ಸಾರಾಂಶ
ಸಮಾರಂಭದಲ್ಲಿ ಭಾರತ ಸಂಕಲ್ಪಯಾತ್ರೆಯ 2014ರ ಕ್ಯಾಲೆಂಡರ್‌ನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಿಜೆಪಿ ಪದಾಧಿಕಾರಿಗಳು ಬಿಡುಗಡೆ ಮಾಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಪಟ್ಟಣದ ಕಿತ್ತೂರ ಚನ್ನಮ್ಮ ರಸ್ತೆಯ ಯಶವಂತ ಚಿತ್ರ ಮಂದಿರ ಬಳಿ ಶನಿವಾರ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ವಿಕಸಿತ ಭಾರತ ಸಂಕಲ್ಪಯಾತ್ರೆ ನಡೆಯಿತು.ಸಮಾರಂಭದಲ್ಲಿ ಭಾರತ ಸಂಕಲ್ಪಯಾತ್ರೆಯ 2014ರ ಕ್ಯಾಲೆಂಡರ್‌ನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಿಜೆಪಿ ಪದಾಧಿಕಾರಿಗಳು ಬಿಡುಗಡೆ ಮಾಡಿದರು. ಭಾರತ ಸರ್ಕಾರದ ಮತ್ತು ಕರ್ನಾಟಕದಲ್ಲಿ ಕೈಗೊಂಡ ಕಾರ್ಯಕ್ರಮ, ಯೋಜನೆಗಳ ಕುರಿತು ಡಿಜಿಟಲ್ ಪರದೆ ಮೂಲಕ ಪ್ರದರ್ಶಿಸಲಾಯಿತು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳಡಿಯಲ್ಲಿ ಕೃಷಿ ಮತ್ತು ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆದುಕೊಳ್ಳಿ. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ಕೇಂದ್ರ ಸರ್ಕಾರ ಬಡ್ಡಿಯಲ್ಲಿ ಶೇ.4 ರಷ್ಟು ಮರುಪಾವತಿ ಮಾಡಲಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕೋರಿದರು.ಭಾರತದ ಏಕತೆ, ಸಮಗ್ರತೆ ಬಗ್ಗೆ ಜನತೆಯಿಂದ ಸಂಕಲ್ಪ ಮಾಡಲಾಯಿತು. ಕೇಂದ್ರ ಸರ್ಕಾರದ ಯೋಜನೆಗಳಾದ ಉಚಿತ ಉಜ್ಚಲ ಗ್ಯಾಸ್ ಯೋಜನೆ, ಕೃಷಿ ಸಮ್ಮಾನ ಯೋಜನೆ, ಪ್ರಧಾನ ಮಂತ್ರಿಯವರು ಮುದ್ರಾ ಯೋಜನೆ ಬಂದ ಮೇಲೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುವ ಯೋಜನೆ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಜನರಿಗೆ ತಿಳಿ ಹೇಳುವ ಮೂಲಕ ಅವುಗಳ ಸದುಪಯೋಗಪಡೆದು ಕೊಳ್ಳಬೇಕು ಎಂದರು.
ವಿಕಸಿತ ಭಾರತ ಸಂಕಲ್ಪ ಭಾರತ ಸಮಾರಂಭದಲ್ಲಿ ರಾಜ್ಯ ಕೃಷಿ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಮಂಡಳ ಅಧ್ಯಕ್ಷ ಸಂಜಯ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ, ಮಾಜಿ ಉಪಾಧ್ಯಕ್ಷ ಸಂಜಯ ಕವಟಗಿಮಠ, ಅಪ್ಪಾಸಾಹೇಬ ಚೌಗಲಾ, ವಿಶ್ವನಾಥ ಕಾಮಗೌಡ, ಸಿದ್ದಪ್ಪ ಡಂಗೇರ, ಆದಿನಾಥ ಶೆಟ್ಟಿ, ಸಂತೋಷ ಟವಳೆ, ಈರಣ್ಣ ಯರಂಡೋಳೆ, ಪವನ ಮಾದರ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.