ಜಿಪಂ, ತಾಪಂ ಚುನಾವಣೆಗೆ ಸಿದ್ಧರಾಗಿ: ಮಾಜಿ ಎಂಎಲ್‌ಸಿ ಅಶ್ವಥ್‌ನಾರಾಯಣ

| Published : Sep 10 2024, 01:38 AM IST / Updated: Sep 10 2024, 01:39 AM IST

ಜಿಪಂ, ತಾಪಂ ಚುನಾವಣೆಗೆ ಸಿದ್ಧರಾಗಿ: ಮಾಜಿ ಎಂಎಲ್‌ಸಿ ಅಶ್ವಥ್‌ನಾರಾಯಣ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಮಂಡ್ಯ ನಗರಸಭೆಯಲ್ಲಿ ಎನ್‌ಡಿಎ ಮೈತ್ರಿ ಆಡಳಿತ ಅಧಿಕಾರಕ್ಕೆ ಬಂದಿದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಅಧಿಕಾರ ಹಿಡಿಯಲಾಗಿದೆ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಜೆಪಿಯ ಅರುಣ್‌ಕುಮಾರ್ ಅವರು ನಗರಸಭೆ ಸದಸ್ಯರಾಗಲು ಎಚ್.ಆರ್.ಅರವಿಂದ್ ಪಾತ್ರ ದೊಡ್ಡದು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದಲ್ಲಿರುವ ಚಾಮುಂಡೇಶ್ವರಿ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮುಖಂಡ ಎಚ್.ಆರ್ ಅರವಿಂದ್ ಆಯೋಜಿಸಿದ್ದ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಗೊಂಡ ನಾಗೇಶ್, ಎಂ.ಪಿ.ಅರುಣ್ ಕುಮಾರ್‌ ಹಾಗೂ ಬಿಜೆಪಿ ನಗರ ಅಧ್ಯಕ್ಷ ವಸಂತ್ ಅವರನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ ನಾರಾಯಣ್ ಅವರು ಅಭಿನಂದಿಸಿದರು.

ಬಳಿಕ ಮಾತನಾಡಿದ ಮಾಜಿ ಶಾಸಕ ಅಶ್ವಥ್ ನಾರಾಯಣ್, ಈಗ ನಗರಸಭೆಯಲ್ಲಿ ಎನ್‌ಡಿಎ ಮೈತ್ರಿ ಆಡಳಿತ ಅಧಿಕಾರಕ್ಕೆ ಬಂದಿದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಅಧಿಕಾರ ಹಿಡಿಯಲಾಗಿದೆ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಜೆಪಿಯ ಅರುಣ್‌ಕುಮಾರ್ ಅವರು ನಗರಸಭೆ ಸದಸ್ಯರಾಗಲು ಎಚ್.ಆರ್.ಅರವಿಂದ್ ಪಾತ್ರ ದೊಡ್ಡದು ಎಂದು ಸ್ಮರಿಸಿದರು.

ಅಂದು ನಗರಸಭಾ ಚುನಾವಣೆ ವೇಳೆ ಬಿಜೆಪಿ ನಗರಾಧ್ಯಕ್ಷರಾಗಿದ್ದ ಎಚ್.ಆರ್.ಅರವಿಂದ್ ಅವರು ನಗರವ್ಯಾಪ್ತಿಯ ಎಲ್ಲಾ ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಲು ಶ್ರಮಪಟ್ಟು, ಬಿ-ಫಾರಂಗಾಗಿ ದೊಡ್ಡ ಹೋರಾಟವನ್ನೇ ಮಾಡಿದ್ದರ ಫಲವಾಗಿ ಇಂದು ಮೈತ್ರಿ ಆಡಳಿತದಲ್ಲಿ ಅರುಣ್‌ಕುಮಾರ್ ಉಪಾಧ್ಯಕ್ಷರಾಗಿದ್ದಾರೆ ಎಂದು ನುಡಿದರು.

ಮಂಡ್ಯ ಸಂಸದರಾದ ಕುಮಾರಣ್ಣ ಅವರು ಕೇಂದ್ರ ಸರ್ಕಾರದ ಸಂಪುಟ ಸಚಿರಾಗಿರುವುದರಿಂದ ಹೆಚ್ಚಿನ ಅನುದಾನ, ಯೋಜನೆಗಳನ್ನು ನಗರಸಭೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬಹುದು, ಹೆಚ್ಚಿನ ಅನುದಾನ ತರಿಸಿಕೊಳ್ಳುವ ವ್ಯವಧಾನವನ್ನು ಬೆಳೆಸಿಕೊಳ್ಳಬೇಕು ಎಂದರು.

ಸಿ.ಆರ್.ಫಂಡ್, ಅಮೃತ್ ಯೋಜನೆ, ಬೇರೆ ಬೇರೆ ನಿರ್ಭಯ ಯೋಜನೆಗಳ ಅನುದಾನ ತರಿಸಿಕೊಳ್ಳಬಹುದು, ನಗರವ್ಯಾಪ್ತಿಯಲ್ಲಿ ಸಾಕಷ್ಟು ಕೆರೆಗಳು ಇವೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಸದುಪಯೋಗ ಪಡಸಿಕೊಳ್ಳಬಹುದು ಎಂದರು.

ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ಬರಲಿದೆ, ಬಿಜೆಪಿ-ಜೆಡಿಎಸ್ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತೇವೆ. ಉತ್ತಮ ಆಡಳಿತ ನೀಡುವ ಎಲ್ಲಾ ಅಭ್ಯರ್ಥಿಗಳು ಒಮ್ಮತದಿಂದ ಗೆಲ್ಲಿಸುತ್ತೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿಸುಳ್ಳು ಹೇಳಿದ್ದಾರೆ, ಕರ್ನಾಟಕರಾಜ್ಯಕ್ಕೆ ೬೮ ಸಾವಿರ ಕೋಟಿ ನಷ್ಟ ಆಗಿದೆ, ಕೇಂದ್ರದಿಂದ ಬರಬೇಕಿತ್ತು ಎಂದು ಸುಳ್ಳನ್ನು ಹೇಳಿದ್ದಾರೆ, ಇವತ್ತು ಮಂಗಳೂರು, ಬೆಂಗಳೂರು, ಮೈಸೂರು ಸೇರಿಂದತೆ ಹಲವೆಡೆ ಮಹಾನಗರ ಪಾಲಿಕೆ ಚುನಾವಣೆ ಆಗಿಲ್ಲ, ಈ ನಡುವೆ ತಾಪಂ, ಜಿಪಂ ಚುನಾವಣೆ ಆಗಿಲ್ಲ, ಆದ್ದರಿಂದ ಕೇಂದ್ರ ಸರ್ಕಾರದ ಕೆಲ ಯೋಜನೆಗಳ ಅನುದಾನ ಬರಲ್ಲ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್, ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಸಂತ್ ಕುಮಾರ್, ಮಾಜಿನಗರ ಸಭಾ ಸದಸ್ಯ ಚಂದ್ರ ಪ್ರಸನ್ನ ಬಿಜೆಪಿ ಯುವ ಮುಖಂಡ ಶ್ರೀನಿವಾಸ್, ಕೇಶವ್, ಯೋಗೇಶ್ , ನಂದೀಶ್ ಮತ್ತಿತರರಿದಿದ್ದರು.