ಹೆಣ್ಣು ಮಕ್ಕಳೇ ದೇಶದ ಶಕ್ತಿ: ಡಾ.ನಾಗಲಕ್ಷ್ಮೀ ಚೌಧರಿ

| Published : Apr 06 2025, 01:52 AM IST

ಹೆಣ್ಣು ಮಕ್ಕಳೇ ದೇಶದ ಶಕ್ತಿ: ಡಾ.ನಾಗಲಕ್ಷ್ಮೀ ಚೌಧರಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಮಕ್ಕಳೇ ದೇಶದ ಶಕ್ತಿ, ಹೆಣ್ಣು ಮಕ್ಕಳು ಸ್ವತಂತ್ರ ನಿರ್ಧಾರ ಮಾಡಬೇಕು. ಸ್ವತಂತ್ರವಾಗಿ ಬದುಕಬೇಕು. ಹೆಣ್ಣು ಮಕ್ಕಳು ಎಲ್ಲರೂ ರಾಜಕೀಯ ಪ್ರವೇಶ ಮಾಡಬೇಕು. ಉತ್ತಮ ರಾಜಕಾರಣಿಗಳನ್ನು ಅಧಿಕಾರಕ್ಕೆ ತರಬೇಕು. ಅದಕ್ಕೆ ಎಲ್ಲರೂ ರಾಜಕೀಯವಾಗಿ ಸಕ್ರಿಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಹೆಣ್ಣು ಮಕ್ಕಳೇ ದೇಶದ ಶಕ್ತಿ, ಹೆಣ್ಣು ಮಕ್ಕಳು ಸ್ವತಂತ್ರ ನಿರ್ಧಾರ ಮಾಡಬೇಕು. ಸ್ವತಂತ್ರವಾಗಿ ಬದುಕಬೇಕು. ಹೆಣ್ಣು ಮಕ್ಕಳು ಎಲ್ಲರೂ ರಾಜಕೀಯ ಪ್ರವೇಶ ಮಾಡಬೇಕು. ಉತ್ತಮ ರಾಜಕಾರಣಿಗಳನ್ನು ಅಧಿಕಾರಕ್ಕೆ ತರಬೇಕು. ಅದಕ್ಕೆ ಎಲ್ಲರೂ ರಾಜಕೀಯವಾಗಿ ಸಕ್ರಿಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹೇಳಿದರು.

