ಉಪ ನಿಬಂಧಕರ ಕಚೇರಿಗೆ ಘೇರಾವ್‌

| Published : Apr 28 2025, 11:45 PM IST

ಸಾರಾಂಶ

ನಿಯಮ ಉಲ್ಲಂಘಿಸಿ ಚುನಾವಣೆ ಪ್ರಕ್ರಿಯೆ ನಡೆಸಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ ಮತ್ತು ಬೆಂಬಲಿಗರು ಒತ್ತಾಯಿಸಿ ಸಹಕಾರ ಇಲಾಖೆಯ ಉಪ ನಿಬಂಧಕರ ಕಚೇರಿಗೆ ಈ ವಿಚಾರವಾಗಿ ಘೇರಾವ್ ಹಾಕಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಲಾರನಿಯಮ ಉಲ್ಲಂಘಿಸಿ ಚುನಾವಣೆ ಪ್ರಕ್ರಿಯೆ ನಡೆಸಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು, ಮುಳಬಾಗಲು ಶಾಸಕ ಸಮೃದ್ಧಿ ಮಂಜುನಾಥ ಮತ್ತು ಬೆಂಬಲಿಗರು ಒತ್ತಾಯಿಸಿ ಸಹಕಾರ ಇಲಾಖೆಯ ಉಪ ನಿಬಂಧಕರ ಕಚೇರಿಗೆ ಈ ವಿಚಾರವಾಗಿ ಘೇರಾವ್ ಹಾಕಿದ ಘಟನೆ ನಡೆಯಿತು.

ಮುಳಬಾಗಲು ತಾಲೂಕಿನ ಅಂಬ್ಲಿಕಲ್ ಗ್ರಾಮದ ಸಹಕಾರ ಸಂಘಕ್ಕೆ ಅಕ್ರಮವಾಗಿ ಚುನಾವಣೆ ಪ್ರಕ್ರಿಯೆ ಮಾಡಲಾಗಿದೆ. ಕಾಂಗ್ರೆಸ್ ನಾಯಕರ ಆಣತಿಯಂತೆ ಸಹಕಾರ ಇಲಾಖೆಯ ಅಧಿಕಾರಿಗಳು ನಿಯಮಬಾಹಿರವಾಗಿ ಕ್ರಮ ಜರುಗಿಸಿದ್ದಾರೆ ಎಂದು ಆರೋಪಿಸಿದರು.ಚುನಾವಣಾ ಸೂಚನಾ ಪತ್ರ ತಲುಪುವುದಕ್ಕೆ ಮುನ್ನವೇ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜೆಡಿಎಸ್ ಪ್ರಾಬಲ್ಯ ಇರುವ ಬಗ್ಗೆ ಮಾಹಿತಿಯಿದ್ದ ಕಾಂಗ್ರೆಸ್ ಮುಖಂಡರು ಈ ಕೆಲಸವನ್ನು ಅಧಿಕಾರಿಗಳ ಮೂಲಕ ಮಾಡಿಸಿದ್ದಾರೆ. ತಕ್ಷಣವೇ ಚುನಾವಣಾ ಪ್ರಕ್ರಿಯೆ ರದ್ದುಪಡಿಸಿ, ತಪ್ಪಿತಸ್ಥ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಶಾಸಕರು ಒತ್ತಾಯಿಸಿದರು. ಮನವಿ ಪತ್ರ ಸ್ವೀಕರಿಸಿದ ಅಧಿಕಾರಿ ಕಿಶೋರ್ ಕುಮಾರ್ ಜೋಷಿ ಕ್ರಮ ಜರುಗಿಸುವುದಾಗಿ ಭರವಸೆ ಕೊಟ್ಟರು.

ಕಾಂಗ್ರೆಸ್‌ಗೆ ರಾಜಕಾರಣ ಬಿಟ್ಟರೆ ಬೇರೆ ಗತಿ ಇಲ್ಲ:

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ನರಮೇಧ ನಡೆಯುತ್ತಿದೆ. ಅದರ ಬಗ್ಗೆ ಚಿಂತೆ ಇಲ್ಲ, ರಾಜಕಾರಣ ಬಿಟ್ಟರೆ ಕಾಂಗ್ರೆಸ್‌ಗೆ ಬೇರೆ ಗತಿ ಇಲ್ಲ. ಶಾಸಕರ ಪತ್ನಿ ಸಚಿವರ ಪತ್ನಿ ಮಕ್ಕಳು ಸತ್ತಿದ್ದರೆ ಅವರಿಗೆ ಈ ನೋವು ಅರ್ಥವಾಗುತ್ತಿತ್ತು ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿರುವದನ್ನು ಖಂಡಿಸಿ ಇಡೀ ದೇಶ ಕಣ್ಣಿರು ಹಾಕುತ್ತಿದೆ. ಅಲ್ಲಿ ಸತ್ತಿರುವವರು ಹಿಂದೂಗಳು ಕಾಶ್ಮೀರ, ಕನ್ಯಾಕುಮಾರಿ, ಕರ್ನಾಟಕದವರು ಅಲ್ಲ ನಮ್ಮ ಹಿಂದೂಗಳು. ಅವರಿಗೆ ಆದ ಗತಿ ಮುಂದೆ ನಮ್ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ ಇದಕ್ಕೆ ಹೊಣೆ ಯಾರು ಎಂದು ಪ್ರಶ್ನೆ ಮಾಡಿದರು. ಪಾಕಿಸ್ತಾನದಲ್ಲಿ ಡಾಕ್ಟರೇಟ್ ಕೊಟ್ಟರೆ ಸಿಎಂ ಸಿದ್ದರಾಮಯ್ಯಗೆ ಮಾತ್ರ:

ಪಾಕಿಸ್ತಾನದಲ್ಲಿ ಡಾಕ್ಟರೇಟ್ ಕೊಟ್ಟರೆ ಅದು ನಮ್ಮ ಸಿಎಂ ಸಿದ್ದರಾಮಯ್ಯನವರಿಗೆ ಮಾತ್ರ ಕೊಡುತ್ತಾರೆ. ಒಂದು ಜಾತಿ ಒಲೈಕೆ ಮಾಡಿಕೊಳ್ಳುವುದು ಓಟಿಂಗ್ ಪ್ಯಾಕ್ಟ್. ಈ ರಾಜಕಾರಣಿಗಳಿಗೆ ಬುದ್ಧಿ ಬರಲ್ಲ ಈ ರೀತಿಯ ಘಟನೆಗಳು ಮರುಕಳಿಸಬಾರದು ಎಂದರೆ ಯುದ್ದ ನಡೆಯಲೇಬೇಕು ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬೇಕು ಎಂದು ಹೇಳಿದರು.