ತಿಪಟೂರು: ಸಂಭ್ರಮದ ಸುಗ್ಗಿ ಸಂಕ್ರಾಂತಿ ಆಚರಣೆಗೆ ಸಿದ್ದತೆ

| Published : Jan 14 2024, 01:35 AM IST / Updated: Jan 14 2024, 04:25 PM IST

ತಿಪಟೂರು: ಸಂಭ್ರಮದ ಸುಗ್ಗಿ ಸಂಕ್ರಾಂತಿ ಆಚರಣೆಗೆ ಸಿದ್ದತೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಕಡಲೇಕಾಯಿ, ಕಬ್ಬು, ಅವರೇಕಾಯಿ ಬೇರೆ ಬೇರೆ ಕಡೆಗಳಿಂದ ಹೇರಳವಾಗಿ ಬಂದಿದ್ದು, ತಿಪಟೂರು ನಗರದಲ್ಲಿ ಎಲ್ಲಿ ನೋಡಿದರೂ ಕಡಲೇಕಾಯಿ, ಅವರೆಕಾಯಿದ್ದೇ ರಾಶಿ.

ಕನ್ನಡಪ್ರಭ ವಾರ್ತೆ ತಿಪಟೂರು

ಈ ವರ್ಷದ ಮೊದಲ ಹಾಗೂ ರೈತರಿಗೆ ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ತಾಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲು ಖರೀದಿ ಸಿದ್ದತೆಗಳು ಭರ್ಜರಿಯಾಗಿ ನಡೆಯುತ್ತಿದ್ದು, ಇದರಿಂದ ನಗರವು ಜನಜಂಗುಳಿಯಿಂದ ಕೂಡಿತ್ತು.

ನಗರದ ಪ್ರವಾಸಿ ಮಂದಿರದ ವೃತ್ತದಿಂದ ಅರಳೀಕಟ್ಟೆ ವೃತ್ತ ಸೇರಿದಂತೆ ರೈಲ್ವೆ ಸ್ಟೇಷನ್ ರಸ್ತೆ, ತರಕಾರಿ ಮಾರುಕಟ್ಟೆ, ಬಿ.ಎಚ್.ರಸ್ತೆಯ ಅಕ್ಕಪಕ್ಕದ ರಸ್ತೆಗಳಲ್ಲಿ ಹಬ್ಬಕ್ಕೆ ಬೇಕಾದ ಎಳ್ಳು-ಬೆಲ್ಲ, ಅವರೇಕಾಯಿ, ಕಡಲೆಕಾಯಿ, ಕಬ್ಬು, ಗೆಣಸು ಮತ್ತಿತರ ತರೇಹವಾರಿ ವಸ್ತುಗಳನ್ನು ವ್ಯಾಪಾರಸ್ಥರು ರಾಶಿ ಹಾಕಿಕೊಂಡಿದ್ದರು. 

ಈ ಬಾರಿ ಕಡಲೇಕಾಯಿ, ಕಬ್ಬು, ಅವರೇಕಾಯಿ ಬೇರೆ ಬೇರೆ ಕಡೆಗಳಿಂದ ಹೇರಳವಾಗಿ ಬಂದಿದ್ದು, ನಗರದಲ್ಲಿ ಎಲ್ಲಿ ನೋಡಿದರೂ ಕಡಲೇಕಾಯಿ, ಅವರೆಕಾಯಿದ್ದೇ ರಾಶಿ. 

ಅವರೆಕಾಯಿ ಕೆಜಿ.ಗೆ ೪೦-೫೦ರು. ಇದ್ದರೆ, ಕಡಲೇಕಾಯಿ ಒಂದು ಕೆಜಿಗೆ ೩೦ ರು.ಗಳಿತ್ತು. ಕಬ್ಬು ೧ ಜೊತೆ ೩೦-೪೦ರು.ಗಳಾಗಿದ್ದು, ಹಬ್ಬಕ್ಕೆ ಮುಖ್ಯವಾಗಿ ಬೇಕಾದ ಎಳ್ಳು-ಬೆಲ್ಲದ ಪ್ಯಾಕೇಟ್‌ಗಳ ಬೆಲೆಯಲ್ಲೂ ಹೆಚ್ಚಾಗಿದ್ದು, ಹೂವಿನ ಬೆಲೆಯೂ ತುಸು ಹೆಚ್ಚಳವಾಗಿದೆ.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳು ಗಗನಕ್ಕೇರುತ್ತಿದ್ದು, ಈ ನಡುವೆಯೂ ಹಬ್ಬದ ತಯಾರಿಕೆ ನಡೆದಿದೆ. ಬೆಲೆ ಹೆಚ್ಚಿರಲಿ ಕಡಿಮೆ ಇರಲಿ, ಕೊಳ್ಳಲೇಬೇಕಾಗಿರುವುದರಿಂದ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದದ್ದು ಕಂಡು ಬಂದಿತು.