ಸಾರಾಂಶ
ಚನ್ನಪಟ್ಟಣ: ಹೆಣ್ಣು ಮಕ್ಕಳಿಗೆ ಚಿತ್ರಕಲೆಯಲ್ಲಿ ಅಸಕ್ತಿ ಹೆಚ್ಚಿರುತ್ತದೆ. ಅವರಿಗೆ ಉತ್ತಮ ಮಾರ್ಗದರ್ಶನ ಸಿಕ್ಕರೆ ಸಾಧನೆ ಮಾಡುತ್ತಾರೆ ಎಂದು ಕೋಡಂಬಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಹೇಳಿದರು.
ತಾಲೂಕಿನ ಕೋಡಂಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಸಿರ ಚಿತ್ರಕಲಾ ಇನ್‌ಸ್ಟಿಟ್ಯೂಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನದ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ೧೨ನೇ ವಾರ್ಷಿಕೋತ್ಸವದ ಅಸಿರೋತ್ಸವ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ, ಚಿತ್ರಕಲಾ ಪ್ರದರ್ಶನ, ವ್ಯಂಗ್ಯಚಿತ್ರಕಲಾ ಪ್ರದರ್ಶನ ಬಹುಮಾನ ವಿತರಣೆ ಹಾಗೂ ಗೀತಗಾಯನ ಸಮಾರಂಭವನ್ನು ಚಿತ್ರ ಬಿಡಿಸುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು.ಹಿಂದೆ ಹೆಣ್ಣು ಮಕ್ಕಳು ಮನೆಯ ಮುಂದೆ ರಂಗೋಲಿಯ ಚಿತ್ತಾರಗಳನ್ನು ಬಿಡಿಸುವುದರ ಮುಖಾಂತರ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದರು. ಆದರೆ ಇಂದಿನ ಪೀಳಿಗೆ ಚಿತ್ರಕಲೆಯ ಬಗ್ಗೆ ತರಬೇತಿ ಪಡೆದು, ಹಲವಾರು ರೀತಿಯಲ್ಲಿ ಚಿತ್ರಗಳನ್ನು ಕಾಗದ, ಗೋಡೆಗಳ ಮೇಲೆ ಹಾಗೂ ಕಂಪ್ಯೂಟರ್‌ಗಳಲ್ಲಿ ಚಿತ್ರ ಬಿಡಿಸುವುದರ ಮುಖಾಂತರ ಕಲೆಗಳನ್ನು ಅನಾವರಣ ಮಾಡುತ್ತಿದ್ದಾರೆ ಎಂದರು.
ಅಸಿರ ಚಿತ್ರಕಲಾ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕ ಕಾರ್ಯದರ್ಶಿ ರಮೇಶ್ ಮಾತನಾಡಿ, ಮಕ್ಕಳಲ್ಲಿ ಎಳವೆಯಲ್ಲಿಯೇ ಚಿತ್ರಗಳ ಬಗ್ಗೆ ಆಸಕ್ತಿ ಇರುತ್ತದೆ. ಅದನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರೆ, ಅವರು ಉತ್ತಮ ಕಲಾವಿದರಾಗುತ್ತಾರೆ. ಈ ನಿಟ್ಟಿನಲ್ಲಿ ಸಂಸ್ಥೆ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಿದರು.ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ನಾಗರಾಜು, ಶಿಕ್ಷಕರಾದ ಮಂಜೇಶ್, ಆರ್.ಕೃಷ್ಣಮೂರ್ತಿ, ಮಂಜುಳ, ದಿವ್ಯ, ರಶ್ಮೀ, ಅರ್ಪಿತಾ, ಸುಮಂಗಲಾ, ರಾಧ, ಹರ್ಷಿತಾ ಇತರರಿದ್ದರು.
ಪೊಟೋ೧೫ಸಿಪಿಟಿ೨:ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅಸಿರೋತ್ಸವ ಸಮಾರಂಭವನ್ನು ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಉದ್ಘಾಟಿಸಿದರು.