ಸಾರಾಂಶ
ಜಿಲ್ಲೆಯಲ್ಲಿ ಅತಿ ಹೆಚ್ಚು ವೀರಶೈವ- ಲಿಂಗಾಯತ ಸಮಾಜದವರು ನೆಲೆಸಿದ್ದಾರೆ. ಈ ಹಿನ್ನೆಲೆ ಸಮುದಾಯದವರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕಿದೆ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಜಿಲ್ಲೆಯಲ್ಲಿ ಅತಿ ಹೆಚ್ಚು ವೀರಶೈವ- ಲಿಂಗಾಯತ ಸಮಾಜದವರು ನೆಲೆಸಿದ್ದಾರೆ. ಈ ಹಿನ್ನೆಲೆ ಸಮುದಾಯದವರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕಿದೆ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭೆ ಸದಸ್ಯತ್ವ ಅಭಿಯಾನದ ಪೋಸ್ಟರ್ ಅನಾವರಣಗೊಳಿಸಿ, ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲಾ ಯುವ ಘಟಕ ಈ ನಿಟ್ಟಿನಲ್ಲಿ ಕ್ರಿಯಾಶೀಲತೆ ಮೆರೆಯುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಯುವ ಉದ್ಯಮಿ ಸಮರ್ಥ ಶಾಮನೂರು, ಕುರುಡಿ ಗಿರೀಶ್, ಯುವ ಘಟಕ ಜಿಲ್ಲಾ ಅಧ್ಯಕ್ಷ ಶಂಭು ಉರೇಕೊಂಡಿ, ಕಾರ್ಯದರ್ಶಿ ಜೆ.ಶಿವರಾಜ್, ಶಿವರತನ್, ಅಜಿತ್ ಆಲೂರ್, ನಿಧಿರಾಜ್ ಐನಳ್ಳಿ, ಕಾರ್ತಿಕ್ ಹಿರೇಮಠ್, ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.ಸದಸ್ಯತ್ವ ಪಡೆಯಲು ಮನವಿ:
ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭೆ ಚುನಾವಣೆ-2024ರಲ್ಲಿ ಸ್ಪರ್ಧಿಸಲು ಮತ್ತು ಭಾಗವಹಿಸಲು ಇನ್ನು ಸದಸ್ಯರಾಗದೇ ಇರುವವರು ಮಹಾಸಭೆ ಸದಸ್ಯತ್ವ ಪಡೆಯಲು ಜೂನ್ 6 ನೋಂದಣಿಗೆ ಕೊನೆ ದಿನವಾಗಿದೆ. ಆದ್ದರಿಂದ ಸದಸ್ಯರಾಗದೇ ಇರುವ ಸಮಾಜ ಬಾಂಧವರು ಈ ಅವಕಾಶ ಸದುಪಯೋಗ ಪಡೆದು, ಮಹಾಸಭೆ ಸದಸ್ಯತ್ವ ಪಡೆಯಬೇಕು. ಸದಸ್ಯತ್ವ ಪಡೆಯಲು ಅಜಿತ್ ಆಲೂರ್ (ಮೊಃ9740592627), ಶಿವರತನ್ (9380321543), ನಿಧಿರಾಜ್ ಐನಳ್ಳಿ (9731984350), ಕಾರ್ತಿಕ್ ಹಿರೇಮಠ್ (8660418371) ಅವರನ್ನು ಸಂಪರ್ಕಿಸಲು ಶಂಭು ಎಸ್. ಉರೇಕೊಂಡಿ ತಿಳಿಸಿದ್ದಾರೆ.- - - -31ಕೆಡಿವಿಜಿ34ಃ:
ದಾವಣಗೆರೆಯಲ್ಲಿ ಅಭಾವೀಲಿಂ ಮಹಾಸಭಾ ಸದಸ್ಯತ್ವ ಅಭಿಯಾನಕ್ಕೆ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಚಾಲನೆ ನೀಡಿದರು.