ದಾಬಸ್‍ಪೇಟೆ: ಎಚ್‍ಪಿವಿ ಲಸಿಕೆ ಹೂಮನ್ ಪ್ಯಾಪಿಲೋಮ ವೈರಸ್ ಸೋಂಕುಗಳಿಂದ ಉಂಟಾಗುವ ಗರ್ಭಕಂಠ ಹಾಗೂ ಇತರ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ ಎಂದು ವೈದ್ಯಾಧಿಕಾರಿ ಡಾ.ಶುಭಾ ತಿಳಿಸಿದರು

ದಾಬಸ್‍ಪೇಟೆ: ಎಚ್‍ಪಿವಿ ಲಸಿಕೆ ಹೂಮನ್ ಪ್ಯಾಪಿಲೋಮ ವೈರಸ್ ಸೋಂಕುಗಳಿಂದ ಉಂಟಾಗುವ ಗರ್ಭಕಂಠ ಹಾಗೂ ಇತರ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ ಎಂದು ವೈದ್ಯಾಧಿಕಾರಿ ಡಾ.ಶುಭಾ ತಿಳಿಸಿದರು.

ಪಟ್ಟಣದ ಸಿವಿಜಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಚ್‍ಪಿವಿ ಲಸಿಕೆ ಹಾಗೂ ಋತುಚಕ್ರ ನೈರ್ಮಲ್ಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಈ ಲಸಿಕೆಯನ್ನು 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸಾರ ನೀಡಲಾಗುವುದು. ಲಸಿಕೆಯನ್ನು ರಾಷ್ಟ್ರೀಯ ಸಾರ್ವತ್ರಿಕ ಕಾರ್ಯಕ್ರಮದ ಮಾರ್ಗಸೂಚಿ ಅನುಸಾರ ಆಯೋಜನೆ ಮಾಡಲಾಗುತ್ತಿದೆ. ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕಾ ತಜ್ಞ ವೈದ್ಯರಿಂದ ನೀಡಲಾಗುವುದು ಎಂದರು.

ಜಿಲ್ಲಾ ಕಾನೂನು ಅರೆಕಾಲಿಕ ಸ್ವಯಂಸೇವಕಿ ವೇದಾವತಿ ಮಾತನಾಡಿ, ಪ್ರತಿಯೊಬ್ಬರು ಋತುಚಕ್ರದ ವೈಜ್ಞಾನಿಕ ಪ್ರಕ್ರಿಯೆ ಬಗ್ಗೆ ಅರಿತುಕೊಳ್ಳಬೇಕು. ಮಹಿಳೆಯರ ನೈಸರ್ಗಿಕ ಋತುಚಕ್ರದ ಕಾಳಜಿ, ಶುಚಿತ್ವದ ಬಗ್ಗೆ ಕಿಶೋರಿಯರು ಹಾಗೂ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಛತ್ರಪತಿ, ಬಿಎಚ್‍ಇಒ ಜಯಲಕ್ಷ್ಮಮ್ಮ, ಪಿಎಚ್‍ಸಿಒ ಮಂಜಮ್ಮ, ಶಾಲಾ ಶಿಕ್ಷಕವೃಂದ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪೋಟೋ 1 :

ದಾಬಸ್‍ಪೇಟೆಯ ಸಿವಿಜಿ ಪ್ರೌಢಶಾಲೆಯಲ್ಲಿ ಎಚ್‍ಪಿವಿ ಲಸಿಕೆ ಹಾಗೂ ಋತುಚಕ್ರ ನೈರ್ಮಲ್ಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ದಾಬಸ್‍ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶುಭಾ ಮಾತನಾಡಿದರು.