ಸಾರಾಂಶ
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ಬಿಜೆಪಿ ಸಂಸ್ಥಾಪಕ ಡಾ.ಶ್ಯಾಂ ಪ್ರಸಾದ್ ಮುಖರ್ಜಿ ಅವರ ಜಯಂತಿ ಅಂಗವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗಿಡ ನೆಟ್ಟು ಜಯಂತಿ ಆಚರಣೆ ಮಾಡಿದರು.ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ಪಟ್ಟಣದ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಕಾರ್ಯಕರ್ತರು ಗಿಡ ನೆಟ್ಟು ಸ್ಮರಣೆ ಮಾಡಿದರು.
ನಂತರ ಪೀಹಳ್ಳಿ ರಮೇಶ್ ಮಾತನಾಡಿ, ಡಾ.ಶ್ಯಾಂ ಪ್ರಸಾದ್ ಮುಖರ್ಜಿ ಅವರ ಮುಂದಾಲೋಚನೆ, ಪರಿಕಲ್ಪನೆಯಿಂದ ಹೊಸ ಪೀಳಿಗೆಗಳಿಗೆ ಬದ್ರ ಬುನಾದಿ ಹಾಕಲು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ಕಾರ್ಯಕರ್ತರ ನೆರಳಾಗಿದ್ದಾರೆ. ಜೊತೆಗೆ ಕಾಶ್ಮೀರದಲ್ಲಿದ್ದ ಭಯೋತ್ಪಾದನೆ ನಿರ್ಮೂಲನೆ ಮಾಡಲು 370 ಕಾಯಿದೆ ವಿಚಾರವಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬಂದು ಹೋರಾಟ ಮುಂದುವರಿಸಿದ್ದರು. ಅವರ ಕನಸನ್ನು ಪ್ರಧಾನಿ ಮೋದಿ ಅವರು ನನಸು ಮಾಡಿದ್ದಾರೆ. ಶ್ಯಾಂ ಪ್ರಸಾದ್ ಮುಖರ್ಜಿ ರವರ ಮಾದರಿ ವಿಚಾರಗಳನ್ನು ಹೊರ ತರಲು ಮರಗಿಡ ನೆಟ್ಟು ಸ್ಮರಿಸಲಾಗುತ್ತಿದೆ ಎಂದರು.ಈ ವೇಳೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್ ನಂಜುಂಡೇಗೌಡ, ಮುಖಂಡ ಇಂಡವಾಳು ಸಚ್ಚಿದಾನಂದ, ಬಲ್ಲೇನಹಳ್ಳಿ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ನಂದಿಶ್, ಉಮೆಶ್ ಕುಮರ್, ದೇವೀರಮ್ಮ, ಜಯಲಕ್ಷ್ಮಮ್ಮ, ಮಂಜುನಾಥ್, ಪುಟ್ಟರಾಮು, ಮಹದೇವಸ್ವಾಮಿ, ಪ್ರಕಾಶ್ ಸೇರಿದಂತೆ ಇತರರು ಹಾಜರಿದ್ದರು.ನಿರುದ್ಯೋಗಿಗಳಿಗೆ 5ರಂದು ನೇರ ಸಂದರ್ಶನ
ಮಂಡ್ಯ:ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಆಕ್ಸಿಸ್ ಬ್ಯಾಂಕ್, ಮೆ.ಇ.ಎಸ್.ಎಸ್.ವಿ.ಇ.ಇ ರಿಕ್ರೂಟೆಕ್, ಮೆ.ಪೀಪಲ್ ಸೆಕ್ಯೂರಂ ಎಚ್.ಆರ್ ಪ್ರೈ,ಲಿ., ಮೆ.ನಿವಬುಪ ಹೆಲ್ತ್ ಇನ್ಸೂರೆನ್ಸ್ ಕಂಪನಿ ಲಿ., ಮತ್ತು ಮೆ.ಸ್ಪೆಕ್ಟ್ರಂ ಟೂಲ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ನೇರ ಸಂದರ್ಶನ ನಡೆಯಲಿದೆ.ಸಂಸ್ಥೆಗಳಲ್ಲಿ ಖಾಲಿಯಿರುವ ಬ್ಯುಸಿನಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್, ಈಸಿ ಕಸ್ಟಮರ್ ಅಸೋಸಿಯೇಟ್, ಟೆಕ್ನಿಷಿಯನ್, ಮೆಷಿನ್ ವಕ್ಸ್ ಮತ್ತು ಟೆಲಿಸೇಲ್ಸ್, ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ (ಯಾವುದೇ ಟ್ರೇಡ್), ಡಿಪ್ಲಮೊ (ಯಾವುದೇ ಟ್ರೇಡ್), ಬಿ.ಇ (ಮೆಕ್ಯಾನಿಕಲ್) ಹಾಗೂ ಯಾವುದೇ ಪದವಿ ಉತ್ತೀರ್ಣರಾದ 18 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಜುಲೈ 5 ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ತಮ್ಮ ರೆಸ್ಯೂಮೆ/ ಬಯೋಡೇಟಾಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂ-08232-295124, ಮೊ-9164642684 ಮತ್ತು ಮೊ-8970646629 ನ್ನು ಸಂಪರ್ಕಿಸಬಹುದು.6ರಂದು ಡಾ.ಬಾಬು ಜಗಜೀವನ ರಾಂರವರ ಪುಣ್ಯ ತಿಥಿಮಂಡ್ಯ: ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 38ನೇ ಪುಣ್ಯತಿಥಿ ಅಂಗವಾಗಿ ಜುಲೈ 6ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಉದ್ಯಾನವನದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.