ವಿದ್ಯುತ್ ಕಂಬ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ

| Published : Oct 19 2024, 12:22 AM IST

ವಿದ್ಯುತ್ ಕಂಬ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

Get Narega Project Work Facility: Boodeppa Yadav

ಕನ್ನಡಪ್ರಭ ವಾರ್ತೆ ಯಾದಗಿರಿ

ಹೆಡಗಿಮದ್ರಾ ಗ್ರಾಮದಲ್ಲಿ ವಿದ್ಯುತ್ ಸರಬರಾಜು ಕೊರೆತೆ ಮತ್ತು ಕಂಬಗಳು ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕ ಅಧ್ಯಕ್ಷ ಬಾಬು ಹೆಡಗಿಮದ್ರಾ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ವಿದ್ಯುತ್ ಸರಬರಾಜು ಇಲಾಖೆಗೆ ಮನವಿ ಪತ್ರ ಸಲ್ಲಿಸಲಾಯಿತು.ಹೆಡಗಿಮದ್ರಾ ಗ್ರಾಮದಲ್ಲಿ 3-4 ದಿನಗಳಿಂದ ವಿದ್ಯುತ್ ಕೊರತೆಯಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕೂಡಲೇ ಈ ಕೊರತೆಯನ್ನು ನೀಗಿಸಬೇಕು ಮತ್ತು ಗ್ರಾಮದಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು ಕೆಳಗೆ ಬೀಳುವ ಪರಿಸ್ಥಿತಿಯಲ್ಲಿವೆ. ವಿದ್ಯುತ್ ತಂತಿ ಜನರ ಕೈಗೆ ತಾಗುವಂತಿದೆ. ಇದರಿಂದ ಸಾರ್ವಜನಿಕರಿಗೆ ಜೀವಭಯವಾಗಿದೆ. ಈ ಕಾರಣದಿಂದ ಕೂಡಲೇ ಈ ತೊಂದರೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ತಾವೇ ಜವಾಬ್ದಾರರು ಆಗಬೇಕಾಗುತ್ತದೆ. ಇನ್ನು ಒಂದು ವಾರದಲ್ಲಿ ಈ ವಿದ್ಯುತ್ ಕಂಬಗಳ ದುರಸ್ತಿಯಾಗದಿದ್ದಲ್ಲಿ ನಮ್ಮ ಸಂಘಟನೆಯಿಂದ ವಿದ್ಯುತ್‌ ಸರಬರಾಜು ಕಚೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಮನವಿ ಪತ್ರದ ಮೂಲಕ ಎಚ್ಚರಿಸಿದ್ದಾರೆ. ಈ ವೇಳೆ ಜನಾರ್ದನ (ಜೆಕೆ) ಅಮ್ಮಣ್ಣ ವಿಶ್ವಕರ್ಮ, ರಮೇಶ ಬಡಿಗೇರ ತುಮಕೂರು ಇದ್ದರು.

-----

18ವೈಡಿಆರ್4: ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ವಿದ್ಯುತ್ ಕಂಬಗಳು ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಕಾರ್ಯನಿರ್ವಾಹ ಅಭಿಯಂತರರು ವಿದ್ಯುತ್ ಸರಬರಾಜು ಇಲಾಖೆ ಅವರಿಗೆ ಮನವಿ ಸಲ್ಲಿಸಲಾಯಿತು.