ಸಾರಾಂಶ
ಕಂದಾಯ ಇಲಾಖೆ ವಿವಿಧ ಶಾಖೆಯ ಕಡತಗಳು ಹಾಗೂ ಹಾಜರಾತಿ ಪುಸ್ತಕ, ಪರಿಶೀಲನೆಯಲ್ಲಿ, ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದೆ ಇರುವ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸದ ತಹಸೀಲ್ದಾರ್ ಮೇಲೆ ಕೆಂಡಾಮಂಡಲರಾದರು. ಜತೆಗೆ ಖುದ್ದು ತಹಸೀಲ್ದಾರ್ ಆವರೇ ಹಾಜರಾತಿ ಪುಸ್ತಕದಲ್ಲಿ ತಹಸೀಲ್ದಾರ್ ಅವರೇ ಸಹಿ ಮಾಡಿರಲಿಲ್ಲ.
ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಅಧಿಕಾರಿಗಳು ಚಳಿಗಾಳಿ ಬಿಟ್ಟು ಕೆಲಸ ಮಾಡಬೇಕು, ಇಲ್ಲವಾದರೆ ಮನೆಗೆ ಹೋಗಿ ಎಂದು ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ತರಾಟೆಗೆ ತೆಗೆದುಕೊಂಡರು.ಸೋಮವಾರ ತಾಲೂಕು ಕಚೇರಿಗೆ ಆಗಮಿಸಿದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು, ವಿವಿಧ ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ತಹಸೀಲ್ದಾರ್ ಡಾ.ನಯನ ಹಾಗೂ ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡು ಎಚ್ಚರಿಕೆ ನೀಡಿದರಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ, ಕಾನೂನು ಬದ್ಧವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.ತಹಸೀಲ್ದಾರ್‌ಗೆ ತರಾಟೆ
ಕಂದಾಯ ಇಲಾಖೆ ವಿವಿಧ ಶಾಖೆಯ ಕಡತಗಳು ಹಾಗೂ ಹಾಜರಾತಿ ಪುಸ್ತಕ, ಪರಿಶೀಲನೆಯಲ್ಲಿ, ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕದೆ ಇರುವ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸದ ತಹಸೀಲ್ದಾರ್ ಮೇಲೆ ಕೆಂಡಾಮಂಡಲರಾದರು. ಜತೆಗೆ ಖುದ್ದು ತಹಸೀಲ್ದಾರ್ ಆವರೇ ಹಾಜರಾತಿ ಪುಸ್ತಕದಲ್ಲಿ ತಹಸೀಲ್ದಾರ್ ಅವರೇ ಸಹಿ ಮಾಡದೇ ಇರುವುದನ್ನು ಗಮಸಿನಿ, ಸಿಕ್ಕಾಪಟ್ಟೆ ಗರಂ ಆದರು.ಇದೇ ವೇಳೆಯಲ್ಲಿ ತಹಸೀಲ್ದಾರ್ ಕಚೇರಿಯ ಅಪರ ಶಿರಸ್ತೇದಾರ್ ಭಾಸ್ಕರ್ ಅವರ ಮೊಬೈಲ್ ಪರಿಶೀಲನೆ ಮಾಡಿದ, ಲೋಕಾಯುಕ್ತ ಅಧಿಕಾರಿಗಳು ಒಂದೇ ತಿಂಗಳಲ್ಲಿ ಲಕ್ಷಾಂತರ ರು.ಗಳ ವ್ಯವಹಾರ ನಡೆಸಿರುವುದು ಗಮನಿಸಿ, ಉಪ ಲೋಕಾಯುಕ್ತರ ಗಮನಕ್ಕೆ ತಂದರು.ಮೊಬೈಲ್‌ನಲ್ಲಿ ಹಣದ ವಹಿವಾಟು
ಅದನ್ನು ವಿವರವಾಗಿ ನೋಡಿದ ಉಪ ಲೋಕಾಯುಕ್ತರು ಭಾಸ್ಕರ್ ಅವರು, ಐದು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವುದು ಹಾಗೂ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡಿರುವುದು ಮತ್ತು ಕಾನೂನು ಬಾಹಿರವಾಗಿ ಮೇಲಧಿಕಾರಿಗಳ ಅನುಮತಿ ಇಲ್ಲದೆ, ಒಂದೇ ತಿಂಗಳಲ್ಲಿ ಸುಮಾರು ಲಕ್ಷಗಳು ಭಾಸ್ಕರ್ ಖಾತೆಯಲ್ಲಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಆಗಾಗಿ ಭಾಸ್ಕರ್ ಅವರ ಎಲ್ಲಾ ಬ್ಯಾಂಕ್ ಖಾತೆಗಳ ಹಣದ ವಹಿವಾಟಿನ ಸಮಗ್ರ ವರದಿ ಸಂಜೆಯೊಳಗೆ ತಲುಪಿಸುವಂತೆ ತಹಸೀಲ್ದಾರ್ ಡಾ.ನಯನರಿಗೆ ಸೂಚಿಸಿದರು.ಉಪ ಲೋಕಾಯುಕ್ತ ವೀರಪ್ಪ ಅವರ ವಿಚಾರಣೆಯಿಂದ, ತಬ್ಬಿಬಾದ ಭಾಸ್ಕರ್ ವ್ಯವಹಾರ ಹಾಗೂ ಅಕ್ರಮ ಹಣದ ವ್ಯವಹಾರ ಬಟಾಬಯಲು ಮಾಡಿ, ಭಾಸ್ಕರ್ ಅವರಿಗೆ ಮೈಬೆವರು ಇಳಿಸಿದರು. ಇದಾದ ನಂತರ ಎಡಿಎಲ್ ಆರ್ ನಿರ್ದೇಶಕರ ಕಚೇರಿ, ಸರ್ವೇ ಇಲಾಖೆ ಕಚೇರಿ, ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ಅನಿರೀಕ್ಷಿತ ಭೇಟಿ ಅಧಿಕಾರಿಗಳಿಗೆ ಸಾರ್ವಜನಿಕರ ಸೇವೆಯ ಪಾಠ ಮಾಡಿದರು.ಅವಧಿ ಮೀರಿದ ಔಷಧಗಳ ಪತ್ತೆ
ನಂತರ ಜಿಲ್ಲಾ ಆಸ್ಪತ್ರೆಯ ಮಹಿಳಾ ವಾರ್ಡ್ ನಂ ಬಿ.೯೮ ರಲ್ಲಿ ಹಾಗೂ ಹೆರಿಗೆ ವಾರ್ಡ್‌ಗಳಲ್ಲಿ ಅವಧಿ ಮಿರಿದ ಹತ್ತಾರು ಚುಚ್ಚುಮದ್ದು ಔಷದಿಗಳು ರೋಗಿಗಳಿಗೆ ನೀಡಲು ಇಟ್ಟಿದ್ದನ್ನು ಗಮನಿಸಿ ಕುಪಿತಗೊಂಡ ಉಪ ಲೋಕಾಯುಕ್ತರು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಅವರ ಮೇಲೆ ಗರಂ ಆದರು. , ಅವಧಿ ಮಿರಿದ ಔಷಧಿ ವಾರ್ಡ್ ಗಳಿಗೆ ಸರಬರಾಜು ಮಾಡಿದವರ ಮೇಲೆ ಶಿಸ್ತು ಕ್ರಮ ಜರುಗಿಸಿ ವರದಿ ಸಲ್ಲಿಕೆ ಮಾಡುವಂತೆ ಡಾ.ಜಗದೀಶ್‌ರಿಗೆ ಸೂಚನೆ ನೀಡಿದರು.