ಅವರು ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಎನ್‌ಎಸ್‌ಯುಐ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಶಕ್ತಿ ಸೂಪರ್ ಸ್ತ್ರೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಮನಸ್ಸು ಮಾಡಿದರೇ ಏನನ್ನು ಬೇಕಾದರೂ ಸಾಧಿಸಿ ತೋರಿಸಬಲ್ಲರು ಎಂಬುದನ್ನು ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ತೋರಿಸಿಕೊಟ್ಟಿದ್ದಾರೆ ಎಂದರು.ತುಮಕೂರು ವಿವಿ ಉಪಕುಲಪತಿ ನಾಹಿದ ಜಮ್ ಜಮ್ ಹೆಣ್ಣುಮಕ್ಕಳು ಯಾವಾಗಲೂ ಅವಕಾಶ ಸಿಕ್ಕಾಗ ಬಳಸಿಕೊಳ್ಳಿ. ಪ್ರತಿ ದಿನವೂ ಮಹಿಳಾ ದಿನಾಚರಣೆ ಆಚರಿಸುವಂತಾಗಬೇಕು, ಹೆಣ್ಣು ಮಕ್ಕಳು ಹುಟ್ಟುವ ಮುಂಚೆಯೇ ನಮಗೆ ಕಾನೂನು ರಕ್ಷಣೆ ಇದೆ. ಯಾವ ತಾಯಂದಿರು ನೆಮ್ಮದಿಯಿಂದ ಇರುತ್ತಾರೋ ಅಂದೆ ಮಹಿಳಾ ದಿನಕ್ಕೆ ಅರ್ಥ ಬರುತ್ತದೆ ಎಂದರು. ಪ್ರಾದೇಶಿಕ ಸೇನಾಧಿಕಾರಿ ಭವ್ಯ ನರಸಿಂಹಮೂರ್ತಿ ಮಾತನಾಡಿ, ದೇಶದಲ್ಲಿ ಹೆಣ್ಣು ಮಕ್ಕಳು ಘನತೆಯಿಂದ ಜೀವನ ಮಾಡಲು ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸ್ವಯಂ ರಕ್ಷಣಾ ತರಬೇತಿ ಮುಖ್ಯ. ಹೆಣ್ಣು ಮಕ್ಕಳ ರಕ್ಷಣೆ ಸರಕಾರದ ಜವಾಬ್ದಾರಿ. ಹೆಣ್ಣು ಮಕ್ಕಳು ತಮ್ಮ ಹಕ್ಕು ತಿಳಿಯಬೇಕು. ಎಂದರು. ಶಾಸಕ ಡಾ. ಟಿಬಿ ಜಯಚಂದ್ರ ಮಾತನಾಡಿ ಈ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಅತ್ಯಂತ ಗೌರವ ಇದೆ. ಆದರೆ ಸಮಾನತೆ, ಸ್ವತಂತ್ರ ಇಲ್ಲ. ಸಿದ್ದರಾಮಯ್ಯ ಅವರು ಕೊಟ್ಟಿರುವ ಗ್ಯಾರಂಟಿ ಕಾರ್ಯಕ್ರಮಗಳಿಂದ ಹೆಣ್ಣುಮಕ್ಕಳಿಗೆ ಸ್ವಾಭಿಮಾನ ತಂದುಕೊಟ್ಟಿದೆ ಎಂದರು. ಪಟ್ಟನಾಯಕನಹಳ್ಳಿ ಪಿಎಸ್‌ಐ ಭವಿತ ಮಾತನಾಡಿ ಶಿರಾ ತಾಲೂಕು ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಹೆಣ್ಣು ಮಕ್ಕಳು ತಂದೆ ತಾಯಿಗೆ ಗೌರವ ತರುವ ಕೆಲಸ ಮಾಡಬೇಕು.ಕಾರ್ಯಕ್ರಮದಲ್ಲಿ ಎನ್.ಎಸ್.ಯು.ಐ ಹಾಗೂ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್, ಯಶ್ವಂತ್ ಗೌಡ, ನಟರಾಜ್ ಬರಗೂರು, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಮಣಿಕಂಠ, ಅಂಜನ್ ಕುಮಾರ್, ಹೇಮಂತ್ ಗೌಡ, ಶೋಭಾ ನಾಗರಾಜ್, ಮಂಜುಳಾಬಾಯಿ ಶೇಷಾ ನಾಯ್ಕ, ರಂಗನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಹದೇವಿ, ಲಕ್ಷ್ಮೀದೇವಮ್ಮ, ಆಶಿಕ್ ಗೌಡ, ಮಾಜಿ ಎಪಿಎಂಸಿ ಅಧ್ಯಕ್ಷ ಶಶಿಧರ ಗೌಡ, ನಗರಸಭೆ ಸದಸ್ಯೆ ಸುಶೀಲ ವಿರೂಪಾಕ್ಷ, ಜಯಲಕ್ಷ್ಮೀ, ಲೋಕೇಶ್ ಸೇರಿದಂತೆ ಹಲವರು ಹಾಜರಿದ್ದರು. ೫ಶಿರಾ೧: ಶಿರಾ ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಎನ್‌ಎಸ್‌ಯುಐ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಶಕ್ತಿ ಸೂಪರ್ ಸ್ತಿçà ಕಾರ್ಯಕ್ರಮವನ್ನು ಶಾಸಕ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. ತುಮಕೂರು ವಿವಿ ಉಪಕುಲಪತಿ ನಾಹಿದ ಜಮ್ ಜಮ್, ಪ್ರಾದೇಶಿಕ ಸೇನಾಧಿಕಾರಿ ಭವ್ಯ ನರಸಿಂಹಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.