ಟ್ರ್ಯಾಪಿಂಗ್ ಮಾಡುತ್ತಿರುವ ಬಗ್ಗೆ ಎಲ್ಲ ಎಲ್ಲಾ ದಾಖಲೆಗಳಿವೆ, ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ರವಿ ಗಣಿಗ ಹೇಳಿಕೆ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಡಿಕೇರಿ; ಟ್ರ್ಯಾಪಿಂಗ್ ಮಾಡುತ್ತಿರುವ ಬಗ್ಗೆ ಎಲ್ಲ ಎಲ್ಲಾ ದಾಖಲೆಗಳಿವೆ, ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ರವಿ ಗಣಿಗ ಹೇಳಿಕೆ ವಿಚಾರವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ರವಿ ಗಣಿಗ ಮಾಧ್ಯಮದಿಂದ ಬಂದವರು, ಬಹುಶ ಅವರಿಗೆ ಎಲ್ಲ ಮಾಹಿತಿ ದಾಖಲೆಗಳು ಸಿಕ್ಕಿರಬಹುದೇನೋ. ಅದೇನೆ ಇದ್ದರು ಕರ್ನಾಟಕದ ರಾಜಕಾರಣ ಇಲ್ಲಿಗೆ ಬರಬಾರದಿತ್ತು. ಬಹಳ ದೊಡ್ಡ ದಿಗ್ಗಜರು, ಮುತ್ಸದಿಗಳು ಸಾಮಾಜಿಕ ನ್ಯಾಯ ಕೊಟ್ಟು ರಾಜ್ಯದ ಹಿತವನ್ನು ಕಾಪಾಡುವ ಕೆಲಸ ಮಾಡಿದ್ದಾರೆ. ಇಂದು ಅದನ್ನೆಲ್ಲ ಬಿಟ್ಟು ಯಾವ ವಿಷಯ ಚರ್ಚೆ ಆಗುತ್ತಿದೆ, ಈ ರಾಜಕೀಯ ಸ್ಥಿತಿ ಎಲ್ಲಿ ಹೋಗಿ ತಲುಪುತ್ತದೆ ಎನ್ನುವ ಆತಂಕಕಾಡುತ್ತಿದೆ ಎಂದು ಹೇಳಿದರು.ಆದರೆ ಇದು ಆಗಬಾರದಿತ್ತು, ಈ ರೀತಿ ರಾಜಕಾರಣ ಆಗಬಾರದಿತ್ತು. ಇದಕ್ಕೆ ಯಾರೇ ಕಾರಣ ಇರಬಹುದು, ಅವರು ಇವರು ಎಂದು ನಾನು ಬೊಟ್ಟು ಮಾಡಿ ತೋರಿಸಲ್ಲ, ಇದ್ಯಾವುದು ಸರಿಯಲ್ಲ ಎಂದರು.ರವಿ ಗಣಿಗ ನಮ್ಮ ಪಕ್ಷದ ಶಾಸಕರಿರಬಹುದು, ಅವರೇನು ನನ್ನ ಬಳಿ ಚರ್ಚೆ ಮಾಡಿಲ್ಲ. ಆದರೆ ಇವತ್ತು ಎಲ್ಲರೂ ಅದೇ ರೀತಿ ಚರ್ಚೆ ಮಾಡುತ್ತಿದ್ದಾರೆ, ದೊಡ್ಡ ದೊಡ್ಡವರು ಇದನ್ನು ಚರ್ಚೆ ಮಾಡುತ್ತಿದ್ದಾರೆ. ಇಂದು ಜೆನ್ಜಿ ಗಳಿಗೆ ನೂರೆಂಟು ಸಮಸ್ಯೆಗಳು ಇವೆ, ಅವರಿಗೆ ಮಾರ್ಗದರ್ಶಕರಾಗಬೇಕಾಗಿತ್ತು. ಅವರು ಪೆನ್ ಡ್ರೈವ್, ಸಿಡಿ, ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಮಾಡುವಂತೆ ಆಗಿದೆ, ಇದು ನನಗೆ ಬೇಸರ ಎಂದರು.