ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸಿ

| Published : Apr 17 2025, 12:05 AM IST

ಸಾರಾಂಶ

ಕಣ್ಣಿನ ಆರೋಗ್ಯಕ್ಕೆ ಬಹುಮುಖ್ಯವಾಗಿ ಬೇಕಾಗಿರುವುದು ಆರೋಗ್ಯಕರ ಕೊಬ್ಬಿನ ಅಂಶ. ಉತ್ತಮ ಪ್ರಮಾಣ ಪ್ರೋಟೀನ್ ಆಹಾರ ಅಗತ್ಯವಾದ ಹಾಲು ಮತ್ತು ಹಾಲಿನ ಉತ್ಪನ್ನಗಳು ಕಣ್ಣು ಮಾತ್ರವಲ್ಲದೆ ದೇಹದ ಆರೋಗ್ಯವನ್ನು ಕಾಪಡುತ್ತದೆ. ಪ್ರತಿಯೊಬ್ಬರೂ ಹೆಚ್ಚು ಹೊತ್ತು ಮೊಬೈಲ್, ಕಂಪ್ಯೊಟರ್ ನೋಡುವದರಿಂದ ಕಣ್ಣಿಗೆ ದಣಿವಾಗುತ್ತದೆ, ಹೀಗಾಗಿ ಪ್ರತಿ ೨೦ ನಿಮಿಷಕ್ಕೊಮ್ಮೆ ಕನಿಷ್ಟ ೫ ನಿಮಿಷವಾದರೂ ವಿಶ್ರಾಂತಿ ನೀಡಬೇಕು

ಕನ್ನಡಪ್ರಭ ವಾರ್ತೆ ಕೆಜಿಎಫ್ ಪ್ರತಿ ಜೀವಿಗೂ ಅತಿಮುಖ್ಯವಾದ ಅಂಗ ಕಣ್ಣಿನ ಆರೋಗ್ಯ ಉತ್ತಮವಾಗಿರಬೇಂದರೆ ನಿಯಮಿತ ಪರೀಕ್ಷೆ ಮಾಡಿಸಿಕೊಳ್ಳುವುದರ ಅಗತ್ಯವಿದೆ ಎಂದು ಕೆಜಿಎಫ್‌ನ ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅಭಿಪ್ರಾಯಪಟ್ಟರು.ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು,

ಕಣ್ಣಿನ ಆರೋಗ್ಯಕ್ಕೆ ಬಹುಮುಖ್ಯವಾಗಿ ಬೇಕಾಗಿರುವುದು ಆರೋಗ್ಯಕರ ಕೊಬ್ಬಿನ ಅಂಶ. ಉತ್ತಮ ಪ್ರಮಾಣ ಪ್ರೋಟೀನ್ ಆಹಾರ ಅಗತ್ಯವಾದ ಹಾಲು ಮತ್ತು ಹಾಲಿನ ಉತ್ಪನ್ನಗಳು ಕಣ್ಣು ಮಾತ್ರವಲ್ಲದೆ ದೇಹದ ಆರೋಗ್ಯವನ್ನು ಕಾಪಡುತ್ತದೆ. ಪ್ರತಿಯೊಬ್ಬರೂ ಹೆಚ್ಚು ಹೊತ್ತು ಮೊಬೈಲ್, ಕಂಪ್ಯೊಟರ್ ನೋಡುವದರಿಂದ ಕಣ್ಣಿಗೆ ದಣಿವಾಗುತ್ತದೆ, ಹೀಗಾಗಿ ಪ್ರತಿ ೨೦ ನಿಮಿಷಕ್ಕೊಮ್ಮೆ ಕನಿಷ್ಟ ೫ ನಿಮಿಷವಾದರೂ ವಿಶ್ರಾಂತಿ ನೀಡಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷರಾದ ಡಾ.ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ವಕೀಲರು ತಮ್ಮ ದೈನಂದಿನ ಕೆಲಸಗಳ ಒತ್ತಡದಿಂದ ತಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವ ಅವಶ್ಯವಿದ್ದು, ಕಾಲ ಕಾಲಕ್ಕೆ ವಕೀಲರ ಭವನದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾ. ಮುಜಫರ್ ಎ ಮಾಜಂರಿ, ಹಿರಿಯ ನ್ಯಾ. ಆರ್.ಎಂ, ನಾಧಫ್, ಸಿವಿಲ್ ನ್ಯಾ. ವಿನೋದ್‌ಕುಮಾರ್ ಎಂ, ನ್ಯಾ. ಶಾಮೀದ.ಕೆ. ಡಾ.ಅಗರ್ವಾಲ್ಸ್ ಆಸ್ಪತ್ರೆಯ ಟಿ.ಎನ್.ಮನೋಹರನ್, ಮಂಜು.ಎ, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ಕಾರ್ಯದಶ್ರಿ ಕೆ.ಸಿ.ನಾಗರಾಜ್ ಇದ್ದರು.