ಸಾರಾಂಶ
ಹರನಿಗಿಂತ ಗುರು ದೊಡ್ಡವನು, ನಮ್ಮನ್ನು ಸಾಕಿಸಲುಹಿದ ತಾಯಿಯು ನಮಗೆ ಮೊದಲ ಗುರುವಾಗಿದ್ದಾಳೆ.
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಹರನಿಗಿಂತ ಗುರು ದೊಡ್ಡವನು, ನಮ್ಮನ್ನು ಸಾಕಿಸಲುಹಿದ ತಾಯಿಯು ನಮಗೆ ಮೊದಲ ಗುರುವಾಗಿದ್ದಾಳೆ ಎಂದು ಲಿಂಗನಾಯಕನಹಳ್ಳಿಯ ಚೆನ್ನವೀರ ಸ್ವಾಮಿಗಳು ತಿಳಿಸದರು.ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಹಾಲವರ್ತಿ ಮಠದಲ್ಲಿ ಭಾನುವಾರ ಮಹಾಶಿವರಾತ್ರಿ ಪ್ರಯುಕ್ತ ಇಷ್ಟಲಿಂಗ ಸಹಜ ಶಿವಾನುಭವಗೋಷ್ಠಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸಹಜವಾಗಿ ಮನುಷ್ಯನಿಗೆ ಜಾತಿಗಳಿಲ್ಲ, ಹೆಣ್ಣು ಮತ್ತು ಗಂಡು ಎರಡೆ ಜಾತಿ ಹೊರತು ಪಡಿಸಿದರೆ ರಾಜಕೀಯ ಪ್ರೇರಿರತವಾಗಿ ಜಾತಿಗಳನ್ನು ಮಾಡಿಕೊಂಡಿದ್ದಾರೆ, ಲಿಂಗ ಪರಂಪರೆಯನ್ನು ಹೊಂದಿರುವವರು ನಿಜವಾದ ಭಕ್ತರು, ಲಿಂಗದೀಕ್ಷೆ ಹೊಂದದವರು ಭಕ್ತರಲ್ಲ ಅವರು ಭವಿಗಳಿದ್ದಂತೆ ಎಂದರು.ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯ ಕಳೆದರೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ, ವೇದ ಉಪನಿಷತ್ತುಗಳು ಹೇಳಿದಂತೆ ಗುರುವಿಗಿಂತ ದೊಡ್ಡವರಾರು ಇಲ್ಲ, ಎನ್ನುವುದು ಜಗಜ್ಜಾಹೀರಾಗಿದೆ ತಾಯಿಯಿಂದಲೆ ತಂದೆಯ ಪರಿಚಯ ವಾಗುವುದು, ತಂದೆ ಎನ್ನುವು ಶಿವನನ್ನು ಕಾಣಲು ತಾಯಿಯ ಅಗತ್ಯ ಅಮೂಲ್ಯವಾದದ್ದು ಎಂದರು.
ದೇಹವೆಂಬುದು ಸುಂದರ ತೋಟವಿದ್ದಂತೆ. ಸಂಸಾರವೆಂಬ ಹೊಲದಲ್ಲಿ ಬಿತ್ತನೆ ನಡೆಸುವಾಗು ಹಲವಾರು ಅಡೆತಡೆಗಳು ಅಡ್ಡಬರುತ್ತವೆ, ಸಂಸಾರವೆ ಒಂದು ಬ್ರಾಂತಿಯಿದ್ದಂತೆ ದೇವರು ಎಲ್ಲವನ್ನೂ ನಮಗೆ ನೀಡಿದ್ದಾನೆ, ನಮ್ಮದು ಎಂಬುದು ಇಲ್ಲಿ ಯಾವುದು ಇಲ್ಲ ದೇವರ ಅನುಗ್ರಹದಿಂದ ನಾವು ಜನಿಸಿದ್ದೇವೆ ದೇವರು ನೀಡಿರುವ ವಸ್ತುಗಳನ್ನು ಸರಿಯಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕನ್ನು ಸುಂದರವಾಗಿಟ್ಟುಕೊಳ್ಳಬೇಕು ಎಂದರು.ಧಾರ್ಮಿಕ ಕಾರ್ಯಗಳಲ್ಲಿ ತೊಡಗಿದರೆ ನೈಜ ಬದುಕಿನ ಪರಿಚಯವಾಗುತ್ತದೆ, ಮನಸ್ಸನ್ನು ಶುದ್ದವಾಗಿಟುಕೊಳ್ಳಲು ಶಬ್ದ, ಸ್ಪರ್ಶ, ರೂಪ, ರಸ, ಮೂಗು ನಾಲಗೆ ಕಿವಿಯನ್ನು ನಿಗ್ರಹದಲ್ಲಿ ಇಟ್ಟುಕೊಳ್ಳಬೇಕು ಇಲ್ಲವಾದರೆ ನಾವುಗಳು ಜೀವನದಲ್ಲಿ ಯವುದನ್ನು ಗೆಲ್ಲಲು ಸಾಧ್ಯವಿಲ್ಲವೆಂದರು.
ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಬಿ.ಜಿ. ಜಯಶ್ರೀ, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಷಣ್ಮುಖಪ್ಪ ಪೂಜಾರ, ಸಾಹಿತಿ ಬಿ. ರಾಜಶೇಖರ್, ಬಣಕಾರ್ ರೇವಣ್ಣ, ಕೆ.ಎಂ. ಗುರುಸಿದ್ದಯ್ಯ, ಕರಿಬಸವರಾಜ್, ಬಸವರಾಜ್ ಸೀಡ್ಸ್, ನಿವೃತ್ತ ತಹಶೀಲ್ದಾರ್ ಎ. ಕೊಟ್ರಪ್ಪ, ಶೋಭಾ ರಾಜಶೇಖರ್, ವಿದ್ಯಾ ಷಣುಖಪ್ಪ, ಗೌರಮ್ಮ ಮಲ್ಲಿಕಾರ್ಜುನ, ಚೈತ್ರಾ ಹಾಗೂ ಇತರರಿದ್ದರು.