು ನಿಯಂತ್ರಿಸಬಹುದಾಗಿದೆ ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಮಾತನಾಡಿ, ಆಧುನಿಕ ಜೀವನದಲ್ಲಿ ಮೊಬೈಲ್ ಫೋನ್‌ಗಳು ಹಾಗೂ ಡಿಜಿಟಲ್ ವಹಿವಾಟು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದೆ. ಇವುಗಳನ್ನು ಜಾಗರೂಕತೆಯಿಂದ ಬಳಕೆ ಮಾಡಿದಾಗ ಸೈಬರ್ ಕ್ರೈಮ್‌ಗಳನ್ನು ತಡೆಗಟ್ಟಬಹುದು. ಡಿಜಿಟಲ್ ವಹಿವಾಟುಗಳನ್ನು ನಡೆಸುವ ಮುನ್ನ ಮೂಲದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ರಾಹುಲ್, ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ವಿಷಯದ ಬಗ್ಗೆ ಪಿಪಿಟಿ ಪ್ರದರ್ಶನ ನೀಡುವ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕ ದೇವರಾಜ್, ಚಂದ್ರಿಕಾ, ಯೋಗರಾಜ್, ನಳಿನ ಪಾಟೀಲ್, ಪ್ರೇಮ, ಶಿವರಾಜ್, ಪೂಜಾ , ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))