ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಪರ್ಧೆ

| Published : Oct 18 2023, 01:00 AM IST

ಸಾರಾಂಶ

ಗಿರೀಶ್‌ ಅವರ ಹಸುಗೆ ಪ್ರಥಮ ಸ್ಥಾನ
ಗಿರೀಶ್‌ ಅವರ ಹಸುಗೆ ಪ್ರಥಮ ಸ್ಥಾನ ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ಗಿರೀಶ್ ಬಿನ್ ಮಲೇಶ್ ಅವರ ಹಸು ಬೆಳಗ್ಗೆ ಮತ್ತು ಸಂಜೆ 35.910 ಲೀಟರ್ ಹಾಲು ಕರೆಯುವ ಮೂಲಕ ಪ್ರಥಮ ಸ್ಥಾನ ಪಡೆದು ಗಮನ ಸೆಳೆಯಿತು. ಉಳಿದಂತೆ ಪಾಂಡವಪುರ ತಾಲೂಕು ಬನ್ನಂಗಾಡಿ ಗ್ರಾಮದ ದೊಡ್ಡೇಗೌಡ ಬಿನ್ ದೊಡ್ಡೇಗೌಡ ಹಸು 29.96 ಲೀಟರ್ ಹಾಲು ಕರೆಯುವ ಮೂಲಕ ದ್ವಿತೀಯ ಸ್ಥಾನ ಪಡೆದರೆ, ತಾಲೂಕು ದೊಡ್ಡಪಾಳ್ಯ ಗ್ರಾಮದ ರಂಜಿತ್ ಬಿನ್ ನಾರಾಯಣ ರವರ ಹಸು 29.43 ಲೀಟರ್ ಹಾಲು ಕರೆದು ತೃತೀಯ ಸ್ಥಾನ ಪಡೆದುಕೊಂಡಿತು. ಶ್ರೀರಂಗಪಟ್ಟಣದ ನರಸಿಂಹೇಗೌಡ ಬಿನ್ ಬೆಟ್ಟಪ್ಪ ಅವರ ಹಸು 29.04 ಲೀಟರ್ ಹಾಲು ಕರೆದು ನಾಲ್ಕನೇ ಸ್ಥಾನ, ತಾಲೂಕು ಟಿ.ಎಂ ಹೊಸೂರು ಗ್ರಾಮದ ಎಚ್.ಎಂ.ರಾಜೇಶ ಬಿನ್ ಚಿಕ್ಕಮಾಯಿಗೌಡರ ಹಸು 26.53 ಲೀಟರ್ ಹಾಲು ಕರೆದು 5ನೇ ಸ್ಥಾನ ಪಡೆಯಿತು. ಪ್ರಥಮ ಸ್ಥಾನ ಪಡೆದ ರಾಸಿನ ಮಾಲೀಕರಿಗೆ ₹25 ಸಾವಿರ, ದ್ವಿತೀಯ ₹20 ಸಾವಿರ, ತೃತೀಯ ₹15 ಸಾವಿರ, ನಾಲ್ಕನೇ ಬಹುಮಾನ ₹10 ಸಾವಿರ ಹಾಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಯಿಸಲಾಯಿತು. ಜಿಲ್ಲಾದ್ಯಂತ ವಿವಿಧೆಡೆಗಳಿಂದ ಒಟ್ಟು 17 ರಾಸುಗಳು ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದವು. ಶಾಸಕ ರಮೇಶಬಂಡಿಸಿದ್ಧೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಎಸ್ಪಿ ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದು ಬಹುಮಾನ ವಿತರಿಸಿ ರಾಸುಗಳ ಮಾಲೀಕರಿಗೆ ಶುಭ ಕೋರಿದರು. 17ಕೆಎಂಎನ್ ಡಿ33 ಶ್ರೀರಂಗಪಟ್ಟಣ ದಸರಾ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಾಲೂಕಿನ ಸಬ್ಬನಕುಪ್ಪೆ ಗ್ರಾಮದ ಗಿರೀಶ್ ಬಿನ್ ಮಲೇಶ್ ಗೆ ಶಾಸಕ ರಮೇಶಬಂಡಿಸಿದ್ದೇಗೌಡ ಬಹುಮಾನ ವಿತರಿಸಿದರು.