17 ವರ್ಷ ವಯೋಮಿತಿಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್‌ ಅಕಾಡೆಮಿಯ ಅದಿತಿ .ಜಿ. ಭಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ.

ತುಮಕೂರು: ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸ್ಕೂಲ್‌ಗೇಮ್ಸ್ ಫೆಢರೇಷನ್‌ ಆಫ್‌ಇಂಡಿಯಾ ಆಯೋಜಿಸಿದ್ದ 69 ನೇ ರಾಷ್ಟ್ರಮಟ್ಟದ 17 ವರ್ಷ ವಯೋಮಿತಿಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್‌ ಅಕಾಡೆಮಿಯ ಅದಿತಿ .ಜಿ. ಭಾಗವಹಿಸಿ ಕಂಚಿನ ಪದಕ ಪಡೆಯುವ ಮೂಲಕ 2026ರಲ್ಲಿ ನಡೆಯಲಿರುವ ಭಾರತದ ಅತಿದೊಡ್ಡ ಕ್ರೀಡಾಕೂಟವಾದ ಖೇಲೋ ಇಂಡಿಯಾ ಯೂತ್‌ ಗೇಮ್ಸ್ ಭಾಗವಹಿಸಲಿದ್ದಾರೆ. ಅದಿತಿಯ ಈ ಸಾಧನೆಗೆ ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್‌ ಗಂಗಾಧರ್ ಅಭಿನಂದಿಸಿದ್ದಾರೆ. ಈ ವೇಳೆ ವಿವೇಕಾನಂದ ಶೂಟಿಂಗ್‌ ಅಕಾಡೆಮಿಯ ತರಬೇತುದಾರ ಅನಿಲ್ ಮತ್ತಿತರರಿದ್ದರು.