ಸಾರಾಂಶ
ಮಹಾವಿದ್ಯಾಲಯವು ಪ್ರಶಿಕ್ಷಣಾರ್ಥಿಗಳಲ್ಲಿ ವಿಭಿನ್ನ ಕೌಶಲ್ಯಗಳನ್ನು ವೃದ್ಧಿಸಲು ಹಲವಾರು ಕಾರ್ಯಕ್ರಮ ಆಯೋಜಿಸುತ್ತಿದ್ದು, ಇದರ ಮುಖಾಂತರ ನಿಮ್ಮ ವೃತ್ತಿ ಬದುಕನ್ನು ಶ್ರೀಮಂತಗೊಳಿಲು ಸಾಧ್ಯವಿದೆ ಎಂದು ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ.ದಾಮೋದರ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಮಹಾವಿದ್ಯಾಲಯವು ಪ್ರಶಿಕ್ಷಣಾರ್ಥಿಗಳಲ್ಲಿ ವಿಭಿನ್ನ ಕೌಶಲ್ಯಗಳನ್ನು ವೃದ್ಧಿಸಲು ಹಲವಾರು ಕಾರ್ಯಕ್ರಮ ಆಯೋಜಿಸುತ್ತಿದ್ದು, ಇದರ ಮುಖಾಂತರ ನಿಮ್ಮ ವೃತ್ತಿ ಬದುಕನ್ನು ಶ್ರೀಮಂತಗೊಳಿಲು ಸಾಧ್ಯವಿದೆ. ಹೀಗಾಗಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಾಗ ಮಾತ್ರ ಉತ್ತಮ ಸಲಹೆ, ತರಬೇತಿ ಪಡೆದುಕೊಂಡು ಸಮಾಜ ಸುಧಾರಿಸಲು ಸಾಧ್ಯವಿದೆ ಎಂದು ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ.ದಾಮೋದರ ಹೇಳಿದರು.ತಾಲೂಕಿನ ಶ್ರೀ ಕ್ಷೇತ್ರ ಕಲ್ಲೂರು ಸಿದ್ದೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿದ್ಯಾಪ್ರಸಾರಕ ಸಮಿತಿ ಬಿಎಡ್ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಪೌರತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು, ಪ್ರಶಿಕ್ಷಣಾರ್ಥಿಗಳು ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಇದರಿಂದಾಗಿ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲೂ ಸಾಧ್ಯವಿದೆ ಎಂದು ಹೇಳಿದರು.
ವಿದ್ಯಾಪ್ರಸಾರಕ ಸಮಿತಿ ಗೌರವ ಕಾರ್ಯದರ್ಶಿ ಪ್ರೊ.ಎಸ್.ಎಸ್.ಸುಲ್ತಾನಾಪುರ, ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಎಂ.ಸಕ್ರಿ ಮಾತನಾಡಿದರು.ವಿದ್ಯಾಪ್ರಸಾರಕ ಸಮಿತಿ ಉಪಾಧ್ಯಕ್ಷ ಎಸ್.ಎಸ್.ಮೂದೇನೂರ, ಸಂಯೋಜಕ ಎಸ್. ಲೆಪಾಕ್ಸಿ, ಪ್ರಾಚಾರ್ಯ ಡಾ.ಆರ್.ಎಲ್.ಕುಳ್ಳೂರ, ಪ್ರೊ.ಜಿ.ಪಿ.ಗಡದೆ, ಪ್ರೊ.ಎಸ್.ಎಂ.ನಾಯ್ಕ, ಡಾ.ಎನ್.ಎನ್. ವಾಳ್ವೆಕರ, ಪ್ರೊ.ಎಂ.ಆರ್. ಕುಂಬಾರ, ಡಾ.ವಿ.ಬಿ.ವಗ್ಗರ, ಪ್ರೊ.ಜಿ.ಬಿ. ಬಟಕುರ್ಕಿ, ಶಿವಲೀಲಾ ಗೋಲಣ್ಣವರ, ಮಂಜುಳಾ ರಾಠೋಡ, ದೈಹಿಕ ನಿರ್ದೇಶಕ ಪ್ರೊ.ಎ.ಟಿ.ಲಮಾಣಿ ಕಾರ್ಯದರ್ಶಿ ಸಚಿನ್ ಮೂಲಂಗಿ ಇತರರಿದ್ದರು. ಅನಿತಾ ಹೋಳಿ, ಅನ್ನಪೂರ್ಣ ಕೆಂಪಸಿ ಸ್ವಾಗತಿಸಿದರು, ಸುರೇಖಾ ಗೌಡರ ನಿರೂಪಿಸಿದರು, ಸುಮಿತ್ರಾ ತಳವಾರ ವಂದಿಸಿದರು.