ಎಲ್ಲ ಆಡಳಿತ ರಂಗದಲ್ಲಿ ಹೆಣ್ಣು ಮಕ್ಕಳೇ ಪ್ರಬಲ: ಪುಟ್ಟರಂಗಶೆಟ್ಟಿ

| Published : Nov 16 2024, 12:30 AM IST

ಎಲ್ಲ ಆಡಳಿತ ರಂಗದಲ್ಲಿ ಹೆಣ್ಣು ಮಕ್ಕಳೇ ಪ್ರಬಲ: ಪುಟ್ಟರಂಗಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜೆಎಸ್‌ಎಸ್‌ ಮಹಿಳಾ ಪದವಿಪೂರ್ವ ಕಾಲೇಜಿನ ಎನ್‌ಎಸ್ಎಸ್‌ ವಾರ್ಷಿಕ ಶಿಬಿರವನ್ನು ಹೊಂಡರಬಾಳು ಗ್ರಾಮದ ಅಮೃತಭೂಮಿಯಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹೆಣ್ಣು ಮಕ್ಕಳನ್ನು ಪಡೆಯುವುದು ಅದೃಷ್ಟ ಎಂದು ಭಾವಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಹೊಂಡರಬಾಳು ಗ್ರಾಮದ ಅಮೃತಭೂಮಿಯಲ್ಲಿ ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024-25ನೆ ಸಾಲಿನ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಆದರೆ, ಇನ್ನೂ ಹೆಣ್ಣು ಭ್ರೂಣ ಹತ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇಂದು ಎಲ್ಲ ಆಡಳಿತ ರಂಗದಲ್ಲಿ ಹೆಣ್ಣು ಮಕ್ಕಳೇ ಪ್ರಬಲವಾಗಿದ್ದಾರೆ. ಚಾಮರಾಜ ನಗರದ ಜಿಲ್ಲಾಡಳಿತದಲ್ಲಿ ಬಹುಪಾಲು ಮಹಿಳಾ ಅಧಿಕಾರಿಗಳೇ ಇದ್ದಾರೆ. ಇದು ಸಂತೋಷದ ವಿಚಾರ ಎಂದು ಹೇಳಿದರು.ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಒಳ್ಳೆಯ ಕೆಲಸ ಮಾಡುವಂತವರಾಗಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಉಪನಿರ್ದೇಶಕ ಸಿ.ಮಂಜುನಾಥ್ ಪ್ರಸನ್ನ ಅವರು ಹಳ್ಳಿಗಳನ್ನು ತಲುಪುವ ಸೇವೆ ಬಹಳ ಮುಖ್ಯ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸವೇ ಸೇವೆ ಎನಿಸಿಕೊಳ್ಳುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಎನ್‌ಎಸ್ಎಸ್‌ ಹುಟ್ಟಿದ ಬಗ್ಗೆ ಅದರ ಪ್ರಾಮುಖ್ಯತೆ, ಉದ್ದೇಶಗಳ ಬಗ್ಗೆ ವಿವರವಾಗಿ ತಿಳಿಸಿದರು. ಕನಿಷ್ಠ ವೇತನಾಯೋಗದ ಮಾಜಿ ಅಧ್ಯಕ್ಷ ಆರ್‌. ಉಮೇಶ್‌, ಪ್ರಾಂಶುಪಾಲ ದೇವರಾಜಮೂರ್ತಿ, ಮಂಡ್ಯ ಪಿಇಎಸ್‌ ಕಾಲೇಜಿನ ನೂಡಲ್ ಅಧಿಕಾರಿ ಕ್ಯಾತೆಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿ ಗಿರೀಶ್ ಹರವೆ ಕಾರ್ಯಕ್ರಮವನ್ನು ಆಯೋಜಿಸಿದರು. ಯಶಸ್ವಿನಿ ನಿರೂಸಿದರೆ, ಕುಮಾರಿ ಗಗನ ಸ್ವಾಗತಿಸಿ, ಜಾನ್ಹವಿ ವಂದಿಸಿದರು.