ನಮ್ಮೂರಲ್ಲಿ ನೀರಿಲ್ಲವೆಂದು ಸಿಎಂಗೆ ಬಾಲಕಿ ಪತ್ರ

| Published : Jul 07 2025, 11:48 PM IST

ಸಾರಾಂಶ

ನಮ್ಮೂರಲ್ಲಿ ನೀರಿಲ್ಲ, ಕಬಿನಿ ಜಲಾಶಯದಿಂದ ನದಿಪಾತ್ರದಲ್ಲಿ ಹರಿಯುವ ನೀರನ್ನು ಕೆರೆಗೆ ತುಂಬಿಸಬೇಕೆಂದು ಬಾಲಕಿಯೊಬ್ಬಳು ಮನವಿ ಮಾಡಿಕೊಂಡ ಘಟನೆ ಹನೂರು ತಾಲೂಕಿನ ರಾಮಾಪುರ ಹೋಬಳಿಯ ಕೆಂಪ್ಪಯ್ಯನಹಟ್ಟಿಯಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್‌ ಆಗಿದೆ.

ಕನ್ನಡಪ್ರಭ ವಾರ್ತೆ, ಹನೂರು

ನಮ್ಮೂರಲ್ಲಿ ನೀರಿಲ್ಲ, ಕಬಿನಿ ಜಲಾಶಯದಿಂದ ನದಿಪಾತ್ರದಲ್ಲಿ ಹರಿಯುವ ನೀರನ್ನು ಕೆರೆಗೆ ತುಂಬಿಸಬೇಕೆಂದು ಬಾಲಕಿಯೊಬ್ಬಳು ಮನವಿ ಮಾಡಿಕೊಂಡ ಘಟನೆ ಹನೂರು ತಾಲೂಕಿನ ರಾಮಾಪುರ ಹೋಬಳಿಯ ಕೆಂಪ್ಪಯ್ಯನಹಟ್ಟಿಯಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್‌ ಆಗಿದೆ.

ಈ ಕುರಿತು ಚಾಮರಾಜನಗರದಲ್ಲಿ ಹನೂರು ಶಾಸಕ ಎಂ.ಆರ್‌.ಮಂಜುನಾಥ್ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಬಾಲಕಿ ಪತ್ರ ಬರೆದ ವಿಚಾರ ನನ್ನ ಗಮನಕ್ಕೂ ಬಂದಿದೆ. ಹಿಂಗಾರು ಮಳೆಯು ವಾಡಿಕೆಗಿಂತ ಶೇ.40 ರಷ್ಟು ಕಡಿಮೆ ಬಿದ್ದಿರುವುದರಿಂದ ನೀರಿನ ತತ್ವಾರ ಉದ್ಭವಿಸಿದೆ. ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ಕಳುಹಿಸಿ ತ್ವರಿತವಾಗಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸೂಚಿಸಿದ್ದೇನೆ. ಉಡುತೊರೆ ಹಳ್ಳದಿಂದ- ಆಲೇರಿ ಕೆರೆಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ಕ್ರಮ ವಹಿಸಿದ್ದೇನೆ ಎಂದರು.