ಸಾರಾಂಶ
ಕ್ಯಾನ್ಸರ್‌ನಂತಹ ರೋಗಗಳನ್ನು ಹಿಂಜರಿಕೆ ಇಲ್ಲದೇ ಆರಂಭಿಕ ಹಂತದಲ್ಲಿಯೇ ಹತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ರೋಗಮುಕ್ತರಾಗಿ ಬದುಕು ಗೆಲ್ಲಬಹುದು ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಹೇಳಿದ್ದಾರೆ.
- ಹೊನ್ನಾಳಿಯಲ್ಲಿ ಕ್ಯಾನ್ಸರ್ ರೋಗಗಳ ತಪಾಸಣೆ ಶಿಬಿರದಲ್ಲಿ ರಾಘವೇಂದ್ರ ಅಭಿಮತ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕ್ಯಾನ್ಸರ್‌ನಂತಹ ರೋಗಗಳನ್ನು ಹಿಂಜರಿಕೆ ಇಲ್ಲದೇ ಆರಂಭಿಕ ಹಂತದಲ್ಲಿಯೇ ಹತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ರೋಗಮುಕ್ತರಾಗಿ ಬದುಕು ಗೆಲ್ಲಬಹುದು ಎಂದು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಹೇಳಿದರು.ಪಟ್ಟಣದ ಶ್ರೀ ಚನ್ನಮಲ್ಲಿಕಾರ್ಜುನ ಪ್ರಾಥಮಿಕ ಶಾಲಾ ಅವರಣದಲ್ಲಿ ರಾಘವೇಂದ್ರ ಮತ್ತವರ ಯುವಕರ ತಂಡದ ನೇತೃತ್ವದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವೈದ್ಯರ ತಂಡದ ಸಹಕಾರದಲ್ಲಿ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಜೊತೆಗೆ ತಂಬಾಕು ಸೇವನೆಯಿಂದ ಅಗುವ ಬಾಯಿ, ಗಂಟಲು ಕ್ಯಾನ್ಸರ್ ರೋಗಗಳ ಉಚಿತ ತಪಾಸಣೆ ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ವೈದ್ಯಕೀಯ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ನೇಹಿತರ ತಂಡದೊಂದಿಗೆ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯನ್ನು ಸಂಪರ್ಕಿಸಿ, ಹೊನ್ನಾಳಿಯಲ್ಲಿ ವಿಶೇಷವಾಗಿ ಕಡು ಬಡ ಮಹಿಳೆಯರು ಅನುಭವಿಸುವ ಸ್ತನ ಮತ್ತು ಗರ್ಭಕೋಶ ಉಚಿತ ಕ್ಯಾನ್ಸ್ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದೇವೆ. ನೂರಾರು ಮಹಿಳೆಯವರು ಹಾಗೂ ಪುರುಷರು ಶಿಬಿರಕ್ಕೆ ಅಗಮಿಸಿ, ಕ್ಯಾನ್ಸರ್ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರಿಗೆ ನೇರವಾಗಿ ಕಿದ್ವಾಯಿ ಸ್ಮಾರಕ ಗಂಧಿ ಸಂಸ್ಥೆಯ ಆಸ್ಪತ್ರೆಗೆ ಬರುವಂತೆ ಗುರುತಿನ ಚೀಟಿ ನೀಡಲಾಗಿದೆ. ಅಲ್ಲಿ ಅವರಿಗೆ ತಜ್ಞವೈದ್ಯರಿಂದ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗುವುದು ಎಂದರು.ಕಿದ್ವಾಯಿ ಸಂಸ್ಥೆ ಆಸ್ಪತ್ರೆ ವೈದ್ಯರಾದ ಡಾ. ಕಾವ್ಯ ಗರ್ಗ, ಡಾ.ಕವನ ಚಂದ್ರಶೇಖರ್, ನರ್ಸಿಂಗ್ ತಜ್ಞರಾದ ರೂಪಶ್ರೀ, ಹಂಸವೇಣಿ. ಸಂಸ್ಥೆಯ ಸಂಚಾಲಕ ಭೀಮಾ ರೆಡ್ಡಿ ಇತರರು ಇದ್ದು, ರೋಗ ತಪಾಸಣೆ ಜೊತೆಗೆ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಅವರ ಜೊತೆ ಪುರಸಭೆ ಮಾಜಿ ಸದಸ್ಯ ಎಚ್.ಬಿ.ಅಣ್ಣಪ್ಪ ಸುಣ್ಣಗಾರ ಮಲ್ಲೇಶ್, ರಾಮು, ಪ್ರಶಾಂತ್, ಸತೀಶ್, ಉಮೇಶ್ ಬಂತೇರ, ಚಂದ್ರಪ್ಪ ಬಂತಿ, ಪುಟ್ಟ, ಹಳದಪ್ಪ, ಯುವಕರು ಭಾಗವಹಿಸಿದ್ದರು.- - -
ಕೋಟ್ ಬಡ ಹೆಣ್ಣು ಮಕ್ಕಳು, ಕೂಲಿ ಕಾರ್ಮಿಕರು ಹಣ ಖರ್ಚು ಮಾಡಿ ದೂರದ ನಗರ, ಪಟ್ಟಣಗಳಿಗೆ ಹೋಗಿ ರೋಗಗಳ ಬಗ್ಗೆ ವೈದ್ಯರಲ್ಲಿ ತೋರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ರೋಗಗಳು ಕೊನೆ ಹಂತ ತಲುಪಿ ಪ್ರಾಣವನ್ನೇ ಕಳೆದುಕೊಂಡ ಅನೇಕ ಘಟನೆಗಳು ನೋಡಿದ್ದೇವೆ. ಈ ಹಿನ್ನಲೆ ಹೊನ್ನಾಳಿಯಲ್ಲಿ ಇದೇ ಪ್ರಥಮ ಬಾರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ಆಯೋಜಿಸಲಾಗಿದೆ- ರಾಘವೇಂದ್ರ, ನಿರ್ದೇಶಕ, ಪಿಎಲ್‌ಡಿ ಬ್ಯಾಂಕ್
- - --13ಎಚ್.ಎಲ್.ಐ1:
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ನೇತೃತ್ವದಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವತಿಯಿಂದ ಉಚಿತ ಕ್ಯಾನ್ಸರ್ ರೋಗ ತಪಾಸಣಾ ಶಿಬಿರ ನಡೆಯಿತು